ಜಯಂತ್ಯುತ್ಸವಕ್ಕೆ ಡಾ. ಕುಮಾರ ಮಹಾರಾಜರ ಕಡೆಗಣನೆ, ಗ್ರಾಮಸ್ಥರ ಪ್ರತಿಭಟನೆ

| Published : Mar 01 2024, 02:21 AM IST

ಜಯಂತ್ಯುತ್ಸವಕ್ಕೆ ಡಾ. ಕುಮಾರ ಮಹಾರಾಜರ ಕಡೆಗಣನೆ, ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂತ ಸೇವಾಲಾಲ ಮಹಾರಾಜರ ೨೮೫ ನೇ ಜಯಂತ್ಯುತ್ಸವ ಕಾರ್ಯ,ಕ್ರಮಕ್ಕೆ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿನ ಗವಿಸಿದ್ದೇಶ್ವರ ಮಠದ ಡಾ.ಕುಮಾರ ಮಹಾರಾಜರನ್ನು ಕಡೆಗಣಿಸಿದ್ದಕ್ಕೆ ಆದರಹಳ್ಳಿ ಗ್ರಾಮಸ್ಥರು ಮತ್ತು ಲಂಬಾಣಿ ಸಮಾಜದವರು ಮರಿಯಮ್ಮ ದೇವಸ್ಥಾನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಲಕ್ಷ್ಮೇಶ್ವರ: ಪಟ್ಟಣದಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ ಮಹಾರಾಜರ ೨೮೫ ನೇ ಜಯಂತ್ಯುತ್ಸವ ಕಾರ‍್ಯಕ್ರಮಕ್ಕೆ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿನ ಗವಿಸಿದ್ದೇಶ್ವರ ಮಠದ ಡಾ.ಕುಮಾರ ಮಹಾರಾಜರನ್ನು ಕಡೆಗಣಿಸಿದ್ದಕ್ಕೆ ಆದರಹಳ್ಳಿ ಗ್ರಾಮಸ್ಥರು ಮತ್ತು ಲಂಬಾಣಿ ಸಮಾಜದವರು ಮರಿಯಮ್ಮ ದೇವಸ್ಥಾನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಚನ್ನಪ್ಪ ಲಮಾಣಿ ಮಾತನಾಡಿ, ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ ಜಯಂತಿ ಕಾರ‍್ಯಕ್ರಮಕ್ಕೆ ಆದರಳ್ಳಿ ಗ್ರಾಮದಲ್ಲಿನ ಸಿದ್ದೇಶ್ವರ ಗವಿಮಠದ ಡಾ. ಕುಮಾರ ಮಹಾರಾಜರನ್ನು ಆಹ್ವಾನಿಸದೆ ಅವರಿಗೆ ಅವಮಾನ ಮಾಡಿದ್ದಾರೆ. ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಬಂಜಾರ ಸಮಾಜದ ಅಧ್ಯಕ್ಷರು ಹಾಗೂ ಕೆಲ ಪ್ರಮುಖರು ಸೇರಿ ಶ್ರೀಗಳ ಹೆಸರಿಗೆ ಮಸಿ ಬಳಿಯುವ ಕಾರ‍್ಯ ಮಾಡುತ್ತಿರುವುದು ಖಂಡನೀಯ. ಲಕ್ಷ್ಮೇಶ್ವರ ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಶಿವಣ್ಣ ಲಮಾಣಿ ಅವರು ರಾಜಕೀಯ ಮಾಡುವ ಕಾರ‍್ಯ ಮಾಡುತ್ತಿದ್ದಾರೆ. ಸಮಾಜದ ಸೇವಾಲಾಲರ ಜಯಂತಿ ಕಾರ‍್ಯಕ್ರಮದಲ್ಲಿ ರಾಜಕೀಯ ಮಾಡಬಾರದು. ಕುಮಾರ ಮಹಾರಾಜರಿಗೆ ಆದ ಅನ್ಯಾಯದ ವಿರುದ್ಧ ಹಾಗೂ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಬಂಜಾರ ಲಮಾಣಿ ಸಂಘದ ಅಧ್ಯಕ್ಷರು ಆದರಹಳ್ಳಿ ಬಂದು ಸ್ಪಷ್ಟೀಕರಣ ನೀಡುವವರೆಗೆ ಧರಣಿಯನ್ನು ಕೈಬಿಡುವ ಮಾತೆ ಇಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ದುರಗಪ್ಪ ಲಮಾಣಿ ಮಾತನಾಡಿ, ಸಮಾಜದಲ್ಲಿ ಯಾವುದೇ ದ್ವೇಷ ಇರಲಿ. ಸಮಾಜ ಸಂಘಟನೆಯ ಸಂದರ್ಭದಲ್ಲಿ ಮತ್ತು ಸೇವಾಲಾಲ ಜಯಂತಿ ಕಾರ‍್ಯಕ್ರಮದಲ್ಲಿ ಕುಮಾರ ಮಹಾರಾಜರನ್ನು ಉದ್ದೇಶ ಪೂರ್ವಕವಾಗಿ ಕೈಬಿಟ್ಟಿರುವುದು ಖಂಡನೀಯ. ಈ ರೀತಿ ಸಮಾಜವನ್ನು ಒಡೆದು ಆಳುವ ನೀತಿ ಯಾರಿಗೂ ಶೋಭೆ ತರುವುದಲ್ಲ ಇದಕ್ಕೆ ಸಂಘದ ಅಧ್ಯಕ್ಷರೇ ಕಾರಣಿ ಭೂತರಾಗಿದ್ದು ಅವರು ಶ್ರೀಗಳ ಕ್ಷಮೆ ಯಾಚಿಸಬೇಕೆಂದು ಹೇಳಿದರು.ಈ ಸಂರ್ಭದಲ್ಲಿ ಚಂದ್ರಕಾಂತ ಲಮಾಣಿ, ದೇವಪ್ಪ ಲಮಾಣಿ, ರಮೇಶ ಲಮಾಣಿ, ಕೃಷ್ಣ ಲಮಾಣಿ, ರಮೇಶ ಲಮಾಣಿ ,ಶೇಖಪ್ಪ ಲಮಾಣಿ, ಶೇಖರಗೌಡ ಪಾಟೀಲ, ಫಕ್ಕೀರ ಹರಿಜನ, ದೇವ ಲಮಾಣಿ, ರಿಯಾಜ ಗದಗ, ಸುರೇಶ ಲಮಾಣಿ, ಮಾಂತೇಶ ಹರಿಜನ ಹಾಜರಿದ್ದರು.