ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿ ಉಪ ತಹಸೀಲ್ದಾರ್ ಮೋಹನ ಕಡೂರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿ ಉಪ ತಹಸೀಲ್ದಾರ್ ಮೋಹನ ಕಡೂರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯನ್ನು ರು.8ರಿಂದ 35ರ ವರೆಗೆ ಹೆಚ್ಚಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೊರೆಯಾಗಿ ಪರಿಣಮಿಸಿದೆ. ಇದರೊಂದಿಗೆ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳವು ಕಾರ್ಮಿಕರು, ವಿದ್ಯಾರ್ಥಿಗಳು, ನೌಕರರು ಹಾಗೂ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೆ ತೀವ್ರ ಆರ್ಥಿಕ ಹೊರೆಯಾಗಿದೆ. ರಾಜ್ಯದಲ್ಲಿ ಇಂದು ತೀವ್ರ ಬರಗಾಲದಿಂದ ಜನರು ಕಂಗಾಲಾಗಿದ್ದು ಸರ್ಕಾರ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು. ಬಸ್ ಪ್ರಯಾಣ ದರ ಹೆಚ್ಚಳವನ್ನು ಮರುಪರಿಶೀಲಿಸಿ ರದ್ದುಗೊಳಿಸಬೇಕು. ರೈತರಿಗೆ ವಿಶೇಷ ಬರ ಪರಿಹಾರ ನೀಡಬೇಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ, ನಗರ ಘಟಕದ ಅಧ್ಯಕ್ಷ ಲಿಂಗರಾಜ್ ಹೊನ್ನಾಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಕುಂತಲಾ ನೀರಲಗಿ, ತಾಲೂಕು ಅಧ್ಯಕ್ಷೆ ಲಕ್ಷ್ಮಿ ಕದರಮಂಡಲಗಿ, ಉಪಾಧ್ಯಕ್ಷೆ ರಾಜೇಶ್ವರಿ ಆರೇಮಲ್ಲಾಪುರ, ಮಹಿಳಾ ನಗರ ಘಟಕದ ಅಧ್ಯಕ್ಷೆ ಉಷಾ ಜಾಡಮಲಿ, ಶಿವಪುತ್ರಪ್ಪ ನಡುವಿನಮನಿ, ಶಿವಪ್ಪ ಬಾರ್ಕಿ, ಮಂಜುನಾಥ ಹಲಗೇರಿ, ಸಿದ್ದಣ್ಣ ಪಟ್ಟಣಶೆಟ್ಟಿ, ನಾಗರಾಜ ಕಜ್ಜರಿ, ಗುರುರಾಜ ಗೂಜನೂರ, ಹನುಮಂತಪ್ಪ ಬಿಷ್ಟಣ್ಣನವರ, ಮೈಲಪ್ಪ ಕರ್ತಿಮಾಳರ, ನಿಂಗಪ್ಪ ದೇವರಗುಡ್ಡ, ಶಿವು ನಿಟ್ಟೂರು, ಕಸ್ತೂರಿ ಅರ್ಕಾಸಾಲಿ, ಲತಾ ಕೊಪ್ಪದ, ಆಶಾ, ಗಾಯತ್ರಿ ಪಟ್ಟಣಶೆಟ್ಟಿ, ರೂಪಾ ಹೊಳಿಯಮ್ಮನವರ, ಪುಷ್ಪಾ ಕಿತ್ತೂರಮಠ, ಪೂಜಾ ದೈವಜ್ಞ, ಮಂಗಳಾ ಬೆಳಕೇರಿ, ಶಕುಂತಲಾ ಮಳ್ಳಿ ಮತ್ತಿತರರಿದ್ದರು.