ವಿಶ್ವದಲ್ಲಿರುವ ಎಲ್ಲ ಪ್ರಬೇಧಗಳನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿ ಇರುವುದು ಅರಣ್ಯ ಇಲಾಖೆಗೆ. ಪರಿಸರ ಸುಸ್ಥಿರ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಮಹತ್ತರ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಮಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವಿಶ್ವದಲ್ಲಿರುವ ಎಲ್ಲ ಪ್ರಬೇಧಗಳನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿ ಇರುವುದು ಅರಣ್ಯ ಇಲಾಖೆಗೆ. ಪರಿಸರ ಸುಸ್ಥಿರ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಮಹತ್ತರ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಮಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಹೇಳಿದರು.ಮಂಗಳೂರಿನ ಬೆಸೆಂಟ್ ಪಿ.ಯು.ಕಾಲೇಜು ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ದ.ಕ. ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ-2025ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಶೇ.80ರಷ್ಟು ಎಕರೆ ಅರಣ್ಯದ ಭಾಗವನ್ನು ನೀಡಲಾಗಿದೆ. ಇದಲ್ಲದೆ ಕುಡಿಯುವ ನೀರು, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಅರಣ್ಯ ಬಳಕೆಯಾಗುತ್ತಿದೆ. ಶೇ.70ರಷ್ಟು ವಿದ್ಯುತ್ ಉತ್ಪಾನೆ ಅರಣ್ಯ ಭಾಗದಲ್ಲಿ ನಡೆಯುತ್ತಿದೆ. ಪೆಟ್ರೋಲ್, ನ್ಯಾಚುರಲ್ ಗ್ಯಾಸ್ ಉತ್ಪಾದನೆಗಳಿಗೆ ಪರಿಸರ ಬಳಕೆ ಬೇಕು. ಪ್ಲಾಸ್ಟಿಕ್ ಬಳಕೆ ದೂರ ಮಾಡಬೇಕು. ಇದರ ಮರು ಬಳಕೆ ಆಗಬೇಕಾಗಿದೆ. ಹಾಗಾಗಿ ಪರಿಸರವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವ ಮೂಲಕ ಪರಿಸರ ಬದಲಾವಣೆಗೆ ಕಾರಣವಾಗಬಾರದು ಎಂದರು.ಜಾತಿ, ಧರ್ಮ ಇಲ್ಲದ ಚಿತ್ರಕಲೆ:
ರೋಟರಿ ಸೆಂಟ್ರಲ್ ಮಂಗಳೂರು ಇದರ ಅಧ್ಯಕ್ಷ ಭಾಸ್ಕರ ರೈ ಕಟ್ಟ ಮಾತನಾಡಿ, ಕಲೆಗೆ ಜಾತಿ, ಧರ್ಮ ಇಲ್ಲ. ಚಿತ್ರಕಲೆ ದೃಶ್ಯ ಹಾಗೂ ಸಂಭಾಷಣೆಯನ್ನು ಒಳಗೊಂಡಿರುತ್ತದೆ. ಹಿಂದೆ ರಾಜರ ಕಾಲದಲ್ಲೂ ಚಿತ್ರಕಲೆ ವಿಭಾಗಕ್ಕೆ ಪ್ರತ್ಯೇಕ ಮಂತ್ರಿಗಳೇ ಇರುತ್ತಿದ್ದರು. ಅಷ್ಟರ ಮಟ್ಟಿಗೆ ಚಿತ್ರಕಲೆಗೆ ಮಹತ್ವ ಇದೆ ಎಂದರು.ಈ ಸಂದರ್ಭ ಮಂಗಳೂರು ಜ್ಯೋತಿ ಸೈಕಲ್ ಕಂಪನಿ ಪಾಲುದಾರ ಬದ್ರಿನಾಥ್ ನಾಯಕ್ ಹಾಗೂ ಪ್ರೀತಿ ನಾಯಕ್, ಬೆಸೆಂಟ್ ಪಿಯು ಕಾಲೇಜು ಸಂಚಾಲಕ ಸತೀಶ್ ಕುಮಾರ್ ಭಟ್, ತೀರ್ಪುಗಾರರಾದ ಸತೀಶ್ ರಾವ್ ಮತ್ತು ಸುಧಾ ನಾಯ್ಕ್, ಕನ್ನಡಪ್ರಭ ಮಂಗಳೂರು ಆವೃತ್ತಿಯ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ನಿಡ್ಲೆ ಇದ್ದರು.
ಕನ್ನಡಪ್ರಭ ಮಂಗಳೂರು ಆವೃತ್ತಿಯ ಮುಖ್ಯಸ್ಥ ರಾಘವೇಂದ್ರ ಅಗ್ನಿಹೋತ್ರಿ ಸ್ವಾಗತಿಸಿದರು. ಉಪ ಸುದ್ದಿ ಸಂಪಾದಕ ಕೃಷ್ಣಮೋಹನ ತಲೆಂಗಳ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪ್ರಧಾನ ವರದಿಗಾರ ಆತ್ಮಭೂಷಣ್ ವಂದಿಸಿದರು. ಬಂಟ್ವಾಳ ವರದಿಗಾರ ಮೌನೇಶ್ ವಿಶ್ವಕರ್ಮ ನಿರೂಪಿಸಿದರು.ಸುದ್ದಿ ವಿಭಾಗದ ಹಿರಿಯ ವರದಿಗಾರ ಸಂದೀಪ್ ವಾಗ್ಲೆ, ಉಳ್ಳಾಲ ವರದಿಗಾರರಾದ ವಜ್ರೇಶ್ವರಿ, ಹಿರಿಯ ಉಪ ಸಂಪಾದಕರಾದ ಉಮೇಶ್ ಎಚ್.ಎಸ್, ಜಿನ್ನಪ್ಪ ಗೌಡ, ಉಪ ಸಂಪಾದಕರಾದ ದೇವಿ ಪ್ರಸಾದ್, ಮಾರುಕಟ್ಟೆ ವಿಭಾಗದ ಹಿರಿಯ ವ್ಯವಸ್ಥಾಪಕ ನಾಗರಾಜ್ ಯು.ಕೆ., ಅಕೌಂಟ್ಸ್ ವಿಭಾಗದ ಸಹಾಯಕ ವ್ಯವಸ್ಥಾಪಕ ದೀಕ್ಷಿತ್ ಕುಲಾಲ್ ಮತ್ತಿತರರು ಸಹಕರಿಸಿದರು. ದ.ಕ. ಜಿಲ್ಲಾ ಮಟ್ಟದ ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆ ಬಹುಮಾನ ವಿಜೇತರು4,5 ನೇ ತರಗತಿ ವಿಭಾಗದಲ್ಲಿ: ಸುಳ್ಯ ತಾಲೂಕು ಗೂನಡ್ಕ ಮಾರುತಿ ಪಬ್ಲಿಕ್ ಸ್ಕೂಲ್‌ನ ನಿಹಾಲ್ ಕೆ.ಎ. ಪ್ರಥಮ, ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಣಮ್ಯಾ ದ್ವಿತೀಯ, ಕಡಬದ ಸೈಂಟ್ ಆನ್ಸ್ ಶಾಲೆಯ ನಯೋನಿಕಾ ಬಿ.ಸಿ. ತೃತೀಯ, ಬೆಳ್ತಂಗಡಿ ತಾಲೂಕಿನ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಯಶ್ವಿತ್ ಹಾಗೂ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ರಿಯಾ ಸಮಾಧಾನಕರ.6,7ನೇ ತರಗತಿ ವಿಭಾಗದಲ್ಲಿ: ಮೂಡುಬಿದಿರೆ ತಾಲೂಕಿನ ರೋಟರಿ ಸೆಂಟ್ರಲ್ ಶಾಲೆ ಅಯನಾ ಪಿರೇರ ಪ್ರಥಮ, ಉಳ್ಳಾಲ ತಾಲೂಕು ಪರಿಜ್ಞಾನ ವಿದ್ಯಾಲಯದ ಧಾತ್ರಿ ದ್ವಿತೀಯ, ಬಂಟ್ವಾಳ ತಾಲೂಕು ಕುಕ್ಕಾಜೆ ಪ್ರಗತಿ ವಿದ್ಯಾಕೇಂದ್ರದ ಆದ್ಯಾ ಪಿ.ಬಿ. ತೃತೀಯ, ಸುಳ್ಯ ತಾಲೂಕು ಸರ್ಕಾರಿ ಹಿ.ಪ್ರಾ. ಶಾಲೆ ಕದಿಕಡ್ಕದ ವೈಷ್ಣವಿ ಹಾಗೂ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಲತಿಕಾ ಸಮಾಧಾನಕರ.8,9,10ನೇ ತರಗತಿ ವಿಭಾಗ: ಬಂಟ್ವಾಳ ತಾಲೂಕು ಕಾವಳಕಟ್ಟೆ ಸರ್ಕಾರಿ ಪ್ರೌಢಶಾಲೆಯ ಪೂರ್ವಿಕಾ ಎಂ.ಡಿ. ಪ್ರಥಮ, ಮೂಡುಬಿದಿರೆಯ ರೋಟರಿ ಸೆಂಟ್ರಲ್ ಶಾಲೆಯ ಆಶ್ನ ಲೇನಾ ಪಿರೇರ ದ್ವಿತೀಯ, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಸಾನ್ವಿ ಕೆ.ಡಿ. ತೃತೀಯ, ಮಂಗಳೂರು ಉರ್ವ ಕೆನರಾ ಶಾಲೆಯ ವೈ. ಹನ್ಸಿಕಾ ಹಾಗೂ ಮಂಗಳೂರು ಕುಳಾಯಿ ಅಂಕುರ್ ಆಂಗ್ಲ ಮಾಧ್ಯಮ ಶಾಲೆಯ ಕೀರ್ತನ್ ಸಮಾಧಾನಕರ.
ಪ್ರಥಮ ಸ್ಥಾನಿಗೆ ಸೈಕಲ್ ಬಹುಮಾನ!ವಿಜೇತರ ಪೈಕಿ 8,9,10ನೇ ತರಗತಿಯ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ವಿಜೇತರು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ವಿಭಾಗದ ಪ್ರಥಮ ಸ್ಥಾನ ವಿಜೇತೆ ಪೂರ್ವಿಕಾ ಎಂ.ಡಿ. ಮಂಗಳೂರು ಜ್ಯೋತಿ ಸೈಕಲ್ಸ್‌ನವರು ಪ್ರಯೋಜಿಸಿದ ಆಕರ್ಷಕ ಬೈಸಿಕಲ್ ಬಹುಮಾನ ಪಡೆದರು.ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಪರಿಣಾಮಕಾರಿ ಮಾಧ್ಯಮಗಳಲ್ಲಿ ಚಿತ್ರಕಲೆಯೂ ಒಂದು. ಕವಿ ಬರಹದ ಮೂಲಕ ಹೇಳುವುದನ್ನು ಕಲಾವಿದ ಚಿತ್ರದ ಮೂಲಕ ಹೇಳುತ್ತಾನೆ. ಮೌಖಿಕ ಸಾಹಿತ್ಯಕ್ಕೂ ಪುರಾಣಕಾಲದ ಚಿತ್ರಕಲೆಗಳು ಪ್ರೇರಣೆಯಾಗಿದೆ. -ಪ್ರದೀಪ ಕುಮಾರ ಕಲ್ಕೂರ, ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನ, ಮಂಗಳೂರುವಿವಿಧ ಸ್ಪರ್ಧೆಗಳಂತೆ ಚಿತ್ರಕಲಾ ಸ್ಪರ್ಧೆಯೂ ಒಂದು. ಪರಿಸರ ಸಂರಕ್ಷಣೆ ವಿಚಾರದಲ್ಲಿ ಈ ಸ್ಪರ್ಧೆ ಏರ್ಪಡಿಸಿರುವುದು ಅಭಿನಂದನಾರ್ಹ. ಇಲ್ಲಿ ಆಯ್ಕೆಯಾದವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಪರಿಸರ ಕಾಳಜಿಯ ಮಹತ್ವ ಈ ಮೂಲಕವೂ ಅನಾವರಣಗೊಳ್ಳುತ್ತಿದೆ.-ಪ್ರೀತಿ ನಾಯಕ್, ಜ್ಯೋತಿ ಸೈಕಲ್ ಕಂಪನಿಚಿತ್ರಕತೆಯಲ್ಲಿ ವಿದ್ಯಾರ್ಥಿಗಳು ತಮ್ಮ ಆಲೋಚನೆಯಲ್ಲಿ ಮೂಡಿದ್ದನ್ನು ಚಿತ್ರಿಸಬೇಕೇ ವಿನಃ ಗೆದ್ದ ಚಿತ್ರಗಳನ್ನು ಹಿಂಬಾಲಿಸಬಾರದು. ಪರಿಸರದ ಮೇಲಿನ ಪರಿಣಾಮವನ್ನು ಸ್ಪರ್ಧಿಗಳು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಇದು ಉತ್ತಮ ಬೆಳೆವಣಿಗೆ.
-ಸುಧಾ ನಾಯ್ಕ, ತೀರ್ಪುಗಾರರು20 ಪುಟಗಳ ಚಿತ್ರಕಲೆ ಒಂದು ಚಿತ್ರವನ್ನು ಹೇಳಬಲ್ಲದು. ಕನ್ನಡಪ್ರಭ ಪತ್ರಿಕೆ ಈ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ತನ್ನ ಪ್ರಭೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಹೀಗೆಯೇ ಮುಂದುವರಿಯಬೇಕು.-ಜನಾರ್ದನ ಹಂದೆ, ಕಲಾ ಪೋಷಕರು ಮಂಗಳೂರು