ಬೆಳ್ಳಂಬೆಳಗ್ಗೆ ಘರ್ಜಿಸಿದ ಜೆಸಿಬಿ; ಗೂಡಂಗಡಿಗಳ ತೆರವು

| Published : Jul 07 2024, 01:23 AM IST

ಬೆಳ್ಳಂಬೆಳಗ್ಗೆ ಘರ್ಜಿಸಿದ ಜೆಸಿಬಿ; ಗೂಡಂಗಡಿಗಳ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿದ್ದ ಗೂಡಂಗಡಿಗಳನ್ನು ಶನಿವಾರ ಬೆಳಗ್ಗೆ ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಅವಳಿ ನಗರದ ಹೃದಯ ಭಾಗವಾಗಿರುವ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದ ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿಯ ಸರ್ಕಾರಿ ಜಾಗ ಅತಿಕ್ರಮಿಸಿ ಇಡಲಾಗಿದ್ದ ಗೂಡಂಗಡಿಗಳನ್ನು ನಗರಸಭೆ ಇಲಾಖೆ ತೆರವುಗೊಳಿಸಿತು.

ಶನಿವಾರ ಬೆಳಗ್ಗೆಯೇ ಪೊಲೀಸರು, ನಗರಸಭೆ ಸಿಬ್ಬಂದಿ ಜೊತೆ ಜೆಸಿಬಿ ಬಳಸಿ ಬಹುತೇಕ ಅಂಗಡಿ ತೆರವುಗೊಳಿಸಲಾಯಿತು.

ರಬಕವಿ-ಬನಹಟ್ಟಿ ನಗರದ ಮಧ್ಯ ಭಾಗವಾಗಿರುವ ಸಮುದಾಯ ಆಸ್ಪತ್ರೆ ಕೇಂದ್ರದ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಸಲುವಾಗಿ ಅತಿಕ್ರಮಣ ತೆರವು ಅನಿವಾರ್ಯವಾಗಿತ್ತು ಎಂದು ಪೌರಾಯುಕ್ತ ಜಗದೀಶ ಈಟಿ ಪತ್ರಿಕೆಗೆ ತಿಳಿಸಿದರು.