ಸಾರಾಂಶ
- ತರೀಕೆರೆ ತಾಲೂಕು ಪತ್ರಿಕಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ತರೀಕೆರೆಪತ್ರಕರ್ತರು ಗಾಳಿ ಸುದ್ದಿಗಳಿಗೆ ಒತ್ತು ನೀಡದೆ ನೈಜ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.
ತರೀಕೆರೆ ತಾಲೂಕು ಪತ್ರಕರ್ತರ ಸಂಘದಿಂದ ಲಿಂಗದಹಳ್ಳಿಯ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆಗಳು ತಮ್ಮ ಅಸ್ತಿತ್ವವ ಉಳಿಸಿಕೊಂಡಿರುವುದಕ್ಕೆ ಅದರಲ್ಲಿ ಬರುವ ನೈಜ ಸುದ್ದಿಗಳಿಗೆ ಓದುಗರು ನೀಡುವ ಆದ್ಯತೆ ಮುಖ್ಯ ಕಾರಣ. ಇಂದು ಟಿವಿ, ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳ ಸುದ್ದಿ ವೀಕ್ಷಣೆ ಮಾಡುವವರು ಸಹ ಪ್ರತಿ ದಿನ ಪತ್ರಿಕೆಗಳತ್ತ ಕಣ್ಣಾಡಿಸುವುದರಿಂದ ಅವರ ದಿನನಿತ್ಯದ ಕಾರ್ಯ ಗಳನ್ನು ಸುಸೂತ್ರವಾಗಿ ಮಾಡುತ್ತಾರೆ. ಪತ್ರಕರ್ತರು ಗಾಳಿ ಸುದ್ದಿಗಳಿಗೆ ಆದ್ಯತೆ ನೀಡದೇ ನೈಜ ಸುದ್ದಿ ಗಳನ್ನು ಪ್ರಕಟಿಸಬೇಕು ಎಂದು ಅವರು ಹೇಳಿದರು.ಸರ್ಕಾರ ಪತ್ರಕರ್ತರ ಅನುಕೂಲಕ್ಕಾಗಿ ಉಚಿತ ಬಸ್‌ಪಾಸ್ ಸೇರಿದಂತೆ ವಿವಿಧ ಸೌಲಭ್ಯ ನೀಡುತ್ತಿದೆ. ನೈಜ ಪತ್ರಕರ್ತರು ಇವುಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು. ಗುಳ್ಳದಮನೆ ಗೋಪಾಲಕೃಷ್ಣ ಪತ್ರಿಕಾ ಪಿತಾಮಹಾ ಡಿ.ವಿ ಗುಂಡಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಪತ್ರಕರ್ತರು ಕೇವಲ ವರದಿಗಾರಿಕೆಗಷ್ಟೆ ಸೀಮಿತವಾಗದೇ ಸಮಾಜದ ಅಂಕು ಡೊಂಕು ಗಳನ್ನು ತಿದ್ದಿ ತಿಡುವ ಕಾರ್ಯ ಮಾಡುತ್ತಾ ಸಾಮಾಜಿಕ ಸ್ವಾಸ್ಥ್ಯಕಾಪಾಡುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬಹುದು. ಸಾರ್ವಜನಿಕರು ಪತ್ರಕರ್ತರ ಮಾರ್ಗದರ್ಶನ ಪಡೆಯುವ ಮೂಲಕ ತಮ್ಮೊಂದಿಗೆ ದೇಶದ ಅಭಿವೃದ್ಧಿಗೂ ಸಹಕಾರ ನೀಡಬೇಕು ಎಂದು ಹೇಳಿದರು. ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಮಾತನಾಡಿ ಪತ್ರಕರ್ತರು ಕೆಲವೊಮ್ಮೆ ಸುದ್ದಿ ಸಂಗ್ರಹಕ್ಕಾಗಿ ತಮ್ಮ ಜೀವವನ್ನೇ ಪಣಕಿಟ್ಟು ಸುದ್ದಿಗಳನ್ನು ಹೆಕ್ಕಿ ತರುತ್ತಾರೆ. ಅಂತಹ ಪತ್ರಕರ್ತರು ಮತ್ತು ಅವರ ಅವಲಂಬಿತರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕರು ಅಗತ್ಯ ಸೌಲಭ್ಯ ನೀಡಿ ಪ್ರೋತ್ಸಾಹಿಸುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಎಂದು ಹೇಳಿದರು.
ಪತ್ರಿಕಾ ವಿತರಕರಿಗೆ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡುಗಳನ್ನು ವಿತರಿಸಲಾಯಿತು.ತರೀಕೆರೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಕೃಷ್ಣನಾಯ್ಕಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಇಲಾಖಾ ಅಧಿಕಾರಿ ಪ್ರಭಾಕರ್ , ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಎ ಕೃಷ್ಣನಾಯ್ಕ, ತಾಪಂ ಮಾಜಿ ಅಧ್ಯಕ್ಷ ಬಿ.ಆರ್. ರವಿ, ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಎಚ್.ಎಲ್ ಮಂಜುನಾಥ್, ಹುಣಸಘಟ್ಟ ಗ್ರಾಪಂ ಉಪಾಧ್ಯಕ್ಷ ರಮೇಶ್ ನಾಯ್ಕ, ತಾಲೂಕು ಬಂಜಾರ ಸಮಾಜದ ಗೌರವಾಧ್ಯಕ್ಷ ಆರ್.ಸತ್ಯಪ್ಪ, ಲಿಂಗದಹಳ್ಳಿ ಅಂಚೆ ಪಾಲಕ ಚಂದ್ರನಾಯ್ಕ, ಡಿಎಸ್.ಎಸ್ ಸಂಚಾಲಕ ರಾಜು, ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.30ಕೆಟಿಆರ್.ಕೆ.10ಃ
ತರೀಕೆರೆಯ ಲಿಂಗದಹಳ್ಳಿಯಲ್ಲಿ ನಡೆದ ತಾಲೂಕು ಪತ್ರಿಕಾ ದಿನಾಚರಣೆಯಲ್ಲಿ ಲಿಂಗದಹಳ್ಳಿ ಹೋಬಳಿ ಪತ್ರಿಕಾ ವಿತರಕರಿಗೆ ಕಾರ್ಮಿಕ ಇಲಾಖೆಯ ಕಾರ್ಮಿಕ ಕಾರ್ಡುಗಳನ್ನು ವಿತರಿಸಿದರು. ಶಾಸಕ ಜಿ.ಎಚ್. ಶ್ರೀನಿವಾಸ್, ಕಾರ್ಮಿಕ ಇಲಾಖೆ ಅಧಿಕಾರಿ ಪ್ರಭಾಕರ್, ಸಮಾಜ ಸೇವಕ ಗುಳ್ಳದ ಮನೆ ಗೋಪಾಲಕೃಷ್ಣ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಕೃಷ್ಣನಾಯ್ಕ ಇದ್ದರು.