ಸಾರಾಂಶ
ಆನಂದಪುರ: ಸಮೀಪದ ಆಚಾಪುರ ಗ್ರಾಮ ಪಂಚಾಯಿತಿಯ ತಂಗಳವಾಡಿ ಗ್ರಾಮದಲ್ಲಿ ಕಳೆದ ರಾತ್ರಿ ಕಾಡಾನೆಗಳು ಅಡಿಕೆ ತೋಟಕ್ಕೆ ನುಗ್ಗಿ ಅಡಿಕೆ ಮರಗಳನ್ನು ಧ್ವಂಸಗೊಳಿಸಿದ್ದು, ರೈತರಿರಲ್ಲಿ ಆತಂಕ ಉಂಟಾಗಿದೆ.
ಆನಂದಪುರ: ಸಮೀಪದ ಆಚಾಪುರ ಗ್ರಾಮ ಪಂಚಾಯಿತಿಯ ತಂಗಳವಾಡಿ ಗ್ರಾಮದಲ್ಲಿ ಕಳೆದ ರಾತ್ರಿ ಕಾಡಾನೆಗಳು ಅಡಿಕೆ ತೋಟಕ್ಕೆ ನುಗ್ಗಿ ಅಡಿಕೆ ಮರಗಳನ್ನು ಧ್ವಂಸಗೊಳಿಸಿದ್ದು, ರೈತರಿರಲ್ಲಿ ಆತಂಕ ಉಂಟಾಗಿದೆ.
ತಂಗಳವಾಡಿ ಗ್ರಾಮದ ಸಂಗಪ್ಪ ಗೌಡ್ರು ಎಂಬುವರ ಅಡಿಕೆ ತೋಟಕ್ಕೆ ನುಗಿದ ಕಾಡಾನೆಗಳು 15ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಮುರಿದು ಹಾಕಿವೆ. ಅಲ್ಲದೆ ಸ್ಥಳೀಯ ರೈತರಾದ ರಾಮಚಂದ್ರ, ಮೋಹನ ಎಂಬುವರ ಅಡಿಕೆ, ಬಾಳೆ, ಹಾಗೂ ಶುಂಠಿ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡಿವೆ. ಇದರಿಂದ ಅಧಿಕ ಬೆಳೆ ನಷ್ಟವಾಗಿದೆ. ಕಾಡಾನೆಗಳ ದಾಳಿಯಿಂದ ನಷ್ಟವಾದ ರೈತರ ಬೆಳೆಗೆ ರಾಜ್ಯ ಸರ್ಕಾರ ಪರಿಹಾರ ಕೊಡುವಂತೆ ಆಚಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರಕಾಶ್ ತಂಗಳಮಾಡಿ ಒತ್ತಾಯಿಸಿದ್ದಾರೆ.ಈ ಭಾಗದ ರೈತರು ಕಾಡು ಪ್ರಾಣಿಗಳ ಹಾವಳಿ ಇಲ್ಲದೆ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸಿದ್ದವು. ಆದರೆ ಮತ್ತೆ ಈ ಬಾರಿಯೂ ಕಾಡಾನೆಗಳು ಅಡಿಕೆ, ಬಾಳೆ ತೋಟಗಳಿಗೆ ನುಗ್ಗಿ ದಾಳಿ ಮಾಡುತ್ತಿದ್ದು, ರೈತರು ಬೆಳೆಯುವಂತಹ ಬೆಳೆಯನ್ನು ಕಾಡಾನೆಗಳಿಂದ ಸಂರಕ್ಷಿಸಿ ಕೊಳ್ಳುವುದು ಹೇಗೆ ಎಂಬ ಆತಂಕ ರೈತರಲ್ಲಿ ಉಂಟಾಗಿದೆ. ಚೋರಡಿ ಭಾಗದಿಂದ ಈ ಭಾಗಕ್ಕೆ ಬಂದಿರುವ ಆನೆಗಳನ್ನು ಅರಣ್ಯಕ್ಕೆ ಓಡಿಸುವ ಪ್ರಯತ್ನದಲ್ಲಿ ಅರಣ್ಯ ಇಲಾಖೆ ಮುಂದಾಗಿದೆ.