ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸದ್ಯದ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಬಹಳಷ್ಟು ಉನ್ನತ ಸಾಧನೆ ಮಾಡಿ ಪುರುಷರಿಗೆ ಸರಿಸಮಾನವಾಗಿ ಬೆಳೆದು ನಿಂತಿದ್ದಾಳೆ. ಆದರೆ ಮಹಿಳೆ, ಮಹಿಳೆಯರಲ್ಲಿ ಜಿಗುಪ್ಸೆ, ಅಸೂಹೆ, ಅಹಂಕಾರ ಹೆಚ್ಚಾಗಿದೆ. ಇದು ಮಹಿಳೆ ಸಾಧನೆಗೆ ಪೂರಕವಲ್ಲ. ಮಹಿಳೆಯರು ಒಗ್ಗಟ್ಟಾಗಬೇಕು. ಉತ್ತಮ ಸಮಾಜ ನಿಮಾರ್ಣಕ್ಕೆ ಮಹಿಳೆಯರು ಕೈ ಜೋಡಿಸಬೇಕೆಂದು ಬಿಜೆಪಿ ಮಹಿಳಾ ಕಾರ್ಯಕರ್ತೆ ಭಾಗ್ಯಾ ಉದ್ನೂರ ಹೇಳಿದರು.ಗಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಮಹಿಳಾ ಮಂಡಳ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಹಿಳೆ ಸಮಾಜದಲ್ಲಿ ಎತ್ತರದ ಸಾಧನೆ ಮಾಡಲು ಮೊದಲು ಧೈರ್ಯವಂತಳಾಗಬೇಕು. ನಾರಿ ಶಕ್ತಿ ದೇಶದ ಮಹೋನ್ನತ ಪ್ರಗತಿಗೆ ಸಾಕ್ಷಿಯಾಗಿದೆ. ಪ್ರತಿಯೊಬ್ಬ ಮಹಿಳೆ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕೆಂದರು.
ಶ್ರೀಕೃಷ್ಣ ಯೋಗಾಶ್ರಮದ ಡಾ.ಲಕ್ಷ್ಮೀ ಹಡಗಲಿ ಮಾತನಾಡಿ, ಮಹಿಳೆ ತನ್ನ ಸಂಸಾರದ ಜಂಜಾಟದಲ್ಲಿ ದಿನನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಮಾಡಬೇಕು. ಆರೋಗ್ಯ ಕೆಡುವ ಮುನ್ನ ಆರೋಗ್ಯದ ಕಾಳಜಿ ವಹಿಸಬೇಕು ಎಂದರು.ಕೋಟೆಕಲ್ಲ ಗ್ರಾಪಂ ಪಿಡಿಒ ಆರತಿ ಕ್ಷತ್ರಿ ಮಾತನಾಡಿ, ಮಹಿಳೆ ಅನಾದಿಕಾಲದಿಂದಲೂ ಶಕ್ತಿವಂತಳು. ಸಾಧನೆ ಶಿಖರ ಏರಿದ್ದಾಳೆ. ಮಹಿಳೆ ಸಮಾಜದಲ್ಲಿ ಆದರ್ಶ ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕೆಂದರು.
ಆರ್ಯವೈಶ್ಯ ಮಹಿಳಾ ಸಮಾಜದ ಅಧ್ಯಕ್ಷೆ ಅನುಪಮಾ ಧಾರವಾಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಅನಿತಾ ಬಿಜಾಪೂರ, ಖಜಾಂಚಿ ಸುಜಾತಾ ಬೋನಗೇರಿ, ರಶ್ಮೀ ಬಿಜಾಪೂರ, ಸಮಾಜದ ಹಿರಿಯರಾದ ಶೋಭಾ ಸುರೇಬಾನ, ಪಾರ್ವತಿ ಹೇಮಾದ್ರಿ, ಗೀತಾ ಧಾರವಾಡ, ನಮಿತಾ ಬಿಜಾಪೂರ, ಶ್ರೀಲಕ್ಷ್ಮೀ ಬಿಜಾಪೂರ, ಲಕ್ಷ್ಮೀ ತಾವರಗೇರಿ, ಸಮಾಜದ ಅಧ್ಯಕ್ಷ ಹನಮಂತಪ್ಪ ಅಗಡಿ, ಜಗದೀಶ ಹೇಮಾದ್ರಿ, ಮಂಜುನಾಥ ಧಾರವಾಡ, ಈರಣ್ಣ ತಾವರಗೇರಿ, ಮಂಜುನಾಥ ಬಿಜಾಪೂರ, ಶ್ರೀನಿವಾಸ ಬಿಜಾಪೂರ ಇದ್ದರು.