ಸಾರಾಂಶ
ಎಂಜಿನಿಯರಿಂಗ್ ವಿಭಾಗದ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿ ಫಿಸಿಕ್ಸ್‌ನಲ್ಲಿ ೧೦೦ ಪರ್ಸೆಂಟೈಲ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಎಂಜಿನಿಯರಿಂಗ್ ವಿಭಾಗದ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿ ಫಿಸಿಕ್ಸ್‌ನಲ್ಲಿ ೧೦೦ ಪರ್ಸೆಂಟೈಲ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ೨೦೨೫ರ ಜನವರಿಯಲ್ಲಿ ನಡೆದ ಜೆಇಇ ಪರೀಕ್ಷೆಯಲ್ಲಿ ಕಾಲೇಜಿನ ಶಿವನಗೌಡ ಎಸ್. ಪಾಟೀಲ್ ಹಾಗೂ ಶ್ರೇಯಾ ಎಸ್. ಪಾಟೀಲ್ ಇವರು ಪಿಸಿಕ್ಸ್‌ನಲ್ಲಿ ೧೦೦ ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ. ಅದೇ ರೀತಿ ಕಾಲೇಜಿನ ೨೩ ವಿದ್ಯಾರ್ಥಿಗಳು ಮೂರು ವಿಷಯದಲ್ಲಿ ಸರಾಸರಿಯಾಗಿ ೯೯ ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದುಕೊಂಡಿದ್ದಾರೆ.ಉಳಿದಂತೆ ೬೨ ವಿದ್ಯಾರ್ಥಿಗಳು ೯೮ ಪರ್ಸೆಂಟೈಲ್‌ಗಿಂತ ಅಧಿಕ, ೯೪ ವಿದ್ಯಾರ್ಥಿಗಳು ೯೭ ಪರ್ಸೆಂಟೈಲ್‌ಗಿಂತ ಅಧಿಕ, ೧೩೦ ವಿದ್ಯಾರ್ಥಿಗಳು ೯೬ ಪರ್ಸೆಂಟೈಲ್‌ಗಿಂತ ಅಧಿಕ, ೧೭೦ ವಿದ್ಯಾರ್ಥಿಗಳು ೯೫ ಪರ್ಸೆಂಟೈಲ್‌ಗಿಂತ ಅಧಿಕ ಹಾಗೂ ೩೪೫ ವಿದ್ಯಾರ್ಥಿಗಳು ೯೦ ಪರ್ಸೆಂಟೈಲ್‌ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ.ಅನಿಕೇತ್ ಮಗದಂ ೯೯.೭೮೯೩೪೭೭ ಪರ್ಸೆಂಟೈಲ್, ಯಶಸ್ ಯೋಗೀಂದ್ರ ೯೯.೭೮೯೩೪೭೭ ಪರ್ಸೆಂಟೈಲ್, ಕೆ.ರೆಹಾನ್ ಮೊಹಮ್ಮದ್ ೯೯.೭೬೯೩೯೯೬ ಪರ್ಸೆಂಟೈಲ್, ಯಶಸ್ ಪಾಟೀಲ್ ಜಿ.ಎಸ್. ೯೯.೭೨೫೪೫೧೩ ಪರ್ಸೆಂಟೈಲ್, ಲೋಹಿತ್ ಜಿ. ೯೯.೬೭೮೦೬೭೧ ಪರ್ಸೆಂಟೈಲ್, ಸಾಯಿಶ್ ಶ್ರವಣ ಪಂಡಿತ್ ೯೯.೫೭೯೩೬೧೭ ಪರ್ಸೆಂಟೈಲ್, ಕನ್ನಿಕಾ ಇ. ೯೯.೫೫೨೪೬೯೭ ಪರ್ಸೆಂಟೈಲ್, ವರುಣ್ ಸಿದ್ದಪ್ಪಗೌಡರ್ ೯೯.೫೧೦೪೧೪೬ ಪರ್ಸೆಂಟೈಲ್, ಅವನೀಶ್ ಬಿ ೯೯.೪೮೩೩೫೫೨ ಪರ್ಸೆಂಟೈಲ್, ತನುಷ್ ಗಿರೀಶ್ ಶಹಾಪುರಮಠ ೯೯.೪೪೭೬೧೪೭ ಪರ್ಸೆಂಟೈಲ್, ಎಸ್.ಪಿ. ದುಶ್ಯಂತ್ ಜೈನ್ ೯೯.೪೨೩೦೮೭೬ ಪರ್ಸೆಂಟೈಲ್, ಪ್ರಜ್ವಲ್ ಭಟ್ ೯೯.೪೦೨೩೪೭೬ ಪರ್ಸೆಂಟೈಲ್, ಸೂರಜ್ ಸಿ. ಬೆಳಗೂರ್ ೯೯.೩೭೩೦೧೦೯ ಪರ್ಸೆಂಟೈಲ್, ಸಿದ್ದೇಶ್ ಬಿ.ದಮ್ಮಳ್ಳಿ ೯೯.೩೭೧೨೩೩೩ ಪರ್ಸೆಂಟೈಲ್, ಎಲ್.ಎನ್. ಸ್ಕಂದನ್ ೯೯.೩೪೦೩೬೯೪ ಪರ್ಸೆಂಟೈಲ್, ವಚನ್ ಎಲ್.ಎ. ೯೯.೩೩೬೬೩೯೬ ಪರ್ಸೆಂಟೈಲ್, ಲಕ್ಷ್ಯ ಎಲ್.ಪೂಜಾರ್ ೯೯.೩೨೫೭೫೩ ಪರ್ಸೆಂಟೈಲ್, ಅನನ್ಯ ರಾಘವೇಂದ್ರ ದೇವಾಡಿಗ ೯೯.೨೩೪೨೧೪೧ ಪರ್ಸೆಂಟೈಲ್, ಮನ್ವಿತ್ ವಿಶಾಲ್ ಎಸ್.ಆರ್. ೯೯.೧೮೮೫೩೫೧ ಪರ್ಸೆಂಟೈಲ್, ಕಾರ್ತಿಕೇಯ ಆರ್.ಮಯ್ಯ ೯೯.೧೭೭೩೩೮೯ ಪರ್ಸೆಂಟೈಲ್, ಎನ್.ಬಿ. ಸಾನಿಕಾ ೯೯.೧೪೭೭೬೧೨ ಪರ್ಸೆಂಟೈಲ್, ವಾದಿರಾಜ್ ಜಿ.ಚಪ್ಪರ್ ೯೯.೦೪೧೧೩೧೯ ಪರ್ಸೆಂಟೈಲ್, ಸುಚಿತ್ ಪಿ.ಪ್ರಸಾದ್ ೯೯.೦೩೪೯೯೮೨ ಪರ್ಸೆಂಟೈಲ್ ಪಡೆದಿದ್ದಾರೆ. ಈ ಮೂಲಕ ಸಂಸ್ಥೆಯ ಒಟ್ಟು ೨೩ ವಿದ್ಯಾರ್ಥಿಗಳು ೯೯ ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ.ಈ ಎಲ್ಲ ವಿದ್ಯಾರ್ಥಿಗಳ ಶ್ರಮದ ಸಾಧನೆಯನ್ನು ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಪರವಾಗಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.