ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿತುಳು ಭಾಷೆ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ತುಳುಕೂಟ ಉಡುಪಿ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆಯಾಗಿದ್ದಾರೆ.ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ತುಳುಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಸ್ಥಾಪಕಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂರು, ಕೋಶಾಧಿಕಾರಿಯಾಗಿ ಚೈತನ್ಯ ಎಂ.ಜಿ., ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ಮನೋಹರ್ ಶೆಟ್ಟಿ ತೋನ್ಸೆ, ದಿವಾಕರ್ ಸನಿಲ್, ರಶ್ಮಿ ಶೆಣೈ, ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ಎಸ್. ದೇವಾಡಿಗ, ಸಂತೋಷಕುಮಾರ್, ಪ್ರಸನ್ನ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಶೆಟ್ಟಿ ಮೂಡನಿಡಂಬೂರು, ವಿದ್ಯಾಸರಸ್ವತಿ, ಉದಯಕುಮಾರ್ ತೆಂಕನಿಡಿಯೂರು ಅವರು ನೇಮಕಗೊಂಡಿದ್ದಾರೆ.ಗೌರವ ಸಲಹೆಗಾರರಾಗಿ ವಿಶ್ವನಾಥ ಶೆಣೈ, ಮುರಳೀಧರ ಉಪಾಧ್ಯಾಯ, ಡಾ. ಗಣನಾಥ ಎಕ್ಕಾರ್, ಎಸ್. ಎ. ಕೃಷ್ಣಯ್ಯ, ಬನ್ನಂಜೆ ಬಾಬು ಅಮೀನ್, ಮನೋರಮಾ ಶೆಟ್ಟಿ, ಎಸ್. ವಿ. ಭಟ್, ರವಿಶಂಕರ್ ರೈ, ಶಾಂತಾರಾಮ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ತುಳು ಮಿನದನ ಸಂಚಾಲಕರಾಗಿ ಡಾ. ವಿ.ಕೆ. ಯಾದವ್, ತುಳುವ ನಡಕೆ ಸಂಚಾಲಕರಾಗಿ ದಯಾನಂದ ಕೆ., ತುಳು ಪಠ್ಯ ಪುಸ್ತಕ ಸಂಚಾಲಕರಾಗಿ ವಿಶ್ವನಾಥ ಬಾಯರಿ, ನಿಟ್ಟೂರು ತುಳು ಭಾವಗೀತೆ ಸ್ಪರ್ಧೆ ಸಂಚಾಲಕರಾಗಿ ಜಯರಾಮ್ ಶೆಟ್ಟಿಗಾರ್ ಮಣಿಪಾಲ, ಆಟಿಕೂಟ ಸಂಚಾಲಕಿಯಾಗಿ ಪೂರ್ಣಿಮಾ ಶೆಟ್ಟಿ ಮತ್ತು ತಾರಾ ಸತೀಶ್, ಆಟಿದ ಕಷಾಯ ಸಂಚಾಲಕರಾಗಿ ವಿವೇಕಾನಂದ ಎನ್., ಸೋಣದ ಸೇಸೆ ಸಂಚಾಲಕಿಯಾಗಿ ವೇದಾವತಿ ಶೆಟ್ಟಿ, ಮದರೆಂಗಿದರಂಗ್ ಸಂಚಾಲಕಿಯಾಗಿ ಯಶೋದ ಕೇಶವ್, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕಿಯಾಗಿ ಶಿಲ್ಪಾ ಜೋಶಿ, ಕೆಮ್ತೂರು ತುಳುನಾಟಕ ಸ್ಪರ್ಧೆ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ತುಳು ಗೊಬ್ಬಲು ಸ್ಪರ್ಧೆ ಸಂಚಾಲಕರಾಗಿ ರತ್ನಾಕರ್ ಇಂದ್ರಾಳಿ ಮತ್ತು ಯು. ಎಸ್. ಉಮ್ಮರ್, ಮಾಧ್ಯಮ ಸಂಚಾಲಕಿಯಾಗಿ ಭಾರತಿ ಟಿ. ಕೆ. ಅವರನ್ನು ನೇಮಿಸಲಾಗಿದೆ. ಅಲ್ಲದೆ, 40 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.