ಶ್ರೀಮಠದ ಸಮಾಜಮುಖಿ ಕೆಲಸಗಳಿಗೆ ಕೈಜೋಡಿಸಿ

| Published : May 10 2025, 01:04 AM IST

ಶ್ರೀಮಠದ ಸಮಾಜಮುಖಿ ಕೆಲಸಗಳಿಗೆ ಕೈಜೋಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲರನ್ನು ಸಮಾನ ದೃಷ್ಟಿಕೋನದಿಂದ ನೋಡುವ ಶ್ರೀಮಠಕ್ಕೆ ನಾನು ಪೀಠಾಧಿಪತಿಯಾಗಿರುವುದು ಪೂರ್ವಜನ್ಮದ ಫಲವಾಗಿದೆ

ಕುರುಗೋಡು: ಪಕ್ಷ, ಜಾತಿ, ಮತ, ಪಂಥ ಬಿಟ್ಟು ಶ್ರೀಮಠದ ಸಮಾಜಮುಖಿ ಕೆಲಸಗಳಿಗೆ ಕೈಜೋಡಿಸಿ ಎಂದು ಸಿದ್ಧಲಿಂಗ ದೇಶಿಕರ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿದರು.

ತಾಲೂಕಿನ ಸೋಮಸಮುದ್ರ ಗ್ರಾಮದ ಕೊಟ್ಟೂರು ಸ್ವಾಮಿಗುರುಪರಂಪರೆಯ ಶಾಖಾ ವಿರಕ್ತಮಠದ ಪೀಠಾಧಿಪತಿಯಾಗಿ ನಿರಂಜನ ದೀಕ್ಷೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಎಲ್ಲರನ್ನು ಸಮಾನ ದೃಷ್ಟಿಕೋನದಿಂದ ನೋಡುವ ಶ್ರೀಮಠಕ್ಕೆ ನಾನು ಪೀಠಾಧಿಪತಿಯಾಗಿರುವುದು ಪೂರ್ವಜನ್ಮದ ಫಲವಾಗಿದೆ ಎಂದರು.

ಶ್ರೀಮಠದ ಶ್ರೀಮಂತಿಕೆ ನೋಡಿ ಪೀಠಾಧಿಪತಿಯಾಗಿಲ್ಲ.ಮಠ ಕಟ್ಟುವ ಜತೆಗೆ ಭಕ್ತರ ಮನಸು ಕಟ್ಟುವ ಕೆಲಸಮಾಡುವೆ. ಪೂರ್ವಾಶ್ರಮದ ತಂದೆ-ತಾಯಿಯನ್ನು ತೊರೆದು ಸಮಾಜದ ಮಗನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನನಗೆ ಹಣ ಹಾಕುವ ಅಗತ್ಯವಿಲ್ಲ. ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದರು.

ಅಪರೇಷನ್ ಸಿಂದೂರ ಕಾರ್ಯಚರಣೆಯಲ್ಲಿ ಭಾಗವಹಿಸಿದ ಎಲ್ಲ ಸೈನಿಕ ಹಿಂದೆ ನಾವಿದ್ದೇವೆ ಎನ್ನುವ ಸಂದೇಶ ಸಾರುವ ಮೂಲಕ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ದೇಶವನ್ನು ವಿಶ್ವಗುರು ಮಾಡಬೇಕು ಎಂದರು.

ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ನಿರಂಜನ ಪ್ರಣವಸ್ವರೂಪ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಅರಿಷಡ್ವರ್ಗ ತ್ಯಜಿಸಿ, ಸಮಾಜಮುಖಿಯಾಗಿ ಬದುಕುವುದಷ್ಟೇ ಅಲ್ಲ ಕಲ್ಯಾಣಕ್ಕಾಗಿ ಶ್ರಮಿಸುವುದು ಸ್ವಾಮೀಜಿಗಳ ಜವಾಬ್ದಾರಿ

ಪೀಠಾಧಿಪರಿಗಳಾಗಿ ಅಧಿಕಾರಿ ಸ್ವೀಕರಿಸಿದ ಸಿದ್ಧಲಿಂಗ ಶ್ರೀಗಳು ತಮ್ಮ ಪೂರ್ವಾಶ್ರಮದ ರಕ್ತ ಸಂಬಂಧಗಳನ್ನು ತೊರೆದು ಭಕ್ತ ಸಂಬಂಧಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಸಮಾಜಮುಖಿ ಕೆಲಸ ಮಾಡುವ ಮನೋಭಾವದ ಶ್ರೀಗಳನ್ನು ಪ್ರೋತ್ಸಾಹಿಸಿ ಎಂದರು.

ಕೊಟ್ಟೂರು ಸಂಸ್ಥಾನಮಠದ ಕೊಟ್ಟೂರು ಬಸವಲಿಂಗ ಶ್ರೀಗಳು ಮಾತನಾಡಿ, ಕೊಟ್ಟೂರು ಸಂಸ್ಥಾನಮಠ ಮಠದ ಗುರುಗಳು ವಿಜಯನಗರ ಸಾಮ್ರಾಜ್ಯದ ರಾಜ ಗುರುಗಳಾಗಿದ್ದರು. ಹಂಡೆ ಹನುಮಪ್ಪ ನಾಯಕರ ಕಾಲದಲ್ಲಿ ನಿರ್ಮಾಣವಾಗಿರುವ ಬಳ್ಳಾರಿ ನಗರವನ್ನು ಶ್ರೀಮಠದ ಅಂದಿನ ಪೂಜ್ಯರು ವ್ಯವಸ್ಥಿತವಾಗಿ ರೂಪುಗೊಳ್ಳಲು ಕಾರಣೀಪುರುಷರಾಗಿದ್ದರು. ಗುರುಪರಂಪರೆ ಎಂಬುವುದು ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಗುರುವಿನ ಆಶೀರ್ವಾದದಿಂದ ಸಿದ್ದಲಿಂಗ ದೇವರು ಹೋಗಿ ಸಿದ್ಧಲಿಂಗ ಸ್ವಾಮಿಯಾಗಿದ್ದು, ಸರ್ವರ ಏಳಿಗಾಗಿ ಶ್ರಮಿಸಲಿ ಎಂದರು.

ಶಾಸಕ ಜೆ.ಎನ್. ಗಣೇಶ್ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿದರು.

ದರೂರು ಮಠದ ಕೊಟ್ಟೂರು ಮಹಾಸ್ವಾಮಿ, ಕುರುಗೋಡು ಮಠದ ನಿರಂಜನ ಪ್ರಭು ಮಹಾಸ್ವಾಮಿ, ಶ್ರೀಧಗಡ್ಡೆ ಮಠದ ಮರಿಕೊಟ್ಟೂರು ದೇಶಿಕರು, ಬೂದಗುಂಪ ಮಠದ ಸಿದ್ದೇಶ್ವರ ಮಹಾಸ್ವಾಮಿ, ಸಂಗನಾಳ ಮಠದ ವಿಶ್ವೇಶ್ವರ ದೇವರು, ಬೂದಗುಂಪ ಮಠದ ಸಿದ್ದೇಶ್ವರ ಶ್ರೀ, ವೀರಶೈವಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿಚ್ಚಕಲ್ಲು ಪಂಚಾಕ್ಷರಪ್ಪ, ಅಲ್ಲಂ ಪ್ರಶಾಂತ್, ಅನೀಲ್ ಕುಮಾರ್ ಮೋಕಾ, ಕಣೇಕಲ್ ಮಹಾಂತೇಶ ಇದ್ದರು.