ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಗೋ ಸೇವೆಯು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರೂ ಗೋ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜು ತಾಳಿಕೋಟಿ ಹೇಳಿದರು.ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಮಹಾಲಿಂಗೇಶ್ವರ ಗೋಶಾಲೆಯಲ್ಲಿ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇಂತಹ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಸದಸ್ಯರು ಗೋಮಾತೆಗೆ ಪೂಜೆ ಸಲ್ಲಿಸಿ, ಒಂದು ಲೋಡ್ ಮೇವನ್ನು ವಿತರಿಸಿ, ಗೋಸೇವೆಯ ಮಹತ್ವವನ್ನು ತಿಳಿಸಿದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಹಾಗೂ ಪ್ರಾಣಿ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಲೈನ್ಸ್ ಕ್ಲಬ್ ಸದಸ್ಯರಾದ ಡಾ. ಎಂ.ಎಸ್.ಚನ್ನಾಳ, ವಿಷ್ಣುಗೌಡ ಪಾಟೀಲ, ಸಂಜಯ ಶಿರೋಳ, ವಿದ್ಯಾ ಶಿರೋಳ, ಡಾ.ಉಮಾ ಗುಂಡಾ, ಸತೀಶ ಅಂಡೆನ್ನವರ, ಶ್ರೀಶೈಲ ಕೊಳಿಗುಡ್ಡ, ಅಶ್ವಿನಿ ಕೊಳಿಗುಡ್ಡ, ರಾಜೇಶ್ ಬಾಗೋಜಿ, ಸಚಿನ ಗುಂಡಾ, ಅರ್ಚನಾ ಕಡಪಟ್ಟಿ, ರಾಮು ಕೆಳಗಡೆ ಹಾಗೂ ಸುಚಿತ್ರಾ ಆರ್. ತಾಳಿಕೋಟಿ ಸೇರಿದಂತೆ ಲಯನ್ಸ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.