ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಗರಣಿ ಗ್ರಾಮದಲ್ಲಿ ನಡೆದ ಶಾಸಕರ ಸಭೆಯೊಂದರಲ್ಲಿ ಚಿತ್ರ ನಿರ್ದೇಶಕ ರವಿ ಆರ್.ಗರಣಿ ಶಾಸಕರನ್ನು ಓಲೈಸುವ ಭರದಲ್ಲಿ ಮಧುಗಿರಿ ಕ್ಷೇತ್ರದಲ್ಲಿ ವಿರೋಧ ಪಕ್ಷವೇ ಇಲ್ಲವೆಂದು ಭಾಷಣ ಮಾಡಿರುವುದು ಸರಿಯಲ್ಲ ಎಂದು ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿಜವರ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.ಶನಿವಾರ ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರೊಂದಿಗೆ ಮಾತನಾಡಿದರು. ಮಧುಗಿರಿ ಕ್ಷೇತ್ರ ಜನರಲ್ ಆದ ನಂತರ ಮೂರು ಬಾರಿ ಜೆಡಿಎಸ್ ಶಾಸಕರನ್ನು ನಮ್ಮ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. ಪ್ರಸ್ತುತ ಚುನಾವಣೆ ನಡೆದರೂ ನಾವು ಗೆಲುವು ಸಾಧಿಸುತ್ತೇವೆ ಎಂದರು.
ಕಳೆದ ವಾರ ಗರಣಿ ಗ್ರಾಮದಲ್ಲಿ ನಡೆದ ಶಾಸಕರ ಸಭೆಯಲ್ಲಿ ಚಿತ್ರ ನಿರ್ದೇಶಕ ರವಿ ಆರ್ ಗರಣಿ ನಮ್ಮ ಪಕ್ಷದ ಬಗ್ಗೆ ಮತ್ತು ಇಲ್ಲಿನ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದ್ದು, ಪಕ್ಷಕ್ಕಾಗಿ ಪ್ರಾಣ ಕೊಡುವ ಕಾರ್ಯಕರ್ತರ ಪಡೆಯೇ ಇದೆ. ಕ್ಷೇತ್ರದಲ್ಲಿ ವಿರೋಧ ಪಕ್ಷವೇ ಇಲ್ಲವೆಂದು ಎಲ್ಲವು ಶಾಸಕ ಕೆ.ಎನ್.ರಾಜಣ್ಣನವರ ಪರವಾಗಿಯೇ ಇದೆ ಎಂಬರ್ಥದಲ್ಲಿ ಮಾತನಾಡಿದ್ದು ಸರಿಯಲ್ಲ, ರ .ಯಾರನ್ನೂ ಒಲೈಕೆ ಮಾಡುವ ಮಾತುಗಳು ಬೇಡ, ಈ ಪಕ್ಷಕ್ಕೆ ಎಚ್‌ಡಿಡಿ,ಎಚ್‌ಡಿಕೆ ,ನಿಖಿಲ್ ಕುಮಾರಸ್ವಾಮಿಯಂತಹ ಹೈಕಮಾಂಡ್ ಇದೆ ಎಂಬ ವಿಚಾರ ನಿಮಗೂ ತಿಳಿದಿರಲಿ ಎಂದರು.ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಸಿಡದರಗಲ್ಲು ಶ್ರೀನಿವಾಸ್ ಮಾತನಾಡಿ, ರವಿ ಆರ್.ಗರಣಿ ತಾಲೂಕಿನಲ್ಲಿ ವಿರೋಧ ಪಕ್ಷ ಜೆಡಿಎಸ್ ಎಲ್ಲಿದೆ. ಎಂದು ಕೇಳಿದ್ದೀರಾ,? ದೇಶದಲ್ಲಿ ಮೊದಲು ಕಾಂಗ್ರೆಸ್ ಎಲ್ಲಿದೆ ಎಂಬುದನ್ನು ತಿಳಿಸಿ, ಇದಲ್ಲದೆ 2028ಕ್ಕೆ ಕಾಂಗ್ರೆಸ್ ಎಲ್ಲಿರುತ್ತೆ ನೋಡಿಕೊಳ್ಳಿ ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ಅಕ್ಕಿ, ಯೂರಿಯಾ ಕಳ್ಳ ಸಾಗಾಣೆ ನಡೆಯುತ್ತಿದೆ. 139 ಶಾಸಕರನ್ನು ಹೊಂದಿರುವ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿಲ್ಲ. ಕನಿಷ್ಟ ನಮ್ಮ ಎನ್‌ಡಿಎ ಸಂಸದರು, ಕೇಂದ್ರ ಸಚಿವರು ಮಾಡುವ ಕೆಲಸವನ್ನು ನಿಮ್ಮ ಸರ್ಕಾರ ಮಾಡುತ್ತಿಲ್ಲ. ರಾಹುಲ್ ಗಾಂಧಿ ವಿದೇಶದಲ್ಲಿ ದೇಶದ ಮೈರ್ಯಾದೆ ತೆಗೆಯುತ್ತಿರುವುದನ್ನು ಜನರು ನೋಡುತ್ತಿದ್ದಾರೆ. 2028ಕ್ಕೆ ಕಾಂಗ್ರೆಸ್ ಎಲ್ಲಿರುತ್ತದೆ ಎಂಬುದನ್ನು ನೋಡಿಕೊಳ್ಳಿ ಎಂದು ವ್ಯಂಗ್ಯವಾಡಿದರು.ಯುವ ಮುಖಂಡ ವೆಂಕಟಾಪುರ ಗೋವಿಂದರಾಜು ಮಾತನಾಡಿದರು. ಪತ್ರಕರ್ತರಿಗೆ ಟಿಕೆಟ್ ಕೊಟ್ಟರು ಸೈ , ಕೊಂಡವಾಡಿ ಚಂದ್ರಶೇಖರ್ 2028ರಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಅದು ಅವರ ವೈಯಕ್ತಿಕ ಹೇಳಿಕೆ. ನಮಗೆ ಎಚ್‌ಡಿಡಿ, ಎಚ್‌ಡಿಕೆ ಮುಖ್ಯ ಅವರು ಒಬ್ಬ ಪತ್ರಕರ್ತನಿಗೆ ಟಿಕೆಟ್ ಕೊಟ್ಟು ಕಳಿಸಿದರು ಚುನಾವಣೆಯಲ್ಲಿ ಬೆಂಬಲಿಸುತ್ತವೆ.ಈಗ ಚುನಾವಣೆ ನಡೆದರೂ ಜೆಡಿಎಸ್ ಅಭ್ಯರ್ಥಿ ಗೆಲುವು ಖಚಿತ . ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಹಿರಿಯ ಮುಖಂಡ ಸಿಡದರಗಲ್ಲು ಶ್ರೀನಿವಾಸ್, ತಾಲೂಕು ಜೆಡಿಎಸ್ ಮುಖಂಡರಾದ ಗೋಪಾಲ್, ಸತೀಶ್ ಕುಮಾರ್, ಕಾಂತರಾಜು, ಗಣೇಶ್, ಚಿಕ್ರಿ, ಸಿದ್ದಗಂಗಪ್ಪ, ಸಿದ್ದಲಿಂಗಕುಮಾರ್, ಶ್ರೀನಿವಾಸ್, ನಾಗಭೂಷಣ್, ರವಿ ಆರಾಧ್ಯ, ವೀರಕ್ಯಾತಪ್ಪ, ಚಿಕ್ಕರಂಗಪ್ಪ, ನರಸಿಯ್ಯ, ಸಿದ್ದಲಿಂಗಪ್ಪ, ಮೂರ್ತಪ್ಪ, ಶ್ರೇಯಸ್, ಶ್ರೀನಿವಾಸ್ ಹಾಗೂ ಇತರರಿದ್ದರು.