Maheshwari S. Vali, President of the JD(S) district women's wing, will undertake a solo walk on Thursday from Aladad to the offices of the Kalaburagi Deputy Commissioner and the Zilla Panchayat CEO, highlighting the key public demand for the construction of toilets and the provision of adequate facilities for women

-ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಒತ್ತಾಯ

------

ಕನ್ನಡಪ್ರಭ ವಾರ್ತೆ ಆಳಂದ

ಮಹಿಳೆಯರಿಗೆ ಶೌಚಾಲಯ ನಿರ್ಮಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬ ಪ್ರಮುಖ ಜನಪರ ಬೇಡಿಕೆ ಮುಂದಿಟ್ಟು ಆಳದದಿಂದ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಸಿಇಒ ಕಚೇರಿಗೆ ಜೆಡಿಎಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರ ಎಸ್‌.ವಾಲಿ ಗುರುವಾರ ಏಕವ್ಯಕ್ತಿ ಕಾಲ್ನಡಿಗೆ ನಡೆಸಲಿದ್ಆರೆ.

ಎರಡು ದಿನಗಳಲ್ಲಿ ಐವತ್ತು ಕಿ.ಮೀ ಯಾತ್ರೆ ನಡೆಸಲಿದ್ದಾರೆಂದು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ರಫೀಕ್ ಇನಾಮದಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಸಮಸ್ಯೆಗಳನ್ನು ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆದು ಪರಿಹರಿಸಲು ಕ್ರಮಕೈಗೊಳ್ಳುವ ಉದ್ದೇಶದಿಂದ ಮಹೇಶ್ವರಿ ವಾಲಿ ಪಕ್ಷಾತೀತ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ. ಅಭಿವೃದ್ಧಿ ತುಡಿತವುಳ್ಳ ಸಮಾನ ಮನಸ್ಕರು, ಯುವಜನಾಂಗ, ಧಾರ್ಮಿಕ ಮುಖಂಡರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಪ್ರತಿ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿ ಮಹಿಳೆಯರಿಗೆ ಶೌಚಾಲಯಗಳಿಲ್ಲದಿರುವುದು ಗಮನಕ್ಕೆ ಬಂದಿದ್ದು, ಬಹಿರ್ದೆಸೆ ಶೌಚಾಲಯ ವ್ಯವಸ್ಥೆಗೆ ಅನಿವಾರ್ಯವಾಗಿ ಅವಲಂಬಿತರಾಗಿದ್ದಾರೆ. ಮಹಿಳೆಯರ ಶೋಚನಿಯ ಪರಿಸ್ಥಿತಿ ನಿರ್ಮೂಲನೆಗೆ ಪಣತೊಟ್ಟು ಕಾಲ್ನಡಿಗೆ ಯಾತ್ರೆ ಕೈಗೊಳ್ಳಲಾಗಿದೆ ಎಂದು ರಫೀಕ್ ಇನಾಮದಾರ ಹೇಳಿದರು.

ಮಹೇಶ್ವರಿ ಎಸ್. ವಾಲಿ ಸೇರಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.