ಜೇವರ್ಗಿ: ಮಾಳಿಂಗರಾಯರ ಜಾತ್ರಾ ಮಹೋತ್ಸವ

| Published : Jan 12 2024, 01:46 AM IST

ಸಾರಾಂಶ

ಜೇವರ್ಗಿ ಪಟ್ಟಣದ ಕನಕದಾಸ ಚೌಕ್‌ನಲ್ಲಿರುವ ಮಾಳಿಂಗರಾಯ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಪಟ್ಟಣದ ಕನಕದಾಸ ಚೌಕ್‌ನಲ್ಲಿರುವ ಮಾಳಿಂಗರಾಯ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು.

ಉತ್ಸವದ ನಿಮಿತ್ತ ಬೆಳಗ್ಗೆ ಮಾಳಿಂಗರಾಯರಿಗ ವಿಶೇಷ ಪೂಜೆ ಅಲಂಕಾರ ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ತಾಲ್ಲೂಕು ಸೇರಿದಂತೆ ವಿವಿದ ಕಡೆಯಿಂದ ಸುಮಾರು 21 ಪಲ್ಲಕ್ಕಿಗಳು ಆಗಮಿಸಿದ್ದವು. ಬೆಳಗ್ಗೆ 11 ಗಂಟೆಗೆ ಪಟ್ಟಣದಲ್ಲಿ 21 ಪಲ್ಲಕ್ಕಿಗಳೊಂದಿಗೆ ಮಾಳಿಂಗರಾಯರ ಭವ್ಯ ಮೆರವಣಿಗೆ ನಡೆಯಿತು. ಉತ್ಸವದಲ್ಲಿ ನೂರಾರು ಮಹಿಳೆಯರು ಕುಂಭ ಹೋತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡೊಳ್ಳಿನ ಕುಣಿತ, ಬಾಜಾಭಜಂತ್ರಿ ಮೆರವಣಿಗೆಗೆ ರಂಗು ತಂದಿತ್ತು. ಉತ್ಸವ ನಿಮಿತ್ತ ಶ್ರೀ ಮಾಳಿಂಗರಾಯ ದೇವಸ್ಥಾನದಲ್ಲಿ 11 ದಿನಗಳ ಪರ್ಯಂತ ಸಂಜೆ ಸಜ್ಜಲಗುಡ್ಡದ ಶಿವಶರಣೆ ಶಿವಶರಣಮ್ಮ ತಾಯಿ ಪುರಾಣವನ್ನು ಗುಬ್ಬೆವಾಡದ ಶ್ರೀಕನ್ನಯ್ಯ ಮಹಾರಾಜ ನಡೆಸಿಕೊಟ್ಟರು.

ವಿವಿಧೆಡೆಯಿಂದ ಬಂದ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ಮಾಳಿಂಗರಾಯ ದೇವಸ್ಥಾನದ ಸಮಿತಿ ಅಧ್ಯಕ್ಷ ಶರಣಗೌಡ ಸರಡಗಿ, ರಾಮಣ್ಣ ಪೂಜಾರಿ, ರಾಜು ರದ್ದೆವಾಡಗಿ, ಲಿಂಗರಾಜ ಮಾಸ್ತರ, ಚಂದ್ರಶೇಖರ ಕುನ್ನೂರ, ನಿಂಗಣ್ಣ ರದ್ದೆವಾಡಗಿ, ಕಾಮಣ್ಣ ಪೂಜಾರಿ, ಮುಂಗಪ್ಪ ಹಿರೇಪೂಜಾರಿ, ಸೋಮಶೇಖರ ಸರಡಗಿ, ಶಂಕರ ಮಾಸ್ತರ ಕುನ್ನೂರ, ಗುಂಡು ಕುನ್ನೂರ, ಮಾಳಪ್ಪ ಪೂಜಾರಿ, ನಿಂಗು ಟಣಕೆದಾರ ಸೇರಿದಂತೆ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು.