ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಅಧ್ಯಕ್ಷರಾಗಿ ಎಸ್.ಆರ್. ವಸಂತ್ ಆಯ್ಕೆ

| Published : Jan 12 2024, 01:45 AM IST

ಸಾರಾಂಶ

ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ಎಸ್.ಆರ್. ವಸಂತ್ ಮತ್ತು ತಂಡದ ಪದಗ್ರಹಣ ಕಾರ್ಯಕ್ರಮ ನಡೆಯಿತು. ವಲಯ 14ರ ಅಧ್ಯಕ್ಷೆ ಆಶಾ ಜೈನ್ ಪದಗ್ರಹಣ ನಡೆಸಿಕೊಟ್ಟರು.

ಸೋಮವಾರಪೇಟೆ: ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ನೂತನ ಸಾಲಿನ ಪದಗ್ರಹಣ ಕಾರ್ಯಕ್ರಮ ಇಲ್ಲಿನ ಸಂಕಪ್ಪ ಸಭಾಂಗಣದಲ್ಲಿ ನಡೆಯಿತು.

ನೂತನ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ಆರ್. ವಸಂತ್ ಮತ್ತು ತಂಡಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಿ. ವಲಯ 14ರ ಅಧ್ಯಕ್ಷೆ ಆಶಾ ಜೈನ್ ಪದಗ್ರಹಣ ನಡೆಸಿಕೊಟ್ಟರು.

ನಂತರ ಮಾತನಾಡಿದ ಆಶಾ, ಪ್ರಪಂಚದ 120 ರಾಷ್ಟ್ರಗಳಲ್ಲಿ ಸೇವೆಯನ್ನು ನೀಡುತ್ತಿರುವ ಜೇಸಿ ಸಂಸ್ಥೆಗೆ ಭಾರತ ದೇಶದ ಕೆ.ಕವೀನ್ ಕುಮಾರ್ ಅಧ್ಯಕ್ಷರಾಗುವ ಮೂಲಕ ಅಮೆರಿಕದಲ್ಲಿ ಭಾರತ ದೇಶದ ಧ್ವಜ ಹಾರುವಂತಾಗಿದೆ. ಒಬ್ಬರಿಂದಾಗದ ಕೆಲಸವನ್ನು ಸಂಸ್ಥೆಯ ಎಲ್ಲರೂ ಸೇರಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ನೂತನ ಸಾಲಿನ ಅಧ್ಯಕ್ಷರು ಯುವ ಸದಸ್ಯರನ್ನು ಸಂಸ್ಥೆಗೆ ಸೇರಿಸಿಕೊಳ್ಳುವ ಮೂಲಕ ಸಮಾಜಸೇವೆಗೆ ಮುಂದಾಗಬೇಕೆಂದರು.

ವಲಯ ಚೇರ್ಮನ್‌ ಎಂ.ಡಿ. ರಂಗಸ್ವಾಮಿ ಮಾತನಾಡಿ, ಸಂಸ್ಥೆಯ ಮೂಲಕ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ಸದಸ್ಯರು ತಮ್ಮನ್ನು ತೊಡಗಿಸಿ ಜೇಸಿ ಆಂದೋಲನ ಮಾಡಬೇಕು. ಅದಕ್ಕಾಗಿ ಯುವಜನರನ್ನು ತಮ್ಮೊಂದಿಗೆ ಕರೆದೊಯ್ಯುವ ಮೂಲಕ ಸಮಾಜ ನೊಂದವರ ಬೆಳಕಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ವಲಯ 14ರ ಉಪಾಧ್ಯಕ್ಷ ಜಿ. ರಾಕೇಶ್, ಕಾರ್ಯದರ್ಶಿ ಜಗದಾಂಭ, ಲೇಡಿ ಜೇಸಿ ಅಧ್ಯಕ್ಷೆ ವಿನುತಾ ಸುದೀಪ್, ಐಪಿಪಿ ಎಂ.ಎ. ರುಬೀನ, ಜೆಜೆಸಿ ದೀಪಶ್ರೀ ಇದ್ದರು.