ಜಾನಪದ ಕಲಾರತ್ನ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ

| Published : Feb 27 2025, 12:32 AM IST

ಜಾನಪದ ಕಲಾರತ್ನ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

, ಜಾನಪದ ಕಲೆ, ಸಾಹಿತ್ಯ ಹಳ್ಳಿಗಾಡಿನಿಂದ ಪ್ರಾರಂಭವಾಗಿ ಮಹಾನಗರದವರೆಗೂ ಆವರಿಸಿದೆ, ಜನರಿಂದ ಹುಟ್ಟಿದ ಪದವೇ ಜಾನಪದ

ಕನ್ನಡಪ್ರಭ ವಾರ್ತೆ ಮೈಸೂರುಜಾನಪದ ಕಲಾವಿದರ ಒಕ್ಕೂಟದ ವತಿಯಿಂದ ನಗರದ ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿರುವ ಡಾ. ಶಿವರಾತ್ರಿ ರಾಜೇಂದ್ರ ಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸುಮಾರು 50 ಜನ ಕಲಾವಿದರಿಗೆ ರಾಜ್ಯಮಟ್ಟದ ಜಾನಪದ ಕಲಾ ರತ್ನ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ರಾಜ್ಯಾಧ್ಯಕ್ಷ ಸಿ.ಜಿ. ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಿದರು.ಮೈಸೂರು ವಿವಿ ಮಾನಸಗಂಗೋತ್ರಿಯ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಸ್. ಬಸವರಾಜಪ್ಪ ಮಾತನಾಡಿ, ಜಾನಪದ ಕಲೆ, ಸಾಹಿತ್ಯ ಹಳ್ಳಿಗಾಡಿನಿಂದ ಪ್ರಾರಂಭವಾಗಿ ಮಹಾನಗರದವರೆಗೂ ಆವರಿಸಿದೆ, ಜನರಿಂದ ಹುಟ್ಟಿದ ಪದವೇ ಜಾನಪದವಾಗಿ, ಅಂದಿನಿಂದ ಇಂದಿನವರೆಗೂ ಸಿನಿಮಾಗಳಲ್ಲಿ ಅಳವಡಿಸಿಕೊಂಡು ಎಷ್ಟೋ ಸಿನಿಮಾ ಗೆದ್ದಿವೆ, ಅದರ ನೈಜ ಜಾನಪದ ಕಲೆ ಹಳ್ಳಿಯ ಜನರಿಂದಲ್ಲೇ ಉಳಿದಿದೆ, ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ, ಆ ಕೆಲಸವನ್ನು ಜಾನಪದ ಕಲಾವಿದರ ಒಕ್ಕೂಟ, ಮೈಸೂರು ವಿಭಾಗದವು ಪ್ರತಿವರ್ಷವು ತುಂಬಾ ಸೊಗಸಾಗಿ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದೆ ಎಂದರು. ಮುಖ್ಯಅತಿಥಿಯಾಗಿ ಧ್ವನಿ ಫೌಂಡೇಶನ್‌ ನ ಸಂಸ್ಥಾಪಕಿ ಡಾ. ಶ್ವೇತ ಮಡಪ್ಪಾಡಿ, ರಂಗ ನಿರ್ದೇಶಕ ದಯಾನಂದ ಕಟ್ಟೆ, ಕಲಾವಿದ ಎಂ.ಎಸ್. ಕೃಷ್ಣಸ್ವಾಮಿ, ಒಕ್ಕೂಟದ ಕಾರ್ಯದರ್ಶಿ ಎಚ್.ಸಿ. ಮಹೇಶ್ ಕುಮಾರ್, ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಆರ್.ಕೆ. ಸ್ವಾಮಿ ಭಾಗವಹಿಸಿದ್ದರು.