ಸಾರಾಂಶ
ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಗುಡಿ ಕೈಗಾರಿಕೆ, ಗ್ರಾಮ ನೈರ್ಮಲ್ಯ ವ್ಯವಸ್ಥೆ, ಗ್ರಾಮ ಸ್ವರಾಜ್ಯದಂತಹ ಕನಸಿನ ಯೋಜನೆಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮ೦ಡಳಿ ಅಧ್ಯಕ್ಷ ಎಸ್.ಸುಧೀಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಗುಡಿ ಕೈಗಾರಿಕೆ, ಗ್ರಾಮ ನೈರ್ಮಲ್ಯ ವ್ಯವಸ್ಥೆ, ಗ್ರಾಮ ಸ್ವರಾಜ್ಯದಂತಹ ಕನಸಿನ ಯೋಜನೆಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮ೦ಡಳಿ ಅಧ್ಯಕ್ಷ ಎಸ್.ಸುಧೀಂದ್ರ ಹೇಳಿದರು.ಬುಧವಾರ ಕರ್ನಾಟಕ ರಾಜ್ಯ ಇಂಧನ ಅಭಿವೃದ್ಧಿ ಮಂಡಳಿ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆದ ‘155ನೇ ಗಾಂಧಿ ಜಯಂತಿ’ ಕಾರ್ಯಕ್ರಮದಲ್ಲಿ ರಾಜ್ಯ 34 ಜೈವಿಕ ಇಂಧನ ಮಾಹಿತಿ. ಸಂಶೋಧನೆ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳಲ್ಲಿ ಏಕಕಾಲದಲ್ಲಿ ‘ಜೈವಿಕ ಇಂಧನ (ಬಯೋಡೀಸೆಲ್) ಚಾಲನಾ ಪ್ರಾತ್ಯಕ್ಷಿತೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗಾಂಧೀಜಿ ಅವರು ಗ್ರಾಮೀಣಾಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅದೇ ರೀತಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಕೈಗೊಂಡಿರುವ ಕಾರ್ಯಯೋಜನೆಗಳು ಕೂಡ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿ, ಇಂಧನ ಸ್ವಾವಲಂಬನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜೈವಿಕ ಇಂಧನ ಸಸಿ ಬೆಳೆಸುವುದು, ಅವುಗಳ ನಿರ್ವಹಣೆ, ಬೀಜ ಸಂಗ್ರಹಣೆ ಮತ್ತು ಮಾರಾಟವು ರೈತರು, ಕೂಲಿ ಕಾರ್ಮಿಕರ ಜೀವನ ಮಟ್ಟ ಸುಧಾರಣೆಯಲ್ಲಿ ಬದಲಾವಣೆ ತರುತ್ತದೆ ಎಂದರುಕಾರ್ಯಕ್ರಮದಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಎಲ್.ಕೆ.ಎಸ್.ಎಸ್. ಕೃಷಿ ವಿವಿ ಜೈವಿಕ ಇಂಧನ ಸಂಯೋಜಕ ಡಾ। ಮುತ್ತುರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಆರ್.ಲೋಹಿತ್, ರಂಗನರಸಿಂಹಯ್ಯ, ಲೆಕ್ಕಾಧಿಕಾರಿಗಳು, ಯೋಜನಾ ಸಮಾಲೋಚಕ ಡಾ। ದಯಾನಂದ, ಸಿಬ್ಬಂದಿ ಉಪಸ್ಥಿತರಿದ್ದರು.