ಹಲವಾರು ಜೆಸಿಬಿ ಯಂತ್ರಗಳು ಔರಾದ್-ಮುರ್ಕಿ ಹೆದ್ದಾರಿ ಮೆಲೆ ಕಾದು ನಿಂತಿವೆ.ತಾಲೂಕಿನ ಹುಲ್ಯಾಳ ಗ್ರಾಮದ ಬಳಿ ರಾಜ್ಯ ಹೆದ್ದಾರಿ 122ರ ಮೇಲೆ ಖಾಸಗಿ ಕಂಪನಿ ಇಂಟರ್ನೆಟ್ ತಂತಿ ಅಳವಡಿಸುವ ಕಾರ್ಯ ಮುಂದುವರೆಸಿದೆ.
ಅನೀಲಕುಮಾರ್ ದೇಶಮುಖ್
ಕನ್ನಡಪ್ರಭ ವಾರ್ತೆ ಔರಾದ್ಇಂಟರ್ನೆಟ್ ತಂತಿ ಹಾಕುವ ನೆಪದಲ್ಲಿ ಸುಸಜ್ಜಿತ ಹೆದ್ದಾರಿಯನ್ನು ಸಮರೊಪಾದಿಯಲ್ಲಿ ಅಗೆಯುತ್ತಿರುವ ಜೆಸಿಬಿ ಯಂತ್ರಗಳು ತನ್ನ ವರಸೆ ಮುಂದುವರೆಸಿದ್ದು, ಸಾರ್ವಜನಿಕರ ತೀವ್ರ ವಿರೋಧಕ್ಕೂ ಕ್ಯಾರೆ ಎನ್ನದೆ ಹೊಂಚು ಹಾಕಿ ಹೆದ್ದಾರಿ ಧ್ವಂಸ ಮಾಡಲು ಹಲವಾರು ಜೆಸಿಬಿ ಯಂತ್ರಗಳು ಔರಾದ್-ಮುರ್ಕಿ ಹೆದ್ದಾರಿ ಮೆಲೆ ಕಾದು ನಿಂತಿವೆ.
ತಾಲೂಕಿನ ಹುಲ್ಯಾಳ ಗ್ರಾಮದ ಬಳಿ ರಾಜ್ಯ ಹೆದ್ದಾರಿ 122ರ ಮೇಲೆ ಖಾಸಗಿ ಕಂಪನಿ ಇಂಟರ್ನೆಟ್ ತಂತಿ ಅಳವಡಿಸುವ ಕಾರ್ಯ ಮುಂದುವರೆಸಿದೆ. ಹೆದ್ದಾರಿ ಅಗೆಯದಂತೆ ಸಾರ್ವಜನಿಕರು ಸಾಕಷ್ಟು ವಿರೋಧದ ನಡುವೆ ಹಗಲು ರಾತ್ರಿ ಎನ್ನದೆ ರಸ್ತೆ ಅಗೆಯುವ ಕೆಲಸ ಮುಂದುವರೆಸಿದೆ. ಪರಿಸ್ಥಿತಿ ಅರೆತ ಹೊಕ್ರಾಣ ಪೊಲೀಸರು ಸ್ಥಳಕ್ಕೆ ಬಂದು ಭೇಟಿ ನೀಡಿ ಅನಧಿಕೃತವಾಗಿ ರಸ್ತೆ ಅಗೆಯುತ್ತಿರುವುದನ್ನು ತಡೆದು ಹೋಗ್ತಿದ್ದಂತೆ ಕಂಪನಿ ಜೆಸಿಬಿ ಯಂತ್ರಗಳು ಕೆಲಸ ಮಾತ್ರ ಅಲ್ಲಲ್ಲಿ ನಡೆಸುತ್ತ ಮೊಂಡುತನ ಪ್ರದರ್ಶನ ಮಾಡ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.ಈಗಾಗಲೇ ಚಿಮ್ಮೆಗಾಂವ್, ಮಾಳೆಗಾಂವ್, ಲಷ್ಕರನಾಯಕ ತಾಂಡ, ಡೊಂಗರಗಾಂವ್ ಹಾಗೂ ಹುಲ್ಯಾಳ ಗ್ರಾಮದ ಬಳಿ ಸುಸಜ್ಜಿತ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಅಗೆದು ಸಾರ್ವಜನಿಕ ರಸ್ತೆಗೆ ಭಾರಿ ಹಾನಿ ಮಾಡಿದ್ದಾರೆ. ಖಾಸಗಿ ಕಂಪನಿಯ ಈ ದೌರ್ಜನ್ಯ ನಿರಂತರವಾಗಿ ಮುಂದುವರೆದಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಇಲಾಖೆಗಳ ಜಾಣಮೌನ ಅನುಮಾನಕ್ಕೀಡು ಮಾಡಿದೆ.
''ಕನ್ನಡಪ್ರಭ''ದಲ್ಲಿ ವರದಿ ಪ್ರಕಟವಾಗ್ತಿದ್ದಂತೆ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಔರಾದ್ ಮತ್ತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದು ಅನಧಿಕೃತವಾಗಿ ಹೆದ್ದಾರಿ ಅಗೆದು ಇಲಾಖೆಗೆ ಹಾನಿ ಮಾಡಿದ ವಾಹನ ಹಾಗೂ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.ಹಂದರಕಿ-ಮುರ್ಕಿ ರಾಜ್ಯ ಹೆದ್ದಾರಿ 122 ರ ಪಕ್ಕದಲ್ಲಿ ಇಂಟರ್ನೆಟ್ ತಂತಿ ಅಳವಡಿಸಲು ಭೂಮಿ ಅಗೆಯಲು ನಿರ್ದಿಷ್ಟ ನಿಯಮಾನುಸಾರ ಅನುಮತಿ ನೀಡಲಾ ಗಿದೆ. ಹೆದ್ದಾರಿಯ ಎರಡು ಬದಿಯ ನೀರಿನ ಕಾಲುವೆಯಿಂದ 3 ಮಿಟರ್ (10 ಅಡಿ) ದೂರದ ರೈತರ ಜಮೀನಿನ ಮೂಲಕ ತಂತಿ ಅಳವಡಿಸಬೇಕು. ರಸ್ತೆ ಅಗೆದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಔರಾದ್ ಎಇಇ ಪ್ರೇಮಸಾಗರ ಹೇಳಿದರು.