ಜಾನ್ಸನ್ ಡಿಸೋಜ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

| Published : May 19 2024, 01:51 AM IST

ಸಾರಾಂಶ

ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ವಿರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯ ಜಾನ್ಸನ್‌ ಡಿಸೋಜ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇತ್ತೀಚಿಗೆ ವಿರಾಜಪೇಟೆಯ ಸಂತ ಅನ್ನಮ್ಮ ದ್ವಿ ಶತಮಾನೋತ್ಸವದ ಸಭಾಂಗಣದಲ್ಲಿ ನಡೆದ ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ವಿರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯ ಜಾನ್ಸನ್ ಡಿಸೋಜ ಅವರು ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ವಿರಾಜಪೇಟೆ ತೆಲುಗರ ಬೀದಿಯ ಜೋಸೆಫ್ ಡಿಸೋಜ, ಪ್ರಧಾನ ಕಾರ್ಯದರ್ಶಿಯಾಗಿ ಡ್ಯಾನಿಯಲ್ ಸಾಲ್ಡಾನ, ಖಜಾಂಚಿಯಾಗಿ ಅಗಸ್ಟಿನ್ ಸೇವಿಯರ್, ಕ್ರೀಡಾ ಕಾರ್ಯದರ್ಶಿಯಾಗಿ ಬಿಲ್ಟನ್ ವಾಜ್, ಸಹ ಕ್ರೀಡಾ ಕಾರ್ಯದರ್ಶಿಯಾಗಿ ಲೆನೋಕ್ಸ್ ಆಂತೋಣಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೆಫೆಲ್ ಪ್ರಿನ್ಸ್ ಅವರು ಆಯ್ಕೆಯಾದರು.

ಈ ಸಂದರ್ಭ ಕ್ರೈಸ್ತ ಧರ್ಮದ ಸಂಘದ ಹಿರಿಯ ಸದಸ್ಯರಾದ ಮರ್ವಿನ್ ಲೋಬೊ, ಜೂಡಿ ವಾಸ್, ರಾಬರ್ಟ್, ಪಟ್ಟಣ ಪಂಚಾಯಿತಿ ಸದಸ್ಯರಾದ ಅಗಸ್ಟೀನ್ ಬೆನ್ನಿ, ಬ್ಲೆಸಿ ಸೇರಿದಂತೆ ಅನೇಕ ಮಂದಿ ಹಾಜರಿದ್ದರು.