ಸಾರಾಂಶ
ಸಿರವಾರ ಪಟ್ಟಣದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಶುಭ ಶುಕ್ರವಾರ ನಿಮಿತ್ತ ವಿಶೇಷ ಪ್ರಾರ್ಥನೆ ಸಭೆ ನಡೆಯಿತು.
ಸಿರವಾರ:ಏನು ತಿಳಿಯದೇ ಭೂಮಿ ಮೇಲೆ ಪಾಪ ಮಾಡಿ ಅಸಹಾಯಕತೆಯಿಂದ ಇದ್ದ ಪಾಪಿ ಮನುಜರನ್ನು ಪರಿವರ್ತನೆ ಮಾಡಲು ಯೇಸುಕ್ರಿಸ್ತನು ಭೂಮಿಗೆ ಬಂದನು ಎಂದು ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ಸನತ್ ಸತೀಶ ಕುಮಾರ ಹೇಳಿದರು.
ಪಟ್ಟಣದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಶುಭ ಶುಕ್ರವಾರ ಅಂಗವಾಗಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ, ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಆಡಿದ ಏಳು ಮಾತುಗಳು ಅತ್ಯಂತ ಮಹತ್ವ ಪೂರ್ಣ ಮಾತುಗಳಾಗಿದ್ದು, ಯೇಸು ಕ್ರಿಸ್ತನು ಭೂಮಿಗೆ ಬಂದು ಅನೇಕ ರೋಗಿಗಳನ್ನು ಸ್ವಸ್ಥ ಮಾಡಿದನು ಎಂದು ಹೇಳಿದರು. ಈ ಶುಕ್ರವಾರವು ಯೇಸುಕ್ರಿಸ್ತನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಸತ್ತವರೊಳಗೆ ಪುನರುತ್ಥಾನಗೊಂಡದ್ದನ್ನು ಗೌರವಿಸುವ ಹಬ್ಬವಾಗಿದೆ ಎಂದರು. 40 ದಿನಗಳ ಉಪವಾಸ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಪಾಪಗಳ ಕ್ಷಮಾಪಣೆ ಮಾಡಲು ಪ್ರಾರ್ಥನೆ ಮಾಡಲಾಯಿತು. ಸಭಾಪಾಲಕ ರಾಜಪ್ಪ, ಸಭಪಾಲನಾ ಸಮಿತಿ ಸದಸ್ಯರು, ಉಗ್ರಾಣಿಕರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.