ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಕೈಜೋಡಿಸಿ: ಶಾಯಿಬಾಬ

| Published : Apr 02 2024, 01:04 AM IST

ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಕೈಜೋಡಿಸಿ: ಶಾಯಿಬಾಬ
Share this Article
  • FB
  • TW
  • Linkdin
  • Email

ಸಾರಾಂಶ

ದಿನದಿಂದ ದಿನಕ್ಕೆ ಜಾಗತಿಕ ತಾಪ ಹೆಚ್ಚಾಗುತ್ತಿರುವುದರಿಂದ ಹಳ್ಳ-ಕೊಳ್ಳ, ಕೆರೆಗಳಲ್ಲಿ ಜಲ ಸಂಪತ್ತು ಬತ್ತಿ ಹೋಗುತ್ತಿದ್ದು, ಪ್ರಾಣಿ ಪಕ್ಷಿ ಸಂಕುಲ ನೀರಿಲ್ಲದೆ ಸಂಕಷ್ಟಕ್ಕೊಳಗಾಗುತ್ತಿವೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಮನೆಯ ಮೇಲ್ಛಾವಣಿಗಳ ಮೇಲೆ ತೆರೆದ ಬಟ್ಟಲುಗಳಲ್ಲಿ ನೀರು ನೀಡಿ ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ ಎಂದು ಯುವ ಸಂಶೋಧಕ ಶಾಯಿಬಾಬ ಅಣಬಿ ಹೇಳಿದರು.

ಶಹಾಪುರ: ದಿನದಿಂದ ದಿನಕ್ಕೆ ಜಾಗತಿಕ ತಾಪ ಹೆಚ್ಚಾಗುತ್ತಿರುವುದರಿಂದ ಹಳ್ಳ-ಕೊಳ್ಳ, ಕೆರೆಗಳಲ್ಲಿ ಜಲ ಸಂಪತ್ತು ಬತ್ತಿ ಹೋಗುತ್ತಿದ್ದು, ಪ್ರಾಣಿ ಪಕ್ಷಿ ಸಂಕುಲ ನೀರಿಲ್ಲದೆ ಸಂಕಷ್ಟಕ್ಕೊಳಗಾಗುತ್ತಿವೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಮನೆಯ ಮೇಲ್ಛಾವಣಿಗಳ ಮೇಲೆ ತೆರೆದ ಬಟ್ಟಲುಗಳಲ್ಲಿ ನೀರು ನೀಡಿ ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ ಎಂದು ಯುವ ಸಂಶೋಧಕ ಶಾಯಿಬಾಬ ಅಣಬಿ ಹೇಳಿದರು.

ನಗರದ ಸಿದ್ಧಲಿಂಗೇಶ್ವರ ಬೆಟ್ಟದಲ್ಲಿ ಸಗರ ಕಲಾನಿಕೇತನ ಟ್ರಸ್ಟ್‌ವತಿಯಿಂದ ನಡೆದ ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಬಾರಿ ಬಿರು ಬಿಸಿಲಿನಿಂದ ಕೆರೆ ಕಟ್ಟೆಗಳಲ್ಲಿ ನೀರು ಇಲ್ಲ. ತಾಪಕ್ಕೆ ಪ್ರಾಣಿ, ಪಕ್ಷಿಗಳು ಪರಿತಪಿಸುತ್ತಿವೆ. ಆಹಾರ ಸಿಗದೆ ಪರದಾಡುತ್ತಿವೆ. ಅವುಗಳ ರಕ್ಷಣೆಗೆ ಎಲ್ಲರೂ ಮಾನವೀಯ ದೃಷ್ಟಿಯಿಂದ ಆದ್ಯತೆ ನೀಡಬೇಕು. ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಕುಡಿಯುವ ನೀರಿನ ತೂಗು ಬಟ್ಟಲಗಳನ್ನು ಗಿಡ-ಮರಗಳಿಗೆ ಕಟ್ಟಿ ಪ್ರಾಣಿ ಮತ್ತು ಪಕ್ಷಿ ಸಂಕುಲ ಕಾಪಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಯುವ ಸಾಹಿತಿ ವಿಜಯ ಸತ್ಯಂಪೇಟೆ ಮಾತನಾಡಿ, ಮನುಷ್ಯರಂತೆ ಪ್ರಾಣಿ, ಪಕ್ಷಿಗಳಿಗೂ ಬಾಯಾರಿಕೆಯಾಗುತ್ತದೆ. ನೀರು ಸಿಗದೇ ಅವುಗಳು ಪರಿತಪಿಸುವಂತಾಗಬಾರದು. ಸಾಧ್ಯವಾದಷ್ಟು ಮನೆಯ ಸುತ್ತಮುತ್ತಲಿನ ಮರಗಳ ಸಂದಿಯಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ನೀರು ನೀಡಿ, ಪಕ್ಷಿಗಳ ಜೀವ ಕಾಪಾಡಬೇಕು. ಕಲಾನಿಕೇತನ ಟ್ರಸ್ಟ್ ಒಂದಲ್ಲ ಒಂದು ವಿಶೇಷ ಮತ್ತು ವಿಭಿನ್ನ ಅಭಿಯಾನಗಳು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಈ ಟ್ರಸ್ಟ್‌ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಮಾತನಾಡಿ, ಪ್ರಾಣಿ ಮತ್ತು ಪಕ್ಷಿಗಳ ದಾಹ ನೀಗಿಸಲು, ಪಕ್ಷಿ ಪ್ರೇಮಿಗಳ ಜತೆಗೆ ತೆರೆದ ಬಟ್ಟಲಿನಲ್ಲಿ ನೀರು ನೀಡುವುದರ ಮೂಲಕ ಅಳಿಲು ಸೇವೆಗೆ ಮುಂದಾಗಿದ್ದೇವೆ. ಈ ಅಭಿಯಾನವನ್ನು ಒಂದು ತಿಂಗಳಗಳ ಕಾಲ ನಗರದ ವಿವಿಧ ಸ್ಥಳಗಳಲ್ಲಿ ಹಮ್ಮಿಕೊಳ್ಳುವ ಉದ್ದೇಶವಿದ್ದು, ಇದಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು. ಪ್ರದೀಪ್ ಅಂಗಡಿ, ಗಣೇಶ್, ಶಂಕರ್ ಇತರರಿದ್ದರು.