ಸಾರಾಂಶ
ಹುಬ್ಬಳ್ಳಿ:
ಮುಗಳೊಳ್ಳಿ-ಜಡ್ರಾಮಕುಂಟಿ- ಆಲಮಟ್ಟಿ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಕೈಗೊಂಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ.ಫೆ. 17ರಿಂದ 25ರ ವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಸೊಲ್ಲಾಪುರ ಡೈಲಿ ಪ್ಯಾಸೆಂಜರ್ (56906), ಫೆ. 18ರಿಂದ 26ರ ವರೆಗೆ ಸೊಲ್ಲಾಪುರ- ಧಾರವಾಡ ಡೈಲಿ ಪ್ಯಾಸೆಂಜರ್ ಸ್ಪೆಷಲ್, ಫೆ. 25ರಂದು ಸೊಲ್ಲಾಪುರ-ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ (11415) ಮತ್ತು ಫೆ. 26 ರಂದು ಹೊಸಪೇಟೆ-ಸೊಲ್ಲಾಪುರ ಡೈಲಿ ಎಕ್ಸ್‌ಪ್ರೆಸ್ (11416) ರೈಲುಗಳ ಪ್ರಯಾಣವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ರೈಲುಗಳ ಸಂಚಾರ ಭಾಗಶಃ ರದ್ದು:ಫೆ. 17ರಿಂದ 25ರ ವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ವಿಶೇಷ ರೈಲು(06919), ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು (06920) ವಿಜಯಪುರದ ಬದಲು ಬಾಗಲಕೋಟೆಯಿಂದ ಪ್ರಾರಂಭವಾಗಲಿದೆ.
ನಿಲುಗಡೆ ರದ್ದು:ಫೆ. 20ರಿಂದ 24ರ ವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಹೈದರಾಬಾದ್ ಡೈಲಿ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ- 17319) , ಹೈದರಾಬಾದ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ (17320), ಫೆ. 23ರಿಂದ ಬನಾರಸ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ (17324), ಫೆ. 21ರಿಂದ 25ರ ವರೆಗೆ ಹೊಸಪೇಟೆ-ಸೊಲ್ಲಾಪುರ ಡೈಲಿ ಎಕ್ಸ್‌ಪ್ರೆಸ್(11416), ಫೆ. 21ರಿಂದ 25ರ ವರೆಗೆ ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ (07330), ಸೊಲ್ಲಾಪುರ- ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ (56905), ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ ಡೈಲಿ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್(07329), ಧಾರವಾಡ- ಸೊಲ್ಲಾಪುರ ಡೈಲಿ ಪ್ಯಾಸೆಂಜರ್ (07322), ಫೆ. 21ರಿಂದ ಎಸ್‌ಎಸ್‌ಎಸ್ ಹುಬ್ಬಳ್ಳಿ-ಬನಾರಸ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (17323) ರೈಲುಗಳ ನಿಲುಗಡೆ ರದ್ದುಗೊಳಿಸಲಾಗಿದೆ.
ಫೆ. 19ರಿಂದ 25ರ ವರೆಗೆ ಹೊಸಪೇಟೆ-ಸೊಲ್ಲಾಪುರ ಡೈಲಿ ಎಕ್ಸ್ ಪ್ರೆಸ್ (11416), ಸೊಲ್ಲಾಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ (56905), ಧಾರವಾಡ-ಸೊಲ್ಲಾಪುರ ಡೈಲಿ ಪ್ಯಾಸೆಂಜರ್ ಸ್ಪೆಷಲ್ (07322) ರೈಲುಗಳು ಜಡ್ರಾಮಕುಂಟಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.