ವೈಭವದಿಂದ ಜರುಗಿದ ಜೋಡು ರಥೋತ್ಸವ

| Published : Feb 11 2024, 01:50 AM IST

ಸಾರಾಂಶ

ಕೆರೂರ: ಸಮೀಪದ ಅನವಾಲ ಗ್ರಾಮದಲ್ಲಿ ಅನ್ನಬ್ರಹ್ಮನೆಂದು ಜನಮಾನಸದಲ್ಲಿ ವಿರಾಜ ಮಾನರಾದ ಸದ್ಗುರು ಶ್ರದ್ಧಾನಂದರ ಜೋಡಿ ರಥೋತ್ಸವ ಶುಕ್ರವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಜಯಕಾರದೊಂದಿಗೆ ವೈಭವದಿಂದ ಜರುಗಿತು. ಬೆಳಗ್ಗೆ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸಂತ ಮಹಾಂತರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರವಚನಗಳು ನಡೆದವು.

ಕನ್ನಡಪ್ರಭ ವಾರ್ತೆ ಕೆರೂರ

ಸಮೀಪದ ಅನವಾಲ ಗ್ರಾಮದಲ್ಲಿ ಅನ್ನಬ್ರಹ್ಮನೆಂದು ಜನಮಾನಸದಲ್ಲಿ ವಿರಾಜ ಮಾನರಾದ ಸದ್ಗುರು ಶ್ರದ್ಧಾನಂದರ ಜೋಡು ರಥೋತ್ಸವ ಶುಕ್ರವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಜಯಕಾರದೊಂದಿಗೆ ವೈಭವದಿಂದ ಜರುಗಿತು.

ಬೆಳಗ್ಗೆ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸಂತ ಮಹಾಂತರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರವಚನಗಳು ನಡೆದವು. ಒಂದು ರಥದಲ್ಲಿ ಪೂರ್ಣಾನಂದ ಶ್ರೀಗಳ, ಇನ್ನೊಂದು ರಥದಲ್ಲಿ ಶ್ರದ್ಧಾನಂದ ಶ್ರೀಗಳ ಮೂರ್ತಿಗಳನ್ನು ಇಟ್ಟು ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥಕ್ಕೆ ಉತ್ತತ್ತಿ ಬಾಳೆಹಣ್ಣು, ಪುಷ್ಪ ಅರ್ಪಿಸಿ ಭಕ್ತಿಭಾವ ಮೆರೆದರು. ಹಾಸನದ ಆದಿ ಚುಂಚನಗಿರಿ ಮಠದ ಶಂಭುನಾಥ ಶ್ರೀಗಳು ಸಾನಿಧ್ಯ ವಹಿಸಿದ್ದರು. ಶ್ರೀಮಠದ ಕೈಲಾಸನಾಥ ಶ್ರೀ, ಸೀತಿಮನಿಯ ವಷಿಷ್ಟ ಶ್ರೀ, ಶಾಖಾಮಠದ ಗುರುಗಳು ರಥೋತ್ಸವಕ್ಕೆ ಸಾಕ್ಷಿಯಾಗಿದ್ದರು. ಡಾ.ಎಂ.ಜಿ.ಕಿತ್ತಲಿ, ಎನ್‌.ಎನ್‌. ಪಾಟೀಲ, ಕಮಲಗೌಡ ಪಾಟೀಲ, ವೆಂಕಟೇಶ ಲಮಾಣಿ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.