ಸ್ವಾಮಿ ವಿವೇಕಾನಂದರ 163ನೇ ಜನ್ಮದಿನಾಚರಣೆ
ಕನ್ನಡಪ್ರಭವಾರ್ತೆ ಪಾವಗಡ
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಶಾಂತಿ ಎಸ್ಎಸ್ ಕೆ ಪದವಿ ಪೂರ್ವ ಕಾಲೇಜು ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ಜೆಎಂಎಫ್‌ಸಿ ನ್ಯಾಯಾಲಯದ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ 163ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಚಾರಣೆ ಮತ್ತು ಸೇರಿದಂತೆ ವಿಶೇಷ ಉಪನ್ಯಾಸ ಹಾಗೂ ನ್ಯಾಯ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಪಟ್ಟಣದ ಶಾಂತಿ ಎಸ್‌ಎಸ್‌ಕೆ ಕಾಲೇಜಿನಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.ಇಲ್ಲಿನ ಶ್ರೀ ರಾಮಕೃಷ್ಣಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಶಿಸ್ತು ಸಂಸ್ಕಾರ ರಾಷ್ಟ್ರ ಪ್ರೇಮದ ಜತೆಗೆ ಸ್ವಾಮಿ ವಿವೇಕಾನಂದರ ಅದರ್ಶ ಹಾಗೂ ತತ್ವಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ಪಾಲಿಸುವಂತೆ ಕರೆ ನೀಡಿದರು. ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾದೇಶ ಅವರು ಕಾರ್ಯಕ್ರಮದ ಉದ್ಟಾಟನೆ ನೆರವೇರಿಸಿದರು. ತಾಲೂಕು ಕಾನೂನು ಸೇವಾ ಸಮಿತಿ, ಕಾರ್ಯದರ್ಶಿ ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶರಾದ ಸಿ.ಎನ್.ಮುನಿರತ್ನಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಎಸ್.ಎಸ್.ಕೆ ಸಂಘದ ಅಧ್ಯಕ್ಷರಾದ ಜಿ.ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್‌ಕೆ ಸಂಘದ ಉಪಾಧ್ಯಕ್ಷ, ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ಕಾಲೇಜಿನ ಬೋಧಕ/ಬೋಧಕೇತರ ಸಿಬಂದಿ ಭಾಗವಹಿಸಿದ್ದರು.