ಹಿರಿಯ ನಾಗರೀಕರಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಅಗತ್ಯ

| Published : Aug 09 2025, 02:02 AM IST

ಹಿರಿಯ ನಾಗರೀಕರಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿ ಮತ್ತು ಆಫ್ರಿಕಾ ದೇಶದ ಹಿರಿಯ ನಾಗರೀಕರು ಮಾರಥಾನ್‌‌ರ್ಯಾಲಿ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಕೃತಿ ಚಿಕಿತ್ಸೆ ಮತ್ತು ಯೋಗವನ್ನು ದೈನಂದಿನ ಜೀವನದಲ್ಲಿ ನಿಯಮಿತವಾಗಿ ಅಭ್ಯಾಸ ಮಾಡಿದ್ದರೆ ಹಿರಿಯ ನಾಗರೀಕರು ಆರೋಗ್ಯಕರ ಜೀವನ ನಡೆಸಬಹುದು ಎಂದು ತಜ್ಞೆ ಡಾ. ಶ್ರೀಮತಿ ಕುಶಾಲ್‌ ಹೇಳಿದರು.

ಜಯಲಕ್ಷ್ಮೀಪುರಂ ಹಿರಿಯ ನಾಗರಿಕರ ಮಂಡಳಿಯು ಏರ್ಪಡಿಸಿದ್ದ ಆರೋಗ್ಯ ಚರ್ಚೆಯಲ್ಲಿ ಮಾತನಾಡಿದ ಅವರು, ಪಶ್ಚಿ ಮತ್ತು ಆಫ್ರಿಕಾ ದೇಶದ ಹಿರಿಯ ನಾಗರೀಕರು ಮಾರಥಾನ್‌‌ರ್ಯಾಲಿ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಭಾರತದಲ್ಲಿ ಕೆಲವೇ ಕೆಲವು ಹಿರಿಯ ನಾಗರೀಕರು ಮಾತ್ರ ಪಾಲ್ಗೊಳ್ಳುತ್ತಾರೆ ಎಂದರು.

ಭಾರತೀಯರು ತಮ್ಮ ಆರೋಗ್ಯ ಮತ್ತು ಜೀವನ ಶೈಲಿಯ ಪ್ರಕೃತಿ ಚಿಕಿತ್ಸೆಯ ಅಭ್ಯಾಸಗಳ ಬಗ್ಗೆ ಗಂಭೀರವಾಗಿಲ್ಲದ ಕಾರಣ ಅವರ ದೈಹಿಕ ಮತ್ತು ಮಾನಸಿಕ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಹಿರಿಯ ನಾಗರೀಕರು ಬೇಗ ಬೋಜನ ಮಾಡುವುದು, ಮೊಬೈಲ್‌ಬಳಕೆ ಕಡಿಮೆ ಮಾಡುಉದು, ನಕಾರಾತ್ಮಕ ಆಲೋಚನೆ ಬಿಡುವುದು, ಹೃದಯ ಮತ್ತು ಶ್ವಾಸಕೋಶಗಳ ಸಂಬಂಧಿತ ಯಾವುದೇ ಕಾಯಿಲೆಗಳಿಂದ ಕಾಪಾಡುವುದಕ್ಕೆ ಯೋಗ ಮತ್ತು ಪ್ರಾಣಾಯಾಮಗಳ ಅಭ್ಯಾಸ ಅಗತ್ಯ ಎಂದರು.

ಮಂಡಳಿ ಅಧ್ಯಕ್ಷ ಡಾ.ಎಚ್‌.ಎಂ. ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ ಅಧ್ಯಕ್ಷ ಗೌಡಪ್ಪ, ಕಾರ್ಯದರ್ಶಿ ಕೆ.ಎಸ್‌. ಕೃಷ್ಣ, ಪಿ.ಎನ್‌. ಶ್ರೀಧರ್‌, ಮಂಡಳಿ ಉಪಾಧ್ಯಕ್ಷ ಕೆ.ವಿ. ರಾಮನಾಥ್‌, ಜಯಪಾಲ್‌, ವಿ.ಎನ್‌. ಆಚಾರ್‌, ಬಿ.ಎನ್‌. ಅರುಣ್‌ಕುಮಾರ್‌, ಜಿ.ಎಸ್‌. ಗಿರಿಗೌಡ, ಸಣ್ಣ ನಿಂಗೇಗೌಡ, ಕೆ. ಶಂಕರೇಗೌಡ, ಎಸ್‌.ವಿ. ವೆಂಕಟೇಶಯ್ಯ, ಡಿ. ಶ್ರೀನಿವಾಸ್‌, ಎಚ್‌.ಸಿ. ಶಂಕರ್‌, ಕೆ.ಎಂ. ನಾಗರಾಜು, ಎಸ್‌. ಸುರೇಶ್‌, ಬಾನುರೇಖಾ, ನಿರ್ಮಲಾ, ಸುಶೀಲಾ ಮರಿಗೌಡ ಮೊದಲಾದವರು ಇದ್ದರು.