ಕಾಮನ್‌ ಪುಟಕ್ಕೆಪೊಲೀಸ್ ಇಲಾಖೆಗೆ ಗೃಹರಕ್ಷಕ ದಳ ಬೆನ್ನೆಲುಬು: ಡಾ.ಬಿ.ಎನ್. ನಂದಿನಿ

| Published : Mar 30 2024, 12:49 AM IST

ಕಾಮನ್‌ ಪುಟಕ್ಕೆಪೊಲೀಸ್ ಇಲಾಖೆಗೆ ಗೃಹರಕ್ಷಕ ದಳ ಬೆನ್ನೆಲುಬು: ಡಾ.ಬಿ.ಎನ್. ನಂದಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ನಿಶಾಮಕ ದಳ, ಸಿವಿಲ್ ಡಿಫೆನ್ಸ್ ಸರ್ವಿಸಸ್, ಗೃಹರಕ್ಷಕ ದಳವು ಮಹತ್ವದ ಕಾರ್ಯ ನಿರ್ವಹಿಸುತ್ತಿದೆ. ಪೊಲೀಸ್, ಗೃಹರಕ್ಷಕ ದಳ ಸೇರಿದಂತೆ ಎಲ್ಲಾ ಸೇವಾ ಘಟಕದವರು ಧರಿಸುವುದು ಖಾಕಿ ಸಮವಸ್ತ್ರವನ್ನೇ. ಇಲಾಖೆ ಯಾವುದೇ ಇರಲಿ, ವೈಯಕ್ತಿಕ ಹಾಗೂ ಇಲಾಖೆ ಗೌರವವು ನಮ್ಮ ಕಾರ್ಯ ನಿರ್ವಹಣೆಯನ್ನು ಅವಲಂಭಿಸಿರುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ಪೊಲೀಸ್ ಇಲಾಖೆಗೆ ಗೃಹರಕ್ಷಕ ದಳವು ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಸೂರಿನ ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ ತಿಳಿಸಿದರು.

ಮೈಸೂರಿನ ಜ್ಯೋತಿನಗರ ಡಿಎಆರ್ ಸಮುದಾಯ ಭವನದಲ್ಲಿ ಜಿಲ್ಲಾ ಗೃಹರಕ್ಷಕ ದಳವು ಶುಕ್ರವಾರ ಅಯೋಜಿಸಿದ್ದ ಗೃಹರಕ್ಷಕರ ಮೂಲ ತರಬೇತಿ ಶಿಬಿರದ 1ನೇ ಬ್ಯಾಚಿನ ಸಮಾರೋಪ ಹಾಗೂ 2ನೇ ಬ್ಯಾಚಿನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಗ್ನಿಶಾಮಕ ದಳ, ಸಿವಿಲ್ ಡಿಫೆನ್ಸ್ ಸರ್ವಿಸಸ್, ಗೃಹರಕ್ಷಕ ದಳವು ಮಹತ್ವದ ಕಾರ್ಯ ನಿರ್ವಹಿಸುತ್ತಿದೆ. ಪೊಲೀಸ್, ಗೃಹರಕ್ಷಕ ದಳ ಸೇರಿದಂತೆ ಎಲ್ಲಾ ಸೇವಾ ಘಟಕದವರು ಧರಿಸುವುದು ಖಾಕಿ ಸಮವಸ್ತ್ರವನ್ನೇ. ಇಲಾಖೆ ಯಾವುದೇ ಇರಲಿ, ವೈಯಕ್ತಿಕ ಹಾಗೂ ಇಲಾಖೆ ಗೌರವವು ನಮ್ಮ ಕಾರ್ಯ ನಿರ್ವಹಣೆಯನ್ನು ಅವಲಂಭಿಸಿರುತ್ತದೆ ಎಂದರು.

ಸಾರ್ವಜನಿಕ ಸೇವೆಯಲ್ಲಿ ಶಿಸ್ತು, ಸಭ್ಯತೆ ಹಾಗೂ ಸಮರ್ಪಣಾ ಮನೋಭಾವ ಬಹಳ ಮುಖ್ಯ. ಶ್ರದ್ಧೆಯಿಂದ ಕೆಲಸ ಮಾಡಿದಷ್ಟೂ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಸೇವೆಯಲ್ಲಿ ಆತ್ಮತೃಪ್ತಿ ಗಳಿಸಿಕೊಳ್ಳಬೇಕು. ಖಾಕಿ ಸಮವಸ್ತ್ರ ಧರಿಸಿದ ಕ್ಷಣದಿಂದ ಶಿಸ್ತು ಪಾಲನೆ ಬಹಳ ಮುಖ್ಯ. ನಡೆ- ನುಡಿಯನ್ನು ಜನ ಗಮನಿಸುತ್ತಾರೆ. ತುಂಬಾ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸಣ್ಣ ವ್ಯತ್ಯಾಸವಾದರೂ ಸಾಮಾಜಿಕ ಜಾಲತಾಣದ ಮೂಲಕ ದೊಡ್ಡದಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಎಚ್ಚರಿಸಿದರು.

ಯಾವುದೋ ಆಮಿಷ, ಸಣ್ಣಪುಟ್ಟ ವಿಚಾರಕ್ಕೆ ಒಳಗಾಗಬಾರದು. ನಾವು ಏನು ಮಾಡಿತ್ತೇವೆ ಎನ್ನುವುದನ್ನು ಎಲ್ಲರೂ ಗಮನಿಸುತ್ತಾರೆ. ನಿಮ್ಮ ಕುಟುಂಬ ಸಂತೋಷವೇ ಬೇರೆ. ಯೂನಿಫಾರ್ಮ್ ಹಾಕಿದ ಮೇಲೆ ನಮ್ಮ ವ್ಯಕ್ತಿ ಗೌರವ ಕಾಪಾಡಬೇಕು. ಸಕಾರಾತ್ಮಕ ಚಿಂತನೆ, ಒಳ್ಳೆಯ ಭಾವನೆಯಿಂದ ಇಲಾಖೆಗೆ ಒಳ್ಳೆ ಹೆಸರು ಬರುವಂತೆ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ನಮ್ಮ ಸಹೋದ್ಯೋಗಿ ಎಂದಷ್ಟೇ ಇರಬೇಕು. ಜಾತಿ, ಮತ ಮಧ್ಯೆ ಬರಬಾರದು. ಸಂವಿಧಾನದಡಿಯಲ್ಲಿ ನ್ಯಾಯ ಒದಗಿಸುವಂತೆ ಕೆಲಸ ಮಾಡಬೇಕು. ಜಾತಿ, ಧರ್ಮ ಸಮಾಜಕ್ಕೆ ಮಾರಕವಾಗುತ್ತದೆ. ಮಾನವೀಯತೆ, ದೃಢ ನಿರ್ಧಾರ, ಸಮಯ ಪ್ರಜ್ಞೆ, ಆತ್ಮ ವಿಶ್ವಾಸ ಇರಬೇಕು. ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುವ ಅವಕಾಶವೂ ಇದೆ. ನಿಮ್ಮ ಬಗ್ಗೆ ನಿಮಗೆ ಗೌರವ ಇರಲಿ. ಕಾರ್ಯ ನೈಪುಣ್ಯತೆ ಇಲಾಖೆ ಗೌರವ ಹೆಚ್ಚಲಿ ಎಂದು ಅವರು ತಿಳಿಸಿದರು.

ಸಾಹಿತಿ ಪ್ರೊ.ಎನ್.ಆರ್. ಶಿವರಾಂ, ಜಿಲ್ಲಾ ಗೃಹರಕ್ಷಕ ದಳದ ಗೌರವ ಸಮಾದೇಷ್ಟ ಡಾ.ಎಂ. ಕಾಂತರಾಜು, ಬೋಧಕ ಎಂ.ಆರ್. ಚಂದನ್, ಸಹಾಯಕ ಬೋಧಕ ಎಸ್. ಮಂಜುನಾಥ್, ಸಹಾಯಕ ಆಡಳಿತಾಧಿಕಾರಿ ಎಂ.ಎನ್. ವಿಶ್ವನಾಥ ಮೊದಲಾದವರು ಇದ್ದರು.