ಜೋಯಾಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ಶನಿವಾರದಿಂದ ಡಿ. 21ರವರೆಗೆ ನಡೆಯುವ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ಗೆ ಚಾಲನೆ ನೀಡಲಾಯಿತು.

ಡಿ. 21ರ ವರೆಗೆ ಉಡುಪಿಯ ಜೋಯಾಲುಕ್ಕಾಸ್‌ನಲ್ಲಿ ಪ್ರದರ್ಶನ

ಉಡುಪಿ: ನಗರದ ಜೋಯಾಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ಶನಿವಾರದಿಂದ ಡಿ. 21ರವರೆಗೆ ನಡೆಯುವ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ಗೆ ಚಾಲನೆ ನೀಡಲಾಯಿತು.ಮುಕ್ಕ ಶ್ರೀನಿವಾಸ ವಿ.ವಿ.ಯ ಅಂತಾರಾಷ್ಟ್ರೀಯ ಸಹಯೋಗ ಮತ್ತು ಜಾಗತಿಕ ಸಂಪರ್ಕಗಳ ನಿರ್ದೇಶಕಿ ಡಾ. ದಿವ್ಯಾ ರಾಣಿ, ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿ, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥೆ ಡಾ. ವೀಣಾ ಮುಂತಾದವರು ವಜ್ರಾಭರಣಗಳನ್ನು ಪ್ರದರ್ಶಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಡಾ. ಜೋಯ್ ಆಲುಕ್ಕಾಸ್, ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ವಜ್ರಗಳ ಶಾಶ್ವತ ಆಕರ್ಷಣೆ ಮತ್ತು ಆಭರಣ ವಿನ್ಯಾಸದಲ್ಲಿ ಪರಿಪೂರ್ಣತೆಯ ಬಗ್ಗೆ ನಮ್ಮ ಉತ್ಸಾಹಕ್ಕೆ ನಮ್ಮ ಗೌರವವಾಗಿದೆ. ನಮ್ಮ ಪಯಣದಲ್ಲಿ ಜೊತೆಗಿರುವ ಉಡುಪಿಯ ಗ್ರಾಹಕರಿಗೆ ಈ ಹಬ್ಬದ ಋತುವಿನಲ್ಲಿ ಈ ಪ್ರದರ್ಶನವು ಸೌಂದರ್ಯ, ಅನನ್ಯತೆ ಮತ್ತು ಅತ್ಯುತ್ತಮ ಕರಕುಶಲ ವಿನ್ಯಾಸಗಳನ್ನು ತಮ್ಮದಾಗಿಸಿಕೊಳ್ಳಲು ವಿಶೇಷ ಅವಕಾಶ ನೀಡುತ್ತದೆ ಎಂದು ಹೇಳಿದರು.

ಜೋಯಾಲುಕ್ಕಾಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಜಿನೇಶ್ ವಿ.ಎಸ್., ಸಮೂಹ ವ್ಯವಸ್ಥಾಪಕಿ ಮಾಯಾ ಪ್ರಸಾದ್ ಮುಂತಾದವರಿದ್ದರು.

ಈ ಪ್ರದರ್ಶನದಲ್ಲಿ ವಿಶೇಷವಾಗಿ ವಧುವಿನ ವಿಶಿಷ್ಟ ವಿನ್ಯಾಸದ ವಜ್ರಾಭರಣಗಳಿಂದ ಸಮಕಾಲೀನ ಹಾಗೂ ಸಂಪ್ರದಾಯವನ್ನು ಸಂಯೋಜಿಸುವ ಕಾಲಾತೀತ ಆಭರಣಗಳನ್ನು ಒಳಗೊಂಡಿದೆ. ಪ್ರತಿಯೊಂದು ವಿನ್ಯಾಸವೂ ಒಂದು ಮೇರುಕೃತಿಯಾಗಿದೆ, ಈ ಪ್ರದರ್ಶನದ ಅವಧಿಯಲ್ಲಿ ೧ ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣಗಳ ಖರೀದಿಗೆ ಉಚಿತ ಚಿನ್ನದ ನಾಣ್ಯ ಪಡೆಯಲಿದ್ದಾರೆ.