ಮಳೆಗೆ ಹಾನಿಗೊಳಗಾದ ಕದರಮಂಡಲಗಿಗೆ ನ್ಯಾಯಾಧೀಶರ ಭೇಟಿ

| Published : Aug 04 2024, 01:16 AM IST

ಮಳೆಗೆ ಹಾನಿಗೊಳಗಾದ ಕದರಮಂಡಲಗಿಗೆ ನ್ಯಾಯಾಧೀಶರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಯಿಂದ ಹಾನಿಗೊಳಗಾದ ತಾಲೂಕಿನ ಕದರಮಂಡಲಗಿ ಗ್ರಾಮಕ್ಕೆ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಿರಿಯ ದಿವಾಣಿ ನ್ಯಾಯಾಧೀಶ ಅಮೊಲ್‍ ಜೆ. ಹಿರಿಕುಡೆ ಹಾಗೂ ಸದಸ್ಯ ಕಾರ್ಯದರ್ಶಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬ್ಯಾಡಗಿ: ಮಳೆಯಿಂದ ಹಾನಿಗೊಳಗಾದ ತಾಲೂಕಿನ ಕದರಮಂಡಲಗಿ ಗ್ರಾಮಕ್ಕೆ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಿರಿಯ ದಿವಾಣಿ ನ್ಯಾಯಾಧೀಶ ಅಮೊಲ್‍ ಜೆ. ಹಿರಿಕುಡೆ ಹಾಗೂ ಸದಸ್ಯ ಕಾರ್ಯದರ್ಶಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ನ್ಯಾಯಾಧೀಶ ಅಮೋಲ್ ಜೆ. ಹಿರೇಕುಡೆ ಅತೀವೃಷ್ಟಿ ಎಂಬುದು ಗ್ರಾಮೀಣ ಪ್ರದೇಶಗಳಿಗೆ ಶಾಪವಿದ್ದಂತೆ ಸುಮಾರು 70 ವರ್ಷಕ್ಕೂ ಹೆಚ್ಚು ಹಳೆಯದಾದ ಮನೆಗಳಲ್ಲಿ (ಮಣ್ಣಿನ ಮಾಳಿಗೆ) ವಾಸ ಮಾಡುವುದು ಅತ್ಯಂತ ಅಪಾಯಕಾರಿ ಅಂಶವಾಗಿದೆ. ಅದರಲ್ಲೂ ಗಾಳಿ ಬೆಳಕು ಇಲ್ಲದ ಸಂದಿಗೊಂದಿಗಳಲ್ಲಿ ಇರುವಂತಹ ನಿವಾಸಿಗಳನ್ನು ಕೂಡಲೇ ಸುರಕ್ಷಿತ ಸ್ಥಳಗಳಿಗೆ ರವಾನಿಸುವಂತೆ ಸಲಹೆ ನೀಡಿದರು.

ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಮನುಷ್ಯನ ಜೀವದ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ವಹಿಸಬೇಕು ಘಟನೆಯಾದ ಬಳಿಕ ಪರಿಹಾರ ನೀಡುವುದಕ್ಕಿಂತ ಘಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ ಅವರು, ಅಪಾಯ ಎನಿಸುವ ಮನೆಗಳಲ್ಲಿ ವಾಸ ಮಾಡುತ್ತಿರುವ ವಯೋವೃದ್ಧರನ್ನು ಕೂಡಲೇ ಸ್ಥಳಾಂತರಿಸುವಂತೆ ಸೂಚಿಸಿದರು.

ತಹಸೀಲ್ದಾರ ಫಿರೋಜ್‍ಷಾ ಸೋಮನಕಟ್ಟಿ ಮಾತನಾಡಿ, ಕದರಮಂಡಲಗಿಯಲ್ಲಿ ಸಿದ್ಧಪ್ಪ ಯಲಿಗಾರ, ಹೊನ್ನವ್ವ ಹನುಮಂತಪ್ಪ ನಾಯ್ಕರ, ಮೀನಾಕ್ಷಿ ಲಿಂಗಾಚಾರ ಬಡಿಗೇರ, ಭರಮವ್ವ ಹೊನ್ನಪ್ಪ ಖಂಡೆಪ್ಪನವರ, ಆನಂದ ಬಸವರಾಜ ಪಾಟೀಲ, ಮಾದೇವಿ ಕಾಂತೇಶ ಸಿದ್ಧಣ್ಣನವರ, ಇವರುಗಳ ಮನೆಗಳು ಅತೀವೃಷ್ಟಿಯಿಂದ ಮನೆಗಳು ಬಿದ್ದಿದ್ದು ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕದರಮಂಡಲಗಿ ಸದಸ್ಯರು ಸಿಬ್ಬಂದಿಗಳು ಹಾಗೂ ಸಂತ್ರಸ್ಥರು ಉಪಸ್ಥಿತರಿದ್ದರು.

ಫೋಟೋ-03ಬಿವೈಡಿ6ಏ- ಅತೀವೃಷ್ಟಿ ಮಳೆಯಿಂದ ಹಾನಿಗೊಳಗಾದ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮಕ್ಕೆ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಿರಿಯ ದಿವಾಣಿ ನ್ಯಾಯಾಧೀಶ ಅಮೊಲ್‍ ಜೆ. ಹಿರಿಕುಡೆ ಹಾಗೂ ಸದಸ್ಯ ಕಾರ್ಯದರ್ಶಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಫೋಟೋ-03ಬಿವೈಡಿ6ಬಿ- ಬ್ಯಾಡಗಿ ಅತೀವೃಷ್ಟಿ ಮಳೆಯಿಂದ ಹಾನಿಗೊಳಗಾದ ತಾಲೂಕಿನ ಕದರಮಂಡಲಗಿ ಗ್ರಾಮಕ್ಕೆ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಿರಿಯ ದಿವಾಣಿ ನ್ಯಾಯಾಧೀಶರಾದ ಅಮೊಲ್‍ ಜೆ. ಹಿರಿಕುಡೆ ಹಾಗೂ ಸದಸ್ಯ ಕಾರ್ಯದರ್ಶಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.