ಸಾರಾಂಶ
ಪತ್ರಕರ್ತರು ನಾವೆಲ್ಲಾ ಸೌಹಾರ್ದಯುತವಾಗಿ ಮತ್ತು ಸಾಂಘಿಕ ಶಕ್ತಿಯಾಗಿ ಕೆಲಸ ಮಾಡೋಣ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಶಿವಾನಂದ ತಗಡೂರು ಹೇಳಿದರು.
ಕನ್ನಡಪ್ರಭ ವಾರ್ತೆ ತರೀಕೆರೆ
ಪತ್ರಕರ್ತರು ನಾವೆಲ್ಲಾ ಸೌಹಾರ್ದಯುತವಾಗಿ ಮತ್ತು ಸಾಂಘಿಕ ಶಕ್ತಿಯಾಗಿ ಕೆಲಸ ಮಾಡೋಣ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಶಿವಾನಂದ ತಗಡೂರು ಹೇಳಿದರು.ತಾಲೂಕಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆಯಿಂದ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಪತ್ರಿಕಾ ದಿನಾಚರಣೆ-2025 ಸಂದರ್ಭದಲ್ಲಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಸಂಘಟನೆಗೆ ಅನೇಕ ಹಿರಿಯರ ಕೊಡುಗೆ ಇದೆ, ಪ್ರತಿನಿತ್ಯ ರಾಜ್ಯದ ಎಲ್ಲಡೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮಗಳು ನೆಡೆಯುತ್ತಿದೆ, ಎಲ್ಲಾ ಜಿಲ್ಲೆಗಳಲ್ಲಿ ಪತ್ರಿಕಾಭವನ ನಿರ್ಮಾಣವಾಗಬೇಕೆಂಬ ಆಶಯ ಈಡೇರುತ್ತಿದೆ, ಹಾಗೆಯೇ ಎಲ್ಲಾ ತಾಲೂಕುಗಳಲ್ಲಿ ಪತ್ರಿಕಾ ಭವನಗಳು ನಿರ್ಮಾಣವಾಗಬೇಕು ಎಂಬುದು ನಮ್ಮ ಆಶಯವಾಗಿದೆ, ಮೂರು ದಶಕಗಳ ಹೋರಾಟದ ಫಲವಾಗಿ ಪತ್ರಕರ್ತರಿಗೆ ಬಸ್ ಪಾಸ್ ಮಂಜೂರಾಗಿದೆ, ಅದು ಅನುಷ್ಠಾನಕ್ಕೂ ಬಂದಿದೆ, ಮುಖ್ಯಮಂತ್ರಿಗಳ ಮಾದ್ಯಮ ಸಂಜೀವಿನಿ ಯೋಜನೆ ಕೂಡ ಜಾರಿಗೆ ಬಂದಿದೆ, ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮತ್ತು ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಅರ್ಪಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತರೀಕೆರೆ ತಾಲೂಕು ಶಾಖೆ ಅದ್ಯಕ್ಷ ಜಿ.ನಾಗೇಂದ್ರಪ್ಪ, ಹಿರಿಯ ಪತ್ರಕರ್ತ ಎಸ್.ಸುರೇಶ್ ಚಂದ್ರ, ಪತ್ರಕರ್ತರಾದ ಬಿ.ಉಮೇಶ್ ನಾಯ್ಕ, ಎಸ್.ಎನ್.ಸಿದ್ರಾಮಪ್ಪ, ಕೆ.ನಾಗರಾಜ್, ಜಿ.ಟಿ.ರಮೇಶ್, ಎಸ್.ಕೆ.ಸ್ವಾಮಿ, ಕೆ.ಆರ್. ರಮೇಶ್ ಕುಮಾರ್, ಮಂಜಪ್ಪ, ಖಲೀಲ್, ಚಂದ್ರು ಮತ್ತಿತರರು ಭಾಗವಹಿಸಿದ್ದರು.