ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯ ಜೀವನ ನಡೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಸಲಹೆ ನೀಡಿದರು. ನಗರದ ಜೈಲಿನಲ್ಲಿ ಮಂಗಳವಾರ ಆಯೋಜಿಸಿದ್ದ ಗಣೇಶ ಅಮೀನಗಡ ಅವರ ಏಕವ್ಯಕ್ತಿ ''''ಕೌದಿ'''' ನಾಟಕ ಪ್ರದರ್ಶವ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯ ಜೀವನ ನಡೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಸಲಹೆ ನೀಡಿದರು. ನಗರದ ಜೈಲಿನಲ್ಲಿ ಮಂಗಳವಾರ ಆಯೋಜಿಸಿದ್ದ ಗಣೇಶ ಅಮೀನಗಡ ಅವರ ಏಕವ್ಯಕ್ತಿ ''''''''ಕೌದಿ'''''''' ನಾಟಕ ಪ್ರದರ್ಶವ ಉದ್ಘಾಟಿಸಿ ಅವರು ಮಾತನಾಡಿದರು. ದೌರ್ಬಲ್ಯಗಳನ್ನು ಮೀರಬೇಕು. ಆತ್ಮ ಗೌರವ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಜೈಲು ಎನ್ನುವುದು ಪಶ್ಚಾತ್ತಾಪದ ಜಾಗವಾಗಬೇಕು ಜೊತೆಗೆ ದೋಷಾರೋಪಣೆಯಿಂದ ಹೊರಬಂದು ನೆಮ್ಮದಿಯ ಜೀವನ ನಡೆಸಿರಿ ಎಂದು ಕಿವಿಮಾತು ಹೇಳಿದರು. ಎಲ್ಲರಿಗೂ ಘನತೆಯ, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದ್ದು, ಡಾ.ಬಿ‌.ಆರ್.ಅಂಬೇಡ್ಕರ್ ಅವರಿಂದ. ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸುಭದ್ರವಾಗಲು ಅಂಬೇಡ್ಕರ್ ಅವರು ಸಂವಿಧಾನ ನೀಡಿದ್ದಾರೆ. ಅವರು ನೀಡಿದ ಸಂವಿಧಾನವು ನಮಗೆ ಪವಿತ್ರ ಗ್ರಂಥ ಎಂದು ಹೇಳಿದರು. ನಂತರ ಸಂವಿಧಾನದ ಸರ್ಪತಣಾ ದಿನದ ಅಂಗವಾಗಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಜೈಲಿನ ಅಧೀಕ್ಷಕ ಮಲ್ಲಿಕಾರ್ಜುನ ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈಲರ್ ತಮ್ಮಾಪುರ ಹಾಗೂ ಶಿಕ್ಷಕ ಸಿದ್ಧರಾಜು ಇದ್ದರು. ನಂತರ ಮೈಸೂರಿನ ಕವಿತಾ ಕಲಾ ತಂಡದ‌ ಭಾಗ್ಯಶ್ರೀ ಪಾಳಾ ಅವರು ''''''''ಕೌದಿ'''''''' ನಾಟಕವನ್ನು ಪ್ರಸ್ತುತಪಡಿಸಿದರು.