ಸಾರಾಂಶ
ಬೃಹತ್ ಉದ್ಯೋಗ ಮೇಳದಲ್ಲಿ ಶಕುಂತಲಾಬಾಯಿ ಬಿ. ದಂಡಿನ
ಕನ್ನಡಪ್ರಭ ವಾರ್ತೆ ಗದಗಗದಗ ಪರಿಸರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆಗಳಿಂದ ಮುಕ್ತರಾಗಲು ಕಾಲ ಕಾಲಕ್ಕೆ ಇಂತಹ ಬೃಹತ್ ಉದ್ಯೋಗ ಮೇಳಗಳು ಜರುಗುತ್ತಿರಬೇಕು. ಅಂದಾಗ ಮಾತ್ರ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉದ್ಯೋಗ ಪಡೆದು ಆರ್ಥಿಕವಾಗಿ ಸದೃಢರಾಗಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ಶಕುಂತಲಾಬಾಯಿ ಬಿ. ದಂಡಿನ ಹೇಳಿದರು.
ಕೆ.ಎಸ್.ಎಸ್. ಕಾಲೇಜು ಹಾಗೂ ಸ್ನಾತಕ್ಕೋತ್ತರ ಅಧ್ಯಯನ ಕೇಂದ್ರ ಹಾಗೂ ಚೇತನಾ ಬಿಜಿನೆಸ್ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ಜರುಗಿದ ಬೃಹತ್ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹುಬ್ಬಳ್ಳಿಯ ಚೇತನ ಬಿಜಿನೆಸ್ ಸ್ಕೂಲಿನ ನಿರ್ದೇಶಕ ಡಾ. ಎಂ.ವಿ. ಕೊರವಿ ಮಾತನಾಡಿ, ಪ್ರತಿಭೆ, ನೈಪುಣ್ಯತೆ, ನಿರಂತರ ಪರಿಶ್ರಮವನ್ನು ಯುವಕರು ಕಾಲಕ್ಕೆ ತಕ್ಕಂತೆ ಮೈಗೂಡಿಸಿಕೊಂಡಲ್ಲಿ ಉದ್ಯೋಗಗಳು ತಾವೇ ಅರಿಸಿಕೊಂಡು ಬರುತ್ತವೆ ಎಂದರು.
ಈ ಬೃಹತ್ ಉದ್ಯೋಗ ಮೇಳದಲ್ಲಿ 25ಕ್ಕೂ ಹೆಚ್ಚುರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಉದ್ಯೋಗ ನೀಡುವ ಕಂಪನಿಗಳು ಆಗಮಿಸಿದ್ದವು. ಅವುಗಳಲ್ಲಿ 361 ಅಭ್ಯರ್ಥಿಗಳು ವಿವಿಧ ಕಂಪನಿಗಳಿಂದ ಉದ್ಯೋಗವನ್ನು ಪಡೆದುಕೊಂಡರು.ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರವೀಂದ್ರನಾಥ ಬಿ. ದಂಡಿನ, ಜಂಟಿ ಕಾರ್ಯದರ್ಶಿ ಡಾ. ಪುನೀತಕುಮಾರ ಬೆನಕನವಾರಿ, ಡಾ. ಎ.ಆರ್. ವಡಕಣ್ಣವರ, ಡಾ. ವಿ.ಆರ್. ಹಿರೇಮಠ, ಡಾ. ಕಿಶೋರ ಎಂ., ಡಾ. ಬಿ.ಎಫ್. ಗಾಮನಗಟ್ಟಿ, ಕಿರಣಕುಮಾರ ಗಲಗಲಿ, ಡಾ. ಅನಿರುದ್ಧ ಅಂಕೋಲೆಕರ, ಡಾ. ಥಡಿ, ಸಂಕೇತ ರವೀಂದ್ರನಾಥ ದಂಡಿನ, ಡಾ. ಸ್ಫೂರ್ತಿ ಬೆನಕನವಾರಿ, ಡಾ. ಡಿ.ಬಿ. ಗವಾನಿ, ಜಿ.ಸಿ. ಜಂಪಣ್ಣವರ ಹಾಗೂ ವಿವಿಧ ಕಂಪನಿಗಳ ಹೆಚ್.ಆರ್.ಗಳು, ಎಸ್.ಎನ್. ಉಳ್ಳಾಗಡ್ಡಿ, ಎಂ.ಬಿ. ಡಂಬಳ, ಪ್ರೊ. ಕುಮಾರ ವಜ್ಜಲದ ಇದ್ದರು. ಜ್ಯೋತಿ ಐಲಿ ಸಂಗಡಿಗರು ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕ ಪ್ರೊ. ಎಸ್.ಎಸ್. ರಾಯ್ಕರ ಸ್ವಾಗತಿಸಿದರು. ಪ್ರೊ. ಎಸ್.ಕೆ. ವಂಡಕರ ನಿರೂಪಿಸಿದರು. ಪ್ರೊ. ಎಸ್.ಬಿ. ಪಲ್ಲೇದ ವಂದಿಸಿದರು.