ಸಾರಾಂಶ
ಕಳೆದ ವರ್ಷದ ಬರದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರು ಅದರಿಂದ ಹೊರಬಂದಿಲ್ಲ. ಇದೀಗ ಸರ್ಕಾರ ವಿವಿಧ ವಸ್ತುಗಳು ಬೆಲೆ ಏರಿಕೆ ಮಾಡಿರುವ ಜತೆಗೆ ತೈಲ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ.
ಹುಬ್ಬಳ್ಳಿ:
ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವುದನ್ನು ಖಂಡಿಸಿ ಬುಧವಾರ ಜೆಡಿಎಸ್ ಕಾರ್ಯಕರ್ತರು ಇಲ್ಲಿನ ಚೆನ್ನಮ್ಮ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಕಳೆದ ವರ್ಷದ ಬರದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರು ಅದರಿಂದ ಹೊರಬಂದಿಲ್ಲ. ಇದೀಗ ಸರ್ಕಾರ ವಿವಿಧ ವಸ್ತುಗಳು ಬೆಲೆ ಏರಿಕೆ ಮಾಡಿರುವ ಜತೆಗೆ ತೈಲ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ತಕ್ಷಣ ಸರ್ಕಾರ ಇಂಧನ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.
ಮುಖಂಡ ನವೀನಕುಮಾರ ಮಾತನಾಡಿ, ಕೂಡಲೇ ಇಂಧನದ ಮೇಲಿನ ತೆರಿಗೆ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ರಾಜ್ಯಾದ್ಯಂತ ಮತ್ತಷ್ಟು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಪಕ್ಷದ ಮುಖಂಡ ತುಳಸಿಕಾಂತ ಖೋಡೆ, ಶ್ರೀಶೈಲ ಗಡದಿನ್ನಿ, ನವೀನಕುಮಾರ, ಶಂಕರ ಪವಾರ, ವಿನಾಯಕ ಗಾಡಿವಡ್ಡರ, ನಾಗರಾಜ್ ಗುಡದರಿ, ಅಹ್ಮದ್ ಅರಸಿಕೇರಿ, ಪುನಿತ್ ಅಡಗಲ್ಲ, ಬಾಷಾ ಮುದಗಲ್, ಶಂಕರಗೌಡ ದೊಡ್ಡಮನಿ, ಶ್ರೀಕಾಂತ ತೆಲಗರ, ಭೀಮರಾಯ ಗುಡೆನಕಟ್ಟಿ, ಅಲಿ ಸಂದಿನಲ್ಲಿ, ಬಸವರಾಜ ಹರವಿ, ದೊಡ್ಡಪ್ಪ ಧರಣಿ ಸೇರಿದಂತೆ ಹಲವರಿದ್ದರು.