ಜೆಜೆಎಂ ನೀರು ಪೂರೈಕೆಗೆ ಚಾಲನೆ

| Published : Sep 28 2024, 01:28 AM IST

ಸಾರಾಂಶ

ಪಾವಗಡ: ಜೆಜೆಎಂನ ಕಾಮಗಾರಿಗೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮನೆಗಳಿಗೆ ಶುದ್ದ ನೀರು ಸರಬರಾಜಿಗೆ ಶಾಸಕ ಎಚ್‌.ವಿ.ವೆಂಕಟೇಶ್‌ ಚಾಲನೆ ನೀಡಿದರು.

ಪಾವಗಡ: ಜೆಜೆಎಂನ ಕಾಮಗಾರಿಗೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮನೆಗಳಿಗೆ ಶುದ್ದ ನೀರು ಸರಬರಾಜಿಗೆ ಶಾಸಕ ಎಚ್‌.ವಿ.ವೆಂಕಟೇಶ್‌ ಚಾಲನೆ ನೀಡಿದರು.

ತಾಲೂಕು ಆಡಳಿತ ಹಾಗೂ ಜಿಪಂ ಕುಡಿವ ನೀರು ಹಾಗೂ ನೈರ್ಮಲ್ಯ ಇಲಾಖೆ ವತಿಯಿಂದ ಶುಕ್ರವಾರ ತಾಲೂಕಿನ ಶಾಸಕರ ಸ್ವಗ್ರಾಮ ಹನುಮಂತನಹಳ್ಳಿ ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು,

ತಾಲೂಕಿನ ಜನತಗೆ ಶುದ್ದ ಕುಡಿವ ನೀರು ಕಲ್ಪಿಸುವ ಹಾಗೂ ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಕಷ್ಟ ತಪ್ಪಿಸುವ ಹಿನ್ನಲೆಯಲ್ಲಿ ಮನೆಮನೆಗೆ ನೀರು ಪೂರೈಕೆಗೆ ಜೆಜೆಎಂ ಯೋಜನೆ ಜಾರಿಗೆ ಬಂದಿದೆ. ನಮ್ಮ ತಂದೆ ವೆಂಕಟರಮಣಪ್ಪ ಶಾಸಕರಾಗಿದ್ದ ವೇಳೆ ಕೇಂದ್ರ ಸರ್ಕಾರದ ಈ ಯೋಜನೆ ಅನುಷ್ಟಾನಕ್ಕೆ ಬಂದಿತ್ತು. ರಾಜ್ಯ ಸರ್ಕಾರ ಆಸಕ್ತಿ ವಹಿಸಿ ಕಾಮಗಾರಿ ಪೂರ್ಣಗೊಳಿಸುತ್ತಿದೆ. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮನೆಮನೆಯ ನಲ್ಲಿ ಅಳವಡಿಕೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಶುದ್ದ ನೀರು ಪೂರೈಕೆಯ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಸಿಎಂ ಉದ್ಘಾಟನೆ ನೆರೆವೇರಿಸಿದ ಬಳಿಕ ತುಂಗಭದ್ರಾ ಯೋಜನೆಯ ಕುಡಿಯುವ ನೀರು ಇದೇ ಪೈಪ್‌ಲೈನ್‌ ಮೂಲಕ ಮನೆಮನೆಗೆ ಸರಬರಾಜು ಆಗಲಿದೆ ಎಂದರು.

ಈ ವೇಳೆ ಜಿಪಂ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಜೆಇ ಬಸವಲಿಂಗಪ್ಪ, ಮರಿದಾಸನಹಳ್ಳಿ ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಹನುಮಂತರಾಯಪ್ಪ, ಮುಖಂಡ ವಿ.ಚಿಂತಲರೆಡ್ಡಿ, ಹನುಮಂತರಾಯಪ್ಪ, ಓಬಳಪ್ಪ, ಶ್ರೀರಾಮಪ್ಪ ಹಾಗೂ ಇತರೆ ಆನೇಕ ಮಂದಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.