ಕ್ರೈಸ್ತ ಬಾಂಧವರ ಪ್ರಮುಖ ಕ್ರಿಸ್ತ ಜನನದ ಹಬ್ಬದ ಆಚರಣೆ ಮನೆ ಮನೆಗಳಲ್ಲಿ ಹರ್ಷ ಕಾಣಬಹುದು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕ್ರೈಸ್ತ ಬಾಂಧವರ ಪ್ರಮುಖ ಕ್ರಿಸ್ತ ಜನನದ (ಕ್ರಿಸ್‌ಮಸ್)ಹಬ್ಬದ ಆಚರಣೆ ಮನೆ ಮನಗಳಲ್ಲಿ ಹರ್ಷ ಕಾಣಬಹುದು. ಡಿಸೆಂಬರ್ ಆರಂಭದ ದಿನವೇ ಮನೆಗಳ ಮೇಲೆ ನಕ್ಷತ್ರ ತೂಗಿಸಿ ಕ್ರಿಸ್ಮಸ್ ಆಚರಣೆ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸುಂಟಿಕೊಪ್ಪ ದೇವಾಲಯಗಳಲ್ಲಿ ಕ್ರೈಸ್ತ ಧರ್ಮಗುರುಗಳು ಭರದ ಸಿದ್ಧತೆ ಪ್ರಾರಂಭಿಸಿದ್ದಾರೆ.

ಡಿಸೆಂಬರ್ ಮೊದಲ ವಾರವೇ ದೇವಾಲಯದಲ್ಲಿ ನೂತನ ಮಾದರಿಯ 5 ಬಣ್ಣದ ಮೊಂಬತ್ತಿಗಳನ್ನು ಪ್ರಾರ್ಥನ ಪೀಠದ ಮುಂದೆ ಅಳವಡಿಸಿ ಪ್ರತಿ ಭಾನುವಾರ ಬಲಿಪೂಜೆಯ ಸಂದರ್ಭ 5 ವಾರಗಳು ವಿಶೇಷ ಮೊಂಬತ್ತಿ ಉರಿಸುವ ಮೂಲಕ ಹಬ್ಬದ ಆಚರಣೆಗೆ ಮುನ್ನುಡಿ ಧರ್ಮಗುರುಗಳು ನೀಡುತ್ತಾರೆ. ಡಿ. 24 ರ ಮಧ್ಯ ರಾತ್ರಿಯಿಂದ ಆರಂಭಗೊಂಡರೇ ಜ 1 ರವರಗೆ ಹೊಸ ವರ್ಷದವರೆಗೂ ಈ ಹಬ್ಬ ಆಚರಿಸುವುದು ವಾಡಿಕೆಯಾಗಿದೆ. ಇತರೆ ಹಬ್ಬಗಳಿಗಿಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬದಲ್ಲಿ ಉಡುಗೊರೆಗಳನ್ನು ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾ ಹೆಚ್ಚು ಸಡಗರ ಸಂಭ್ರಮದಿಂದ ಆಚರಣೆಗೆ ಮುನ್ನುಡಿ ಇಡುತ್ತಾರೆ. ವಿವಿಧತೆಯಲ್ಲಿ ಏಕತೆ ಸಾರಿದ ಶಾಂತಿದೂತ ದೇವರ ಪುತ್ರ ಮಾನವರಾಗಿ ಭುವಿಯಲ್ಲಿ ಜನಿಸುವ ಮೂಲಕ ಅವರು ಕ್ರಿಸ್ತರ ಜನನದ ಹಬ್ಬವನ್ನು ಆಚರಿಸಿಕೊಳ್ಳಲು ಅಣಿಯಾಗುತ್ತಿರುವ ಈ ಸುಸಂದರ್ಭ ನೆನಪಿಸಿಕೊಂಡು ಆಚರಿಸಲಾಗುವ ಕ್ರೈಸ್ತ ಬಾಂಧವರು ವರ್ಷದ ಕೊನೆಯ ದಿನ ಹೊಸ ವರ್ಷದ ಸಡಗರ ಸಂಭ್ರಮದಲ್ಲಿ ಅಣಿಯಾಗುತ್ತಿರುವಂತೆಯೇ ಕ್ರೈಸ್ತ ಧರ್ಮಕೇಂದ್ರಗಳಿಂದ ಮನೆ ಮನೆಗಳಿಗೆ ತೆರಳಿ ಪ್ರಭು ಯೇಸುಕ್ರಿಸ್ತರ ಜನನದ ಕ್ಯಾರೋಲ್ಸ್ ಅಂಗವಾಗಿ ಸಾಂತಕ್ಲಾಸ್ ವೇಷಧಾರಿ, ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗೂ ಗಾಯನ ವೃಂದವರು ಪ್ರಾರ್ಥಿಸಿ, ಕ್ರಿಸ್ತರ ಶುಭಸಂದೇಶವನ್ನು ವಾಚಿಸಿ ಮನೆಯ ಮಂದಿಗೆ ಆಶೀರ್ವಚಿಸಿ ಶುಭಾಶಯ ಕೋರಿ ಈ ಹಬ್ಬದ ವೈಶಿಷ್ಟ್ಯತೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡುವುದು ವಾಡಿಕೆಯಾಗಿದೆ. ಕ್ರೈಸ್ತ ಬಾಂಧವರು ಡಿಸೆಂಬರ್ ಮಾಸದಲ್ಲಿ ಮನೆಗಳಿಗೆ ಸುಣ್ಣ ಬಣ್ಣ ಬಳಿದು ವಿವಿಧ ಬಗೆಯ ನಕ್ಷತ್ರಗಳನ್ನು ಮನೆಯ ಮೇಲ್ಛಾವಣಿಗಳ ಮೇಲೆ ಅಳವಡಿಸುತ್ತಾರೆ. ಮನೆಗಳಲ್ಲಿ ಕ್ರಿಸ್ತನ ಜನನದ ಸ್ಥಳವಾದ ಗೋದಲಿ (ದನದಕೊಟ್ಟಿಗೆ) ನಿರ್ಮಾಣವಾದರೆ, ಮಹಿಳೆಯರು ವಿವಿಧ ಬಗೆ ಬಗೆಯ ತಿಂಡಿ ಖಾದ್ಯಗಳನ್ನು ತಯಾರಿಸುವ ಸಡಗರ ಸಂಭ್ರಮಕ್ಕೆ ಅಣಿಯಾಗುತ್ತಿರುವಂತೆಯೇ ಸಾಂತಕ್ಲಾಸ್ ಅವರನ್ನು ಒಳಗೊಂಡ ಕ್ಯಾರೋಲ್ಸ್ ತಂಡವು ಆಗಮಿಸಿ ಆಶೀರ್ವಚನ ನೀಡಿ ಮನೆಯ ಮಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದೇ ಈ ಹಬ್ಬದ ವಿಶೇಷತೆ. ವಿಶ್ವದಾದ್ಯಂತ 2025 ರ ಕ್ರಿಸ್ತರ ಜನನದ ಹಬ್ಬವನ್ನು ಸಡಗರ ಸಂಭ್ರಮದಲ್ಲಿ ಆಚರಿಸಲು ಅಣಿಗೊಳ್ಳುತ್ತಿರುವ ಸುದಿನದ ಸಂದರ್ಭ ಸುಂಟಿಕೊಪ್ಪ ದೇವಾಲಯದಲ್ಲಿಯೂ ಕ್ರೈಸ್ತ ಧರ್ಮಗುರುಗಳು, ಕ್ರೈಸ್ತ ದೇವಾಲಯ, ಕ್ರೈಸ್ತ ಬಾಂಧವರು ಭರದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರಿಸ್ತರು ಜನಿಸಿದ ದಿನವನ್ನು ಕ್ರೈಸ್ತ ಬಾಂಧವರ ಮನೆಗಳಲ್ಲಿ ವಿವಿಧ ಬಣ್ಣ ಬಣ್ಣದ ನಕ್ಷತ್ರಗಳ ಮಿನುಗು ಕ್ರಿಸ್ತರು ಜನಿಸಿದ ಸ್ಥಳ ದನದಕೊಟ್ಟಿಗೆ (ಗೋದಲಿ) ನಿರ್ಮಾಣದೊಂದಿಗೆ ದೇವಾಲಯ ಅಲಂಕಾರಗೊಳಿಸಲು ಸಜ್ಜಾಗುತ್ತಿದ್ದಾರೆ. ಕ್ರೈಸ್ತ ಬಾಂಧವರ ಮನೆಗಳಿಗೆ ತೆರಳಿ ಪೂರ್ವಭಾವಿಯಾಗಿ ಕ್ಯಾರೋಲ್ಸ್ ಗಾಯನದ ಅಂಗವಾಗಿ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ರೇ. ಫಾ. ವಿಜಯಕುಮಾರ್, ಸಾಂತಕ್ಲಾಸ್ ವೇಷಧಾರಿಗಳು, ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು, ದೇವಾಲಯದ ಪಾ¯ನಾ ಸಮಿತಿಯ ಪದಾಧಿಕಾರಿಗಳು, ಯುವಕ, ಯುವತಿಯುರು ಹಾಗೂ ಚಿಕ್ಕಮಕ್ಕಳು ಮನೆ ಮನೆಗೆ ತೆರಳಿ ವಿಶೇಷ ಪ್ರಾರ್ಥನೆ, ಗಾಯನವನ್ನು ಹಾಡುತ್ತಾ ಶುಭ ಸಂದೇಶ ವಾಚಿಸಿ ಕ್ರಿಸ್ತರ ಜನನದ ಶುಭಾಶಯಗಳನ್ನು ವಿನಿಮಯ ಮಾಡಿ ಮನೆಯ ಮಂದಿಯನ್ನು ಅರಸಿ ಆಶೀರ್ವಚಿಸಿ ಶುಭಕೋರಿದರು.