ಜನತಾದರ್ಶನ: ಬೆಳಗ್ಗೆ ಇದ್ದರೆ ಮಧ್ಯಾಹ್ನಕ್ಕೆ ಬಂದ ಅಧಿಕಾರಿಗಳು

| Published : Oct 11 2023, 12:45 AM IST

ಜನತಾದರ್ಶನ: ಬೆಳಗ್ಗೆ ಇದ್ದರೆ ಮಧ್ಯಾಹ್ನಕ್ಕೆ ಬಂದ ಅಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿ ತಾಲೂಕಿನ ಬನವಾಸಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಗೊಂದಲದ ಗೂಡಾಗಿ ಪರಿಣಮಿಸಿತು. 10.30ಕ್ಕೆ ಆರಂಭಗೊಳ್ಳಬೇಕಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ವಿಳಂಬವಾಗಿ ಆಗಮಿಸಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.

ಕನ್ನಡಪ್ರಭ ವಾರ್ತೆ ಶಿರಸಿ

ತಾಲೂಕಿನ ಬನವಾಸಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಗೊಂದಲದ ಗೂಡಾಗಿ ಪರಿಣಮಿಸಿತು. 10.30ಕ್ಕೆ ಆರಂಭಗೊಳ್ಳಬೇಕಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ವಿಳಂಬವಾಗಿ ಆಗಮಿಸಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.ಇಲ್ಲಿಯ ಜಯಂತಿ ಪ್ರೌಢಶಾಲೆಯ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹಾಗೂ ಇತರ ಜಿಲ್ಲಾಮಟ್ಟದ ಅಧಿಕಾರಿಗಳು ಮಧ್ಯಾಹ್ನದ ವೇಳೆ ಆಗಮಿಸಿದ ಪರಿಣಾಮ ವಿಳಂಬವಾಗಿ ಕಾರ್ಯಕ್ರಮ ಆರಂಭವಾಯಿತು.ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಇದಾಗಿದ್ದರೂ ಕಂದಾಯ ಇಲಾಖೆಯು ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿತ್ತು. ಸಾವಿರಾರು ಜನರನ್ನು ಗಂಟೆಗಟ್ಟಲೇ ಕಾಯಿಸಿದರೂ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆಯನ್ನೂ ಸಹ ಮಾಡಿರಲಿಲ್ಲ. ಇದಕ್ಕೆ ಹಾಜರಾದ ಸಾರ್ವಜನಿಕರು ಅಸಮಾಧಾ‌ನ ವ್ಯಕ್ತಪಡಿಸಿದರು. ಅಲ್ಲದೇ ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬನವಾಸಿಗೆ ಬಂದು 1 ಗಂಟೆಗೂ ಅಧಿಕ ಕಾಲ ಕಾಯುವಂತಾಯಿತು.‌ಜಯಂತಿ ಪ್ರೌಢಶಾಲೆಯ ಸಭಾಭವನ ಇಕ್ಕಟ್ಟಾದ್ದರಿಂದ ಕಿಕ್ಕಿರಿದು ತುಂಬಿತ್ತು. ಅಹವಾಲು ಸಲ್ಲಿಸಲು ಬಂದ ನೂರಾರು ಜನರು ಬಿಸಿಲಿನ ಝಳದ ಮಧ್ಯೆ ನಿಂತುಕೊಂಡು ಅಧಿಕಾರಿಗಳಿಗಾಗಿ ಕಾದರು. ಅಲ್ಲದೇ ಕಾರ್ಯಕ್ರಮದ ಬ್ಯಾನರ್ ಮಧ್ಯಾಹ್ನ ವೇಳೆಗೆ ಕಟ್ಟಿದ್ದು ನಗೆಪಾಟಲೀಗಿಡಾಯಿತು.ಬನವಾಸಿ-ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕಾರಣ ಶಾಸಕ ಶಿವರಾಮ ಹೆಬ್ಬಾರ್ ಜನತಾ ದರ್ಶನದ ಅಧ್ಯಕ್ಷತೆ ವಹಿಸಿದ್ದರು. ಅವರು 11 ಗಂಟೆಯ ವೇಳೆಗೆ ಬನವಾಸಿ ತಲುಪಿದ್ದರಾದರೂ 12-45ರ ವರೆಗೂ ಕಾಯುವಂತಾಯಿತು. ಬನವಾಸಿ, ದಾಸನಕೊಪ್ಪ ಭಾಗದಲ್ಲಿ ಈ ವರ್ಷ ಮಳೆಯ ಕೊರತೆಯಿಂದ ಬೆಳೆ ಹಾನಿ ಆಗಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಅಳಲು ತೋರಿಕೊಳ್ಳಲು ನಿರ್ಧರಿಸಿದ್ದರಾದರೂ, ಕಾರ್ಯಕ್ರಮದ ವಿಳಂಬ ಅವರಲ್ಲಿ ನಿರಾಸೆ ಮೂಡಿಸಿತ್ತು.