ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾಜಿ ಶಾಸಕ ಎಸ್.ಜಯಣ್ಣ ಅವರಿಗೆ ಉನ್ನತ ಹುದ್ದೆಗೇರುವ ಅರ್ಹತೆ ಇದ್ದರೂ ಅವರ ವ್ಯಕ್ತಿತ್ವ ಮತ್ತು ಅರ್ಹತೆಗೆ ತಕ್ಕ ಸ್ಥಾನ ಸಿಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಅಗಲಿದ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು, ನನಗೂ ಜಯಣ್ಣನಿಗೂ ದೀರ್ಘ ಗೆಳೆತನದ ಸಂಬಂಧ, ವಿದ್ಯಾರ್ಥಿ ದೆಸೆಯಿಂದಲೇ ಆತ್ಮೀಯ ಸಂಬಂಧವಿತ್ತು. ನನ್ನ ಯಾವುದೇ ತೀರ್ಮಾನಕ್ಕೂ ಜಯಣ್ಣ ಬದ್ಧರಾಗುತ್ತಿದ್ದ, ರಾಜಕೀಯದಲ್ಲಿ ಅಪರೂಪದ ವ್ಯಕ್ತಿಯಾಗಿದ್ದರು, ಮಾತು ಕಡಿಮೆ, ಸೌಮ್ಯ ಸ್ವಭಾವ, ನಂಬಿಕಸ್ಥ ಗೆಳೆಯ, ಎರಡು ಬಾರಿ ಶಾಸಕರಾಗಿದ್ದರೂ ಅವರ ಅರ್ಹತೆಗೆ ತಕ್ಕ ಸ್ಥಾನ ಸಿಗಲಿಲ್ಲ ಎಂದರು.
ಜಯಣ್ಣ ಒಬ್ಬ ಅಜಾತ ಶತ್ರು, ರಾಜಕೀಯದಲ್ಲಿ ಎಂದೆಂದಿಗೂ ನನ್ನನ್ನೆ ಹಿಂಬಾಲಿಸಿದ್ದರು. ಎಷ್ಟೇ ಪ್ರಚೋದನೆ ಬಂದರೂ ಸಿದ್ಧಾಂತ ಬಿಟ್ಟುಕೊಡುತ್ತಿರಲಿಲ್ಲ, ಯಾವುದೇ ಆಸೆ ಆಮಿಷಗಳಿಗೆ ಒಳಗಾದವರಲ್ಲ, ಅವರೊಬ್ಬ ಅಜಾತಶತ್ರು, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಅಭಿವೃದ್ಧಿಪರ ಚಿಂತಕರಾಗಿದ್ದರು. ಜಯಣ್ಣರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿ ದೊರಕಲಿ ಎಂದರು.ಅವರೊಬ್ಬ ಅಜಾತ ಶತ್ರು, ಸರಳತೆಯ ಪ್ರತೀಕ, ನಮ್ಮೆಲ್ಲರಿಗೂ ದೊಡ್ಡಣ್ಣನಾಗಿದ್ದರು, ಸರಳ ವ್ಯಕ್ತಿತ್ವದ ರಾಜಕಾರಣಿ, ಅವರ ಅಗಲಿಕೆ ನೋವನ್ನು ಮರೆಸುವ ಶಕ್ತಿ ಅವರ ಬೆಂಬಲಿಗರು, ಅಭಿಮಾನಿಗಳಿಗೆ ದೊರಕುವಂತಾಗಲಿ.
-ಎ.ಆರ್. ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ
ಅಗಲಿದ ಆಪ್ತ ಗೆಳೆಯನಿಗೆ
ಅಂತಿಮ ನಮನ ಸಲ್ಲಿಸಿದ ಸಿಎಂಎನ್. ನಾಗೇಂದ್ರಸ್ವಾಮಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲದ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಅವರಿಗೆ ಆಪ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅಂತಿಮ ನಮನ ಸಲ್ಲಿಸುವ ಮೂಲಕ ಸರ್ಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರಕ್ಕೆ ಗೌರವ ಪೂರ್ವಕ ನಮನ ಸಲ್ಲಿಸಿದರು.ಜಯಣ್ಣ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ಗುಚ್ಛವಿಟ್ಟು ನಮನ ಸಲ್ಲಿಸುತ್ತಿದ್ದಂತೆ ಮುಖ್ಯಮಂತ್ರಿಗಳು ಭಾವೋದ್ವೇಗಕ್ಕೊಳಗಾದರು. ಜಯಣ್ಣ ಅವರೊಂದಿಗೆ ಸುದೀರ್ಘ ರಾಜಕೀಯ ಸಂಬಂಧ ಹೊಂದಿದ್ದ ಮುಖ್ಯಮಂತ್ರಿ ಅವರಿಗೆ ಇತ್ತಿಚೆಗೆ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಕ್ಯಾಬಿನೆಟ್ ಸ್ಥಾನ ಕಲ್ಪಿಸಿ ಆದೇಶ ಹೊರಡಿಸಿದ್ದರು. ಆದರೆ ಎಸ್.ಜಯಣ್ಣ ಅವರು ನನಗೆ ಆಯೋಗದ ಸ್ಥಾನ ಬೇಡ ಎಂದು ಸಿದ್ದರಾಮಯ್ಯ ತಿರಸ್ಕರಿಸಿದ್ದರು. ಬಳಿಕ ಜಯಣ್ಣ ಅವರನ್ನು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಕಾಲ ಪಕ್ಷದ ಕಾರ್ಯಕರ್ತರು ಹಾಗೂ ಜಯಣ್ಣ ಆಪ್ತರೊಂದಿಗೆ ಚರ್ಚಿಸಿದರು. ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದ ಮಾಜಿ ಶಾಸಕ ಎಸ್.ಜಯಣ್ಣ ಅವರಿಗೆ ಅಂತಿಮ ನಮನ ಸಲ್ಲಿಸಲು ಕೊಳ್ಳೇಗಾಲಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿದ್ದರಾಮಯ್ಯ ಅವರು ಜಯಣ್ಣ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.ಜಯಣ್ಣ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ನಮಿಸಿದರು. ಇದೇ ವೇಳೆ ಮೃತ ಜಯಣ್ಣ ಅವರಿಗೆ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ನಮನದೊಂದಿಗೆ ಅಗಲಿದ ಗೆಳಯನ ಜಯಣ್ಣರನ್ನು ಸಿಎಂ ಸ್ಮರಿಸಿದರು.
ಸಚಿವರಾದ ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ಎ.ಆರ್.ಕೖಷ್ಣಮೂರ್ತಿ, ಹನೂರು ಶಾಸಕ ಮಂಜುನಾಥ್, ಡಾ. ತಿಮ್ಮಯ್ಯ, ಮಾಜಿ ಸಚಿವ ಎನ್ ಮಹೇಶ್, ಮಾಜಿ ಶಾಸಕ ಅಶ್ವಿನ್ ಕುಮಾರ್, ಆರ್. ನರೇಂದ್ರ, ಬಾಲರಾಜು, ಎಚ್ ಕೆ ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿಗಳಾದ ಮಹಾನಂದ, ಪುಷ್ಪ ಅಮರ್ ನಾಥ್, ನಗರಸಭೆ ಮಾಜಿ ಉಪಾಧ್ಯಕ್ಷ ಹರ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಲಹಳ್ಳಿ ತೋಟೇಶ್, ಪಿಎಸಿಸಿ ಬ್ಯಾಂಕ್ ಅದ್ಯಕ್ಷ ಮಹದೇವಪ್ಪ, ನಗರಸಭೆ ಅದ್ಯಕ್ಷ ರೇಖಾ ರಮೇಶ್, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಬಸ್ತಿಪುರ ಶಾಂತರಾಜು, ಎ ಪಿ ಶಂಕರ್, ಅಕ್ಮಲ್ ಪಾಶಾ, ರಾಘವೇಂದ್ರ, ಸ್ವಾಮಿ ನಂಜಪ್ಪ, ಸಿಗ್ ಬತ್ ಉಲ್ಲಾ, ಪೈರೋಜ್, ರಾಜೇಂದ್ರ, ಕಿನಕಹಳ್ಳಿ ರಾಚಯ್ಯ, ಚೇತನ್ ದೊರೈರಾಜು, ಪ್ರಕಾಶ್, ಲಿಂಗರಾಜು ಸೇರಿದಂತೆ ಅನೇಕ ಮುಖಂಡರು ಜಯಣ್ಣ ಅವರಿಗೆ ಪಕ್ಷಾತೀತವಾಗಿ ಅಂತಿಮ ನಮನ ಸಲ್ಲಿಸಿದರು.‘ಅನುಗ್ರಹ’ದಲ್ಲಿರಲು ದೇವರ ಅನುಗ್ರಹ ಸಿಗಲಿಲ್ಲ..!:
ನಾಳೆ ಇದ್ದ ಜಯಣ್ಣರ ಅನುಗ್ರಹ ನಿವಾಸದ ಗೃಹಪ್ರವೇಶ । ಸ್ವಂತ ಮನೆಗೆ ಪ್ರವೇಶಿಸುವ ಮುನ್ನವೇ ನಿಧನಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾಜಿ ಶಾಸಕ ಎಸ್ ಜಯಣ್ಣ ಅವರು ತಮ್ಮ ಅನುಗ್ರಹ ಹೆಸರಿನಡಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹಪ್ರವೇಶಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಡಿ. 12ರಂದು ಅದ್ಧೂರಿಯಾಗಿ ಗೃಹಪ್ರವೇಶ ಸಮಾರಂಭವೂ ಇತ್ತು. ಆದರೆ 12ರಂದು ಮುಖ್ಯಮಂತ್ರಿ ದಿನಾಂಕ ಸಿಗದ ಕಾರಣ ಕೊಳ್ಳೇಗಾಲಕ್ಕೆ ಇತ್ತೀಚೆಗೆ ಡಿ.8ರಂದು ಆಗಮಿಸಿದ್ದ ಸಿದ್ದರಾಮಯ್ಯ ತಮ್ಮ ಪೋಟೊ ಇದ್ದ ಅನುಗ್ರಹ ಹೆಸರಿನ ಫಲಕ ಅಳವಡಿಸಿ ತೆರಳಿದ್ದರು. ಆದರೆ ಗೃಹಪ್ರವೇಶಕ್ಕೆ 2 ದಿನ ಬಾಕಿ ಇರುವಾಗಲೇ ಡಿ.10ರ ಬೆಳಗ್ಗೆ ಜಯಣ್ಣ ಹೃದಯಾಘಾತದಿಂದ ನಿಧನರಾದರು.ಸ್ವಂತ ಮನೆಯಲ್ಲಿ ನೆಲೆಯೂರಲಿಲ್ಲ:
ಜಯಣ್ಣ ಅವರು 1993ರಿಂದಲೂ ತಮಗೊಂದು ಸ್ವಂತ ಗೂಡು ನಿರ್ಮಿಸಿಕೊಂಡಿರಲಿಲ್ಲ, ಈ ಹಿಂದೆ ಅಚ್ಚಗಾಳ್ ವಸತಿ ಗೃಹದಲ್ಲಿ, ಇತರೆ ಬಾಡಿಗೆ ಮನೆ ಮತ್ತು ಹಿತೈಷಿಗಳ ಮನೆಯಲ್ಲಿ, ಪ್ರವಾಸಿ ಮಂದಿರಗಳಲ್ಲೆ ಕಾಲ ಕಳೆದಿದ್ದ ಜಯಣ್ಣ ಅವರು, ಕೊನೆಗೂ ತಮಗೊಂದು ಮನೆ ನಿರ್ಮಿಸಲು ಪಣತೊಟ್ಟು ಅನುಗ್ರಹ ಎಂಬ ಹೆಸರಿನಡಿ ಕಟ್ಟಡ ಪೂರ್ಣಗೊಳಿಸಿದರು. ಆದರೆ ಅನುಗ್ರಹ ಹೆಸರಿನ ಮನೆ ನಿರ್ಮಾಣವಾಯಿತಾದರೂ ತಮ್ಮ ಸ್ವಂತ ಮನೆಗೆ ಪ್ರವೇಶಿಸಲು ದೇವರ ಅನುಗ್ರಹವಾಗಲಿಲ್ಲ, ಹಾಗಾಗಿ ಹಠಾತ್ ನಿಧನರಾದರು. ವಿಧಿ ಜಯಣ್ಣ ಅವರೇ ನಿರ್ಮಿಸಿದ ಸ್ವಂತ ಮನೆಗೆ ತೆರಳಲು ಅವಕಾಶ ನೀಡಲಿಲ್ಲ ಎನ್ನಲಡ್ಡಿ ಇಲ್ಲ.ಅಂದಿದ್ದನ್ನು ಸಾಧಿಸುವ ಛಲ, ಮುಂದಾಲೋಚನೆ ಹೊಂದಿದ್ದ ನಾಯಕ:
ಮಾಜಿ ಶಾಸಕ ಜಯಣ್ಣ ತಾವು ಅಂದುಕೊಂಡಿದ್ದನ್ನು ತಡವಾದದೂ ಸಾಧಿಸುವ ಛಲವಿತ್ತು ಮಾತ್ರವಲ್ಲ, ತಮ್ಮಂದ ಕಾರ್ಯಕರ್ತರಿಗೆ ಸ್ಥಾನ, ಮಾನಕೊಡಿಸುವ ವಿಚಾರದಲ್ಲೂ ಹಠಮಾರಿ ಸ್ವಭಾವ ಹೊಂದಿದ್ದೂ ಅಂದು ಕೊಂಡಿದ್ದನ್ನು ಸಾಧಿಸುವ ಛಲ ಅವರಲ್ಲಿ ಮನೆ ಮಾಡಿತ್ತು. ಎಸ್ ಜಯಣ್ಣ ಅವರು ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಹದೇವಿ ಅವರನ್ನು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅನೇಕ ವಿರೋಧ ಬಂದರೂ ಜಗ್ಗದೇ ಕೂರಿಸಿದರು. ಅಂದು ಕೃಷ್ಣವೇಣಿ ತಮಗೆ ಅದ್ಯಕ್ಷ ಗಾದಿ ಸಿಗುತ್ತೆಂದು ಕಾದಿದ್ದರು, ಆದರೆ ಜಯಣ್ಣ ಅವರ ಛಲದ ಪ್ರಭಾವ ಬೀಮನಗರದ ಮಹದೇವಿಯವರಿಗೆ ನಗರಸಭೆ ಅಧ್ಯಕ್ಷ ಸ್ಥಾನ ಲಭಿಸುವಂತಾಯಿತು. ಇನ್ನುಸುಮ ಸುಬ್ಬಣ್ಣ ಅಧ್ಯಕ್ಷ ಗಾದಿಗೆ ಕೂರಿಸುವ ವಿಚಾರದಲ್ಲಿ ಪೈಪೋಟಿಯಲ್ಲಿದ್ದರೂ ಸಹಾ ತಮ್ಮ ಆಪ್ತ ವಲಯದ ರೇಖಾ ರಮೇಶ್ ಅವರನ್ನೆ ಅಂದು ಅಧ್ಯಕ್ಷರನ್ನಾಗಿಸಿದ್ದರು. ಅಲ್ಲದೆ ಸುಭಾನ್(ಮಲ್ಲಿಕಾರ್ಜುನ್) ಅವರನ್ನು ಮತ್ತು ತಮ್ಮ ಆಪ್ತ ವಲಯದ ಕಿಜರ್ ಪಾಶಾ ಅವರ ಪತ್ನಿಯನ್ನುನಗರಸಭೆ ಅಧ್ಯಕ್ಷರನ್ನಾಗಿಸಲು ತಮ್ಮ ಪ್ರಭಾವ ಬಳಸಿದ್ದರು. ಹಿಂದೊಮ್ಮೆ ಅನೇಕ ವಿರೋಧದ ನಡುವೆ ಬಿಜೆಪಿ ಜೊತೆ ಮೈತ್ರಿ ಸಾಧಿಸಿ ಸುಬ್ಬಣ್ಣ ಅವರಿಗೆ ಅಧಿಕಾರ ದೊರಕಿಸುವಲ್ಲಿ ಸ್ಪಂದಿಸಿದ್ದನ್ನ ಸ್ಮರಿಸಬಹುದು.ತಮ್ಮ ಆಪ್ತ ವಲಯದ ಶಿವಮಲ್ಲು ಅವರ ಪತ್ನಿ ಮಂಗಳಗೌರಿಯನ್ನು ಅಧ್ಯಕ್ಷರನ್ನಾಗಿಸುವಲ್ಲಿ, ಮುಡಿಗುಂಡದ ನಂಜುಂಡರರನ್ನು ಉಪಾಧ್ಯಕ್ಷರನ್ನಾಗಿಸಿದ್ದರು. ಕೊಳ್ಳೇಗಾಲದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ಕನಸು ಕಂಡಿದ್ದರು. ಸರ್ಕಾರಿ ಆಸ್ಪತ್ರೆ, ಬಸ್ ಡಿಪೋ ಸೇರಿದಂತೆ ಅನೇಕ ರೈತ-ಪರ ಕೆಲಸಕ್ಕೆ ಸ್ಪಂದಿಸಿ ಅಡಿಪಾಯ ಹಾಕಿದ್ದು ಜಯಣ್ಣ ಅವರ ಮುಂದಾಲೋಚನೆಯಾಗಿತ್ತು. ಜಯಣ್ಣ ಸೌಮ್ಯ ಸ್ವಭಾವಿ ಮಾತ್ರವಲ್ಲ ಅವರೊಬ್ಬ ಅಭಿವೃದ್ಧಿಪರ ಚಿಂತಕರೂ ಆಗಿದ್ದರು ಎಂದರು.