ಜೆಡಿಎಸ್ - ಬಿಜೆಪಿ ಮೈತ್ರಿ ಬೆಂಬಲಿತರನ್ನು ಗೆಲ್ಲಿಸಿ: ಶಾಸಕ ಎಚ್.ಟಿ.ಮಂಜು

| Published : Sep 28 2025, 02:00 AM IST

ಜೆಡಿಎಸ್ - ಬಿಜೆಪಿ ಮೈತ್ರಿ ಬೆಂಬಲಿತರನ್ನು ಗೆಲ್ಲಿಸಿ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸಹಕಾರ ಮಹಾ ಮಂಡಳದ ಪ್ರಾದೇಶಿಕ ನಿರ್ದೇಶಕ ಎಲ್.ಎಲ್.ಮೋಹನ್ ನೇತೃತ್ವದಲ್ಲಿ ತಂಡ ಬಲಿಷ್ಠ ತಂಡವಾಗಿದೆ. ಸಂಸ್ಥೆ ಸಮರ್ಥವಾಗಿ ಮುನ್ನಡೆಸಲು ಕೆ.ಆರ್.ಪೇಟೆ ತಾಲೂಕಿನ ಎಲ್ಲಾ ಗ್ರಾಮಗಳ 4888 ಷೇರುದಾರ ಮತದಾರು ನಮ್ಮ 8 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನಲ್ಲಿ ಸೆ.28ರಂದು ನಡೆಯುವ ಟಿಎಪಿಸಿಎಂಎಸ್ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ನನಗೆ ಶಕ್ತಿ ಹೆಚ್ಚಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಷೇರುದಾರ ಮತದಾರರು ಹಾಗೂ ಸೊಸೈಟಿಗಳ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

ಪಟ್ಟಣದ ಯಶಶ್ವಿನಿ ಕಲ್ಯಾಣ ಮಂಟಪದಲ್ಲಿ ಹಾಗೂ ಬಿಲ್ಲೇನಹಳ್ಳಿ ಶ್ರೀಗವಿರಂಗನಾಥಸ್ವಾಮಿ ಸಮುದಾಯ ಭವನದಲ್ಲಿ ಟಿಎಪಿಸಿಎಂಎಸ್ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾಡಿದರು.

ರಾಜ್ಯ ಸಹಕಾರ ಮಹಾ ಮಂಡಳದ ಪ್ರಾದೇಶಿಕ ನಿರ್ದೇಶಕ ಎಲ್.ಎಲ್.ಮೋಹನ್ ನೇತೃತ್ವದಲ್ಲಿ ತಂಡ ಬಲಿಷ್ಠ ತಂಡವಾಗಿದೆ. ಸಂಸ್ಥೆ ಸಮರ್ಥವಾಗಿ ಮುನ್ನಡೆಸಲು ತಾಲೂಕಿನ ಎಲ್ಲಾ ಗ್ರಾಮಗಳ 4888 ಷೇರುದಾರ ಮತದಾರು ನಮ್ಮ 8 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

ಎಸ್.ಎಲ್.ಮೋಹನ್ ಮಾತನಾಡಿ, ಹಿರಿಯರಾದ ಬಿ.ಎಲ್.ದೇವರಾಜು ತಮ್ಮ 2ವರ್ಷದ ಅಧ್ಯಕ್ಷರ ಅವಧಿ ನಂತರ ಒಂಡಂಬಡಿಕೆ ರಾಜೀನಾಮೆ ನೀಡಿ ತಮ್ಮ ನೈತಿಕ ರಾಜಕಾರಣವನ್ನು ಪ್ರದರ್ಶಿಸಬೇಕಿತ್ತು. 5 ವರ್ಷಗಳ ಕಾಲ ಅಧಿಕಾರಿ ನಡೆಸಿ ತಮಗೆ ಅಧಿಕಾರದ ದುರಾಸೆ ಇದೆ ಎಂಬುದನ್ನು ತಾಲೂಕಿನ ಜನತೆಗೆ ತೋರಿಸಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಮೆಣಸ ಮಹಾದೇವೇಗೌಡ, ಮಾಜಿ ಸದಸ್ಯರಾದ ಎಂ.ಸಿ.ರಾಮೇಗೌಡ, ಹೊಸಹೊಳಲು ರಾಜು, ಮುಖಂಡರಾದ ಎ.ಪಿ.ಕೇಶವಗೌಡ, ಬೇಲದಕೆರೆ ನಂಜಪ್ಪ, ಎಸ್.ಆರ್.ನವೀನ್‌ಕುಮಾರ್, ಚಂದ್ರಹಾಸ, ಬಿ.ವರ್ಗದ ಅಭ್ಯರ್ಥಿಗಳಾದ ಎಸ್.ಎಲ್.ಮೋಹನ್, ಮಲ್ಲೇನಹಳ್ಳಿ ಎಂ.ಮೋಹನ್, ಕಿಕ್ಕೇರಿ ಕೆ.ಬಿ.ಮಧು, ನಾಗರಘಟ್ಟ ದಿಲೀಪ್‌ಕುಮಾರ್, ಎಂ.ಡಿ.ಜ್ಯೋತಿ, ಬಿ.ಆರ್.ಲತಾಮಣಿಮಂಜುನಾಥ್, ರಂಗನಾಥಪುರ ನಾಗರಾಜು, ಬೊಮ್ಮೇನಹಳ್ಳಿ ಮಂಜುನಾಥ್, ಎ.ವರ್ಗದ ಅಭ್ಯರ್ಥಿಗಳಾದ ಟಿ.ಬಲದೇವ್, ವಿ.ಡಿ.ಹರೀಶ್, ಬಿ.ಎಂ.ಕಿರಣ್, ಕುರುಬಹಳ್ಳಿ ಕೆ.ಬಿ.ನಾಗೇಶ್, ಆಲಂಬಾಡಿ ಎ.ಟಿ.ಕರಿಶೆಟ್ಟಿ, ಎಚ್.ಟಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.