ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಂತರಿಕ್ಷ ವೈದ್ಯಕೀಯ ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಜೆಎಸ್ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿ ಮತ್ತು ಅದರ ಅಂಗ ಸಂಸ್ಥೆಯಾದ ಊಟಿಯ ಜೆಎಸ್ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯ ಫಾರ್ಮಸ್ ಯೂಟಿಕ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಕೆ. ಗೌತಮ ರಾಜನ ರಷ್ಯಾದ ಮಾಸ್ಕೋದಲ್ಲಿನ ಇನ್ಸ್ಟಿಟ್ಯೂಷನ್ ಆಫ್ ಬಯೋ ಮೆಡಿಕಲ್ ಪ್ರಾಬ್ಲಮ್, ರುಸಿಯನ್ ಅಕಾಡೆಮಿ ಆಫ್ ಸೈನ್ಸ್ ನಡೆಸಿದ ಸ್ಪಟಿಯಸ್ಫಿಜಿಯಾಲಜಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.ಭಾರತ ಸರ್ಕಾರದ ಡಿಎಚ್ಆರ್‌ಐಸಿ ಎಂಆರ್ ಓವರಸೀಸ್ ಫೆಲೋಶಿಪ್ ಸ್ಕೀಮ್ ಯೋಜನೆಯಡಿ ಈ ತರಬೇತಿಯು ಡಾ. ವಸ್ಸಿಲೀವ ಕಲಿನಾ ಯು ಮಾರ್ಗದರ್ಶನದಲ್ಲಿ ನಡೆದಿದ್ದು, ಡಾ. ಗೌತಮ ರಾಜನ್ ಅವರು ಡ್ರೈ ಇನ್‌ಫರ್‌ಮೇಶನ್, ಹೆಡ್ ಟೌನ್ಟಿಲ್ಟ್, ವೆಸ್ಟಿಬುಲರ್ ಅಡಾಪ್ಟೇಷನ್ ಆ್ಯಂಡ್ ಮಾರ್ಸ್ ಮಿನ್ಸಿಮ್ಯುಲೇಷನ್ ಸೇರಿದಂತೆ ಅಂತರಿಕ್ಷ ಶರೀರ ವಿಜ್ಞಾನದ ಪ್ರಮುಖ ಅಂಶಗಳಲ್ಲಿ ತಾಂತ್ರಿಕ ತರಬೇತಿ ಪಡೆದಿದ್ದಾರೆ.ಅಲ್ಲದೆ, ಡಾ. ಗೌತ್ ರಾಜನ್ ವರು ಆರ್.ಒ.ಎಸ್.ಸಿ.ಒ.ಎಸ್.ಎಂ.ಒ.ಎಸ್ (Russian state corporation responsible for the country''''''''''''''''s space activities, including spaceflights, cosmonautics programs, and aerospace research)ಗೆ ಭೇಟಿ ನೀಡಿ, ಶೈಕ್ಷಣಿಕ ಉಪನ್ಯಾಸ ನೀಡಿದ್ದು, ಐಬಿಎಂಪಿ ಮತ್ತು ಜೆಎಸ್ಎಸ್ ಎಚ್ಇಆರ್ ನಡುವಿನ ಭವಿಷ್ಯದ ಸಹಯೋಗಕ್ಕಾಗಿ ಎಂಒಯು ಕುರಿತು ಚರ್ಚಿಸಿದ್ದಾರೆ.ಜೆಎಸ್ಎಸ್ಎ.ಎಚ್.ಇ.ಆರ್‌ನ ಕುಲಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿಜವಾದ ಶಿಕ್ಷಣ ಮತ್ತು ಸಂಶೋಧನೆಯು ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ, ಮಾನವೀಯತೆಗೆ ಉಪಕಾರಿಯಾಗುವ ಹೊಸ ಕ್ಷೇತ್ರಗಳಲ್ಲಿ ಬೆಳೆಯುವ ಅವಶ್ಯಕತೆ ಇದೆ. ಬಾಹ್ಯಾಕಾಶ ಔಷಧವು (Space Medicine) ನಮ್ಮ ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನವು ಮೇಳೈಸುವ ಒಂದು ಕ್ಷೇತ್ರವಾಗಿದ್ದು, ಜೆಎಸ್ಎಸ್ ಪರಿವರ್ತನ ವಿಜ್ಞಾನವನ್ನು (Transformative Science) ಮುಂಚೂಣಿಯಲ್ಲಿರಿಸುವ ಈ ಪ್ರಯತ್ನವನ್ನು ಬೆಂಬಲಿಸಲು ಸಂತೋಷವಾಗುತ್ತಿದೆ ಎಂದು ಅಕಾಡೆಮಿಯ ಕುಲಸಚಿವ ಡಾ.ಬಿ. ಮಂಜುನಾಥ ತಿಳಿಸಿದ್ದಾರೆ.ಕುಲಪತಿ ಡಾ. ಬಸವನಗೌಡಪ್ಪ ಅವರು, ಅಂತರಿಕ್ಷ ಹಾಗೂ ವೈದ್ಯಕೀಯ ಸಂಶೋಧನೆ ಕ್ಷೇತ್ರಗಳಲ್ಲಿಯೂ ಭಾರತೀಯ ಸಂಸ್ಥೆಗಳು ಬೆಳೆಯಬೇಕಾದ ಸಮಯ ಬಂದಿದ್ದು, ಈ ಬೆಳವಣಿಗೆಯೊಂದಿಗೆ ಜೆಎಸ್ಎಸ್‌ಇ ಆರ್ ಹೊಸ ಭಾಷ್ಯ ಬರೆಯುತ್ತಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.ಅಲ್ಲದೆ ಡಾ. ಗೌತಮರಾಜನ್ಅವರ ಈ ತರಬೇತಿಯು ನಮ್ಮ ಸಂಶೋಧನಾ ಪರಿಕಲ್ಪನೆಯಲ್ಲಿ ಹೊಸ ಆಯಾಮಗಳನ್ನು ತೆರೆಯಲ್ಲಿದ್ದು, ಜಾಗತಿಕ ಸಹಯೋಗ, ಜ್ಞಾನ-ವಿನಿಮಯ ಹಾಗೂ ಅಂತರಿಕ್ಷ ಔಷಧಶಾಸ್ತ್ರದಲ್ಲಿ ಭಾರತ ಮುನ್ನಡೆಯುವತ್ತ ಇದು ಸಹಕಾರಿಯಾಗಲಿದೆ ಎಂದಿದ್ದಾರೆ.ಸಮ ಕುಲಾಧಿಪತಿ ಡಾ.ಬಿ. ಸುರೇಶ್ಅವರು, ಅಂತರಿಕ್ಷ ವೈದ್ಯಕೀಯ ಸಂಶೋಧನೆಯ ಮೂಲಕ ನಾವು ಔಷಧ ವಿಜ್ಞಾನಶಾಸ್ತ್ರದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಜೆಎಸ್ಎಸ್ಎಎಚ್ಇಆರ್ ಮುಂಚೂಣಿಯಲ್ಲಿ ಇರುವುದು ಹೆಮ್ಮೆಯ ಸಂಗತಿ ಎಂದು ಪ್ರತಿಕ್ರಿಯಿಸಿದ್ದಾರೆ.