ಜ್ಞಾನಾಮೃತ ಉತ್ತಮ ಸಾಧನೆ: 57 ಡಿಸ್ಟಿಂಕ್ಷನ್, 123 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

| Published : Apr 10 2025, 01:02 AM IST

ಸಾರಾಂಶ

ಪ್ರತಿವರ್ಷವೂ ಉತ್ತಮ ಫಲಿತಾಂಶ ಪಡೆಯುತ್ತಿರುವ ನಗರ ಹೊರ ವಲಯದ ಜ್ಞಾನಾಮೃತ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಸಾಧನೆಗೈದಿದ್ದಾರೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಪ್ರತಿವರ್ಷವೂ ಉತ್ತಮ ಫಲಿತಾಂಶ ಪಡೆಯುತ್ತಿರುವ ನಗರ ಹೊರ ವಲಯದ ಜ್ಞಾನಾಮೃತ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಸಾಧನೆಗೈದಿದ್ದಾರೆ.

ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದ 200 ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು, 123 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ರಾಜ ಪೃಥ್ವೀಸೇನ್ ಮೋದಿ 584, ಶಶಾಂಕ್ 580, ಗವೀಶ್ ಎಸ್ 574, ಸಾಯಿದ ಅಮೀರ ಉಜ್ಮಾ 571 ಹಾಗೂ ವಾಣಿಜ್ಯ ವಿಭಾಗದಲ್ಲಿ ಮಿಸ್ಬಾ 576 ಅಂಕ ಪಡೆದಿದ್ದಾರೆ.

ಮರ್ಚೇಡ್ ಟ್ರಸ್ಟ್‌ನ ಅಧ್ಯಕ್ಷ ಎಂ.ಜಿ. ಗೌಡ ಹಾಗೂ ಮಲ್ಲಿಕಾರ್ಜುನಗೌಡ ಹಾಗೂ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸಿದ್ದಾರೆ.ಶ್ರೀಸನ್ನಿಧಿ ಪಿಯು ಕಾಲೇಜಿಗೆ ಶೇ. 95.7 ಫಲಿತಾಂಶ:

ಕೊಟ್ಟೂರು ಪಟ್ಟಣದ ಶ್ರೀಸನ್ನಿಧಿ ಪಿಯು ಕಾಲೇಜು ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಒಟ್ಟಾರೆ ಶೇ.95.7 ಫಲಿತಾಂಶ ಪಡೆದಿದೆ.ವಿಜ್ಞಾನ ವಿಭಾಗದಲ್ಲಿ ಶೆ. 96.5 ಫಲಿತಾಂಶ ಪಡೆದಿದ್ದು, ಪರೀಕ್ಷೆ ಬರೆದ 235 ವಿದ್ಯಾರ್ಥಿಗಳ ಪೈಕಿ 81 ಡಿಸ್ಟಿಂಕ್ಷನ್, 139 ಮೊದಲ ದರ್ಜೆ, 7 ಎರಡನೇ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಪಿ.ವಿಜಯಲಕ್ಷ್ಮೀ (587), ಆರ್.ದೀಪಾ (582), ಬಿ.ವಿಷ್ಣುವರ್ಧನ (577) ಅಂಕ ಪಡೆದು ಕಾಲೇಜಿನ ಟಾಪ್ 3 ಸ್ಥಾನದಲ್ಲಿದ್ದಾರೆ.ಶೇ.91.2 ಫಲಿತಾಂಶ ಪಡೆದ ವಾಣಿಜ್ಯ ವಿಭಾಗದಲ್ಲಿದ್ದ 57 ವಿದ್ಯಾರ್ಥಿಗಳ ಪೈಕಿ 15 ಡಿಸ್ಟಿಂಕ್ಷನ್, 33 ಮೊದಲ ದರ್ಜೆ, 5 ಎರಡನೇ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಸಿ.ಪ್ರದೀಪ (582), ಜಿ.ಮಂಜುನಾಥ (569), ಜಿ.ಕೆ. ಸಾಯಿ ರೋಹಿತ್ (557) ಮೊದಲ ಮೂರು ಸ್ಥಾನ ಪಡೆದಿದ್ದಾರೆ.

ಶೇ. 96.3 ಫಲಿತಾಂಶ ಪಡೆದ ಕಲಾ ವಿಭಾಗದಲ್ಲಿದ್ದ 82 ವಿದ್ಯಾರ್ಥಿಗಳ ಪೈಕಿ 36 ಡಿಸ್ಟಿಂಕ್ಷನ್, 39 ಮೊದಲ ದರ್ಜೆ, 4 ಎರಡನೇ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಕೆ.ಶೃತಿ (586), ಬಿಎಚ್ ಅನು (582), ರಡ್ಡೇರ ಕೀರ್ತನ (582) ಮೊದಲ ಮೂರು ಸ್ಥಾನ ಪಡೆದಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ. ನಾಗಭಾಸ್ಕರರಾವ್ ತಿಳಿಸಿದ್ದಾರೆ.