ಸಮಾಜ ಜಾಗೃತಿಯಲ್ಲಿ ಪತ್ರಕರ್ತರ ಹೆಜ್ಜೆ ಪ್ರಮುಖ: ಸುನಿಲ್ ಕುಮಾರ್

| Published : Sep 10 2025, 01:04 AM IST

ಸಮಾಜ ಜಾಗೃತಿಯಲ್ಲಿ ಪತ್ರಕರ್ತರ ಹೆಜ್ಜೆ ಪ್ರಮುಖ: ಸುನಿಲ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಉದ್ಘಾಟನಾ ಸಮಾರಂಭ ನಡೆಯಿತು. ಶಾಸಕ ಸುನಿಲ್ ಕುಮಾರ್ ಭಾಗವಹಿಸಿದ್ದರು.

ಕಾರ್ಕಳ: ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕಾರ್ಕಳ

ಪತ್ರಕರ್ತನ ಪೆನ್ ಕೇವಲ ಸುದ್ದಿಯ ಹಾಳೆಯಲ್ಲ, ಸಮಾಜ ಬದಲಾವಣೆಯ ಶಸ್ತ್ರವಾಗಿಯೂ ಕಾರ್ಯನಿರ್ವಹಿಸಬೇಕು. ಸುದ್ದಿ ಪ್ರಸಾರ ಮಾಡುವುದಷ್ಟೇ ಪತ್ರಕರ್ತನ ಧರ್ಮವಲ್ಲ, ಜನಜಾಗೃತಿ ಮೂಡಿಸಿ ಸಮಾಜವನ್ನು ಉತ್ತಮ ದಾರಿಯತ್ತ ಕೊಂಡೊಯ್ಯುವ ಹೊಣೆಗಾರಿಕೆಯೂ ಇದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.ಭಾನುವಾರ ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಉದ್ಘಾಟನಾ ಸಮಾರಂಭದ ಸಭೆಯಲ್ಲಿ ಅವರು ಮಾತನಾಡಿದರು.

ಪತ್ರಕರ್ತರು ಸಮಾಜದ ದಾರಿದೀಪರಾಗಬೇಕು. ನಿಜವನ್ನೇ ಬೆಳಕಿಗೆ ತರುವ ಕಾರ್ಯದಲ್ಲಿ ಅವರು ನಿರಂತರವಾಗಿರಬೇಕು. ಪತ್ರಿಕಾ ವೃತ್ತಿ ಜವಾಬ್ದಾರಿ, ನೈತಿಕತೆ ಮತ್ತು ಬದ್ಧತೆಯ ತ್ರಿವೇಣಿ ಸಂಗಮವಾಗಿರಬೇಕು. ಆ ಸಂದರ್ಭದಲ್ಲೇ ಪತ್ರಕರ್ತರ ಗೌರವ ಹೆಚ್ಚುತ್ತದೆ. ಸಮಾಜದಲ್ಲಿ ಬದಲಾವಣೆಯ ಚಲನವಲನಕ್ಕೆ ಪತ್ರಕರ್ತರ ಧ್ವನಿ ಒಂದು ಮಹತ್ವದ ಸಾಧನ ಎಂದು ಸಲಹೆ ನೀಡಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೂತನ ಪತ್ರಿಕಾ ಭವನ ಉದ್ಘಾಟಿಸಿ, ಪತ್ರಕರ್ತರು ಸಮಾಜದ ಕಣ್ಣುಗಳಂತಿದ್ದಾರೆ. ಗ್ರಾಮೀಣ ಬೀದಿಯಿಂದ ಹಿಡಿದು ರಾಷ್ಟ್ರಮಟ್ಟದ ಬೆಳವಣಿಗೆಗಳ ವರೆಗೆ ಪ್ರತಿಬಿಂಬಿಸುವವರಾದ ಪತ್ರಕರ್ತರಿಗೆ ಸ್ವಂತ ಆವರಣ ಅಗತ್ಯವಾಗಿತ್ತು. ಇಂದು ಅದು ನನಸಾಗಿರುವುದು ಸಂತೋಷಕರ. ಸರ್ಕಾರವು ಪತ್ರಕರ್ತರ ಕಲ್ಯಾಣ ಮತ್ತು ಅವರ ವೃತ್ತಿಜೀವನದ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಪತ್ರಿಕೋದ್ಯಮ ಸಮಾಜದ ಹಿತಕ್ಕಾಗಿ ಹೋರಾಡುವ ಒಂದು ನಿಸ್ವಾರ್ಥ ಸೇವೆ. ಇದರ ಬಲದಿಂದ ಸಮಾಜದ ಪ್ರಗತಿ ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು.

ತಹಸೀಲ್ದಾರ್ ಪ್ರದೀಪ್ ಕುಮಾರ್, ಆರ್. ರವೀಂದ್ರ ಶೆಟ್ಟಿ ಬಜಗೋಳಿ, ಬೋಳ ಪ್ರಶಾಂತ್ ಕಾಮತ್, ಉದ್ಯಮಿ ಮೊಹಮ್ಮದ್ ಗೌಸ್, ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಮೋಹನ್ ಶೆಟ್ಟಿ, ವಾರ್ತಾಧಿಕಾರಿ ಮಂಜುನಾಥ್ ಮತ್ತು ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಉದ್ಯಮಿ ಶಾಂತ್ ಕಾಮತ್, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಇದ್ದರು.

ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾದರು. ಉದಯ ಮುಂಡ್ಕೂರು ಸ್ವಾಗತಿಸಿದರು. ಕೃಷ್ಣ ಅಜೆಕಾರು ಮತ್ತು ನಾಗೇಶ್ ನಲ್ಲೂರು ನಿರೂಪಿಸಿದರು‌.