ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ಸೌಹಾರ್ದ ಸಹಕಾರ ಕ್ಷೇತ್ರದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ವೀರಶೈವ ಸೌಹಾರ್ದ ಪತ್ತಿನ ಸಹಕಾರ ಸಂಘ ನಿಯಮಿತದ ೨೦೨೬-೩೦ನೇ ಸಾಲಿನ ಕಾರ್ಯಕಾರಿ ಮಂಡಳಿಯ ಚುನಾವಣೆ, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆಯನ್ನು ಬ್ಯಾಂಕ್ ಚುನಾವಣಾಧಿಕಾರಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಷೀರ್ ಖಾನ್ ಪ್ರಕಟಿಸಿದ್ದು, ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿದ ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಎಸ್.ಜಯಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆಗೆ ಕಾರಣರಾಗಿದ್ದಾರೆ. ಉಪಾಧ್ಯಕ್ಷರಾಗಿ ಎ.ಮಂಜುನಾಥ, ನಿರ್ದೇಶಕರಾಗಿ ಡಾ.ಕೆ.ಎಂ.ಜಯಕುಮಾರ್, ಕೆ.ನಾಗೇಶ್, ಎನ್.ಎಚ್.ವಾಸುದೇವ, ಟಿ.ಸಿದ್ದಲಿಂಗಮೂರ್ತಿ, ಬಿ.ಜಿ.ವೃಷಬೇಂದ್ರಪ್ಪ, ಕೆ.ಸಿ.ನಾಗರಾಜ, ಎ.ವೇದಮೂರ್ತಿ, ಪಿ.ಎಂ.ನವೀನ್, ಡಾ.ಸಿ.ವಿ.ಕವಿತಾ, ಜಿ.ನಂದಿನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕ್‌ನಲ್ಲಿ ನಡೆದ ನೂತನ ನಿರ್ದೇಶಕರು ಸಭೆಸೇರಿ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಯನ್ನು ಅವಿರೋಧವಾಗಿ ಮಾಡಿದ್ದಲ್ಲದೆ, ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಗೆ ತುಂಬುಹೃದಯದ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಬ್ಯಾಂಕ್‌ನ ಕಾರ್ಯಚಟುವಟಿಕೆಗಳ ವಿಸ್ತರಣೆಗೆ ಕಾರ್ಯಕಾರಿಸಮಿತಿ ಸದಾ ಸಿದ್ಧವೆಂಬ ಸಂದೇಶವನ್ನು ನೀಡಿದ್ದಾರೆ.ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಜಯಪ್ರಕಾಶ್ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ ೧೯೯೮ರಲ್ಲಿ ನಗರದ ವೀರಶೈವ ಸಮಾಜದ ವೀರಶೈವ ಹಾಸ್ಟಲ್‌ನಲ್ಲಿ ಅತಿಕ ಡಿಮೆ ಹಣವನ್ನು ನಿಯೋಜಿಸಿದ ವೀರಶೈವ ಬ್ಯಾಂಕ್‌ನ್ನು ಆರಂಭಿಸಲಾಯಿತು. ತದನಂತರ ೨೦೦೬ರಲ್ಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ವ್ಯಾಪ್ತಿಗೆ ಬ್ಯಾಂಕ್‌ನ್ನು ಸೇರ್ಪಡೆ ಮಾಡಲಾಯಿತು. ೨೦೨೪-೨೫ನೇ ಸಾಲಿನಲ್ಲಿ ೧೪ ಲಕ್ಷ ರು. ಲಾಭವನ್ನು ನಮ್ಮಬ್ಯಾಂಕ್ ಪಡೆದಿದೆ. ನಗರದಲ್ಲೇ ಹಲವಾರು ಸಹಕಾರ ಕ್ಷೇತ್ರಗಳ ಬ್ಯಾಂಕ್‌ಗಳಿದ್ದು, ಪೈಪೋಟಿಯ ಮಧ್ಯೆಯೂ ಸಹಕಾರ ನಿಯಮಗಳು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಆಡಳಿತ ಮಂಡಳಿಯ ಸಲಹೆ, ಸೂಚನೆಯನ್ನು ಪಡೆದು ಕಾರ್ಯಚಟುವಟಿಕೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಬ್ಯಾಂಕ್‌ನ ಲಾಭದ ಜತೆಗೆ ವಹಿವಾಟನ್ನು ಹೆಚ್ಚಿಸಲಾಗುವುದು. ಬ್ಯಾಂಕ್‌ನ ಅಭಿವೃದ್ದಿಪರ ಚಿಂತನೆಗಳಿಗೆ ಎಲ್ಲರೂ ಸಹಕಾರ ನೀಡುತ್ತ ಬಂದಿದ್ದಾರೆ. ಬ್ಯಾಂಕ್ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕ ಜತೆಯಲ್ಲಿ ವ್ಯವಸ್ಥಾಪಕ ಎಸ್.ತಿಪ್ಪೇಸ್ವಾಮಿ, ಸಿಬ್ಬಂದಿ ಎಂ.ಬಿ.ಸೋಮಶೇಖರ್, ಬ್ಯಾಂಕ್‌ನ ಎಲ್ಲಾ ಗ್ರಾಹಕರು ಸಹಕಾರ ನೀಡುತ್ತಿದ್ದಾರೆ. ಮೂರನೇ ಬಾರಿಗೆ ನನ್ನ ಮೇಲೆ ಅಪಾರವಾದ ವಿಶ್ವಾಸ, ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನವನ್ನು ನೀಡಿದ್ದು, ಬ್ಯಾಂಕ್ ಅಭಿವೃದ್ದಿಪಡಿಸಲು ನನಗೆ ಮತ್ತಷ್ಟು ಸ್ಪೂರ್ತಿ ದೊರೆತಿದೆ ಎಂದರು.
ಈ ಹಿಂದೆ ಬ್ಯಾಂಕ್‌ನ ನಿರ್ದೇಶಕಾಗಿ ಸೇವೆಸಲ್ಲಿಸಿದ ಎಂ.ಪಿ.ತಿಪ್ಪೇಸ್ವಾಮಿ, ಶಾಂತಕುಮಾರಿ, ಲತಾಅವರ ಸಹಕಾರವನ್ನು ಸ್ಮರಿಸಿದ ಅಧ್ಯಕ್ಷರು ನೂತನವಾಗಿ ಬ್ಯಾಂಕ್‌ನ ಆಡಳಿತಮಂಡಳಿಗೆ ಸೇರ್ಪಡೆಯಾದ ನವೀನ್, ಕವಿತಾ, ಜಿ.ನಂದಿನಿರವರನ್ನು ಸ್ವಾಗತಿಸಿದರು.