ಸಾರಾಂಶ
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಹಾಗೂ ಸಂಸದ ರಾಧಾಕೃಷ್ಣ ದೊಡಮನಿ ಅವರು ಜಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ರೋಗಿಗಳ ಕುಂದು ಕೊರತೆ ಆಲಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಹಾಗೂ ಸಂಸದ ರಾಧಾಕೃಷ್ಣ ದೊಡಮನಿ ಅವರು ಜಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ರೋಗಿಗಳ ಕುಂದು ಕೊರತೆ ಆಲಿಸಿದರು.ಡೆಂಘೀ ಪ್ರಕರಣದ ವಾರ್ಡ್‌ಗಳಿಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಹಾಗೂ ರೋಗಿಗಳ ಆರೋಗ್ಯ ವಿಚಾರಿಸಿದರು. ಈವರೆಗೆ ಡೆಂಘೀ ಪ್ರಕರಣಗಳು ಎಷ್ಟು ಬಂದಿವೆ ವೈದ್ಯಾಧಿಕಾರಿಗಳಿಗೆ ವಿಚಾರಿಸಿದ್ದಾಗ ೧೯ ಪ್ರಕರಣಗಳು ಪತ್ತೆಯಾಗಿದ್ದು, ಎರಡು ಪ್ರಕರಣಗಳು ದಾಖಲಾಗಿವೆ ವೈದ್ಯಾಧಿಕಾರಿಗಳು ತಿಳಿಸಿದರು.
ತೀವ್ರ ನಿಗಾ ಘಟಕದ ಐಸಿಯುನಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಒಬ್ಬರೇ ಇರೋದನ್ನು ಗಮನಿಸಿದ ಸಚಿವರು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ರೋಗಿಗಳನ್ನು ನೋಡಿಕೊಳ್ಳಲು ಸಿಬ್ಬಂದಿ ನಿಯೋಜಿಸ ಎಂದು ಜೀಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದರು.ಸಚಿವರು ಪ್ರತಿಯೊಬ್ಬ ರೋಗಿಗಳನ್ನು ಮಾತನಾಡಿಸಿ, ಅವರು ಸೇರಿದ ದಿನಾಂಕ ದಾಖಲೆಗಳನ್ನು ಪರಿಶೀಲಿಸಿ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ, ಬೇಗನೆ ಚಿಕಿತ್ಸೆ ನೀಡಬೇಕೆಂದರು. ಕುಡಿಯುವ ನೀರಿನ ದುರಸ್ತಿ ಹಾಗೂ ಸುತ್ತಮುತ್ತ ಸ್ವಚ್ಫತೆ ಕಾಪಾಡಿಕೊಂಡು ಹೋಗಬೇಕು ರೋಗಿಗಳ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಲಹೆ ಸೂಚನೆಗಳನ್ನು ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ, ಡಾ.ಉಮೇಶ ಆರ್.ರಡ್ಡಿ, ಜಿಲ್ಲಾ ಸರ್ಜನ್ ಡಾ,ಓಂ ಪ್ರಕಾಶ ಅಂಬೂರೆ ಸೇರಿದಂತೆ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.