ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಂಡಿಎ ಆಯುಕ್ತ ದಿನೇಶ್ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.ಕೆ. ಮರೀಗೌಡ ಅವರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಹಾಗೂ ಉತ್ತನಹಳ್ಳಿ ತ್ರಿಪುರ ಸುಂದರಿ ದೇವಿಗೆ ಪತ್ನಿ ಜಯಶ್ರೀ ಅವರೊಂದಿಗೆ ಪೂಜೆ ಸಲ್ಲಿಸಿ ನಂತರ ಎಂಡಿಎನಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದರು.
ನನ್ನ ನೆಚ್ಚಿನ ನಾಯಕ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ, ಕೆ. ವೆಂಕಟೇಶ್ ಹಾಗೂ ಶಾಸಕರ ಸಹಕಾರದಿಂದ ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಕಳೆದ 40 ವರ್ಷಗಳ ರಾಜಕಾರಣದಲ್ಲಿ ಗ್ರಾಪಂನಿಂದ ಬಂದು ತಾಪಂ ಅಧ್ಯಕ್ಷನಾಗಿ, ಜಿಪಂ ಅಧ್ಯಕ್ಷನಾಗಿ, ಉಪಾಧ್ಯಕ್ಷನಾಗಿ, ಕೆಪಿಸಿಸಿ ಸದಸ್ಯನಾಗಿ ಸಿದ್ದರಾಮಯ್ಯ ಅವರು ಹಾಗೂ ಪಕ್ಷ ಹೇಳಿದಂತೆ ಇದುವರೆಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದರು.ಮೈಸೂರು ನಗರದ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರ ಕೊಡುಗೆ ಅಪಾರವಾಗಿದೆ. ಅದರಂತೆ ನಾನು ಕೂಡ ಎಂಡಿಎ ಅಧ್ಯಕ್ಷನಾಗಿ ಬಡವರಿಗೆ ಬೀದಿ, ಬದಿ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ, ಡ್ರೈವರ್ ಗಳಿಗೆ ಕೈಗೆಟುಕುವ ದರದಲ್ಲಿ ಸಾಮಾಜಿಕ ನ್ಯಾಯದಡಿ ಸುಮಾರು 25 ಸಾವಿರ ಮನೆ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದೇನೆ. ಈಗಾಗಲೇ ಎಂಡಿಎದಿಂದ ಜಾಗ ಗುರುತಿಸಿದ್ದಾರೆ. ಬಂಡಿಪಾಳ್ಯ ಎಪಿಎಂಸಿ ಬಳಿ ಹಾಗೂ ಮಣಿಪಾಲ್ ಆಸ್ಪತ್ರೆ ಬಳಿ ಮೇಲ್ಸೇತುವೆ ನಿರ್ಮಾಣ ಹಾಗೂ ಖಾಸಗಿ ಬಡಾವಣೆ ಹಾಗೂ ಎಂಡಿಎ ಬಡಾವಣೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದರೊಂದಿಗೆ, ನಗರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳವುದಾಗಿ ಅವರು ಭರವಸೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕೆ.ಎಸ್. ಶಿವರಾಂ, ಮಂಜುಳಾ ಮಾನಸ, ಜಿಪಂ ಮಾಜಿ ಸದಸ್ಯ ಪಟೇಲ್ ಜವರೇಗೌಡ, ಶಿವರಾಮ್, ಜವರಪ್ಪ, ಕೆ.ಬಿ. ಸ್ವಾಮಿ, ಕೂರ್ಗಳ್ಳಿ ಮಹದೇವ್, ಹೇಮಾವತಿ ಶಿವಕುಮಾರ್, ನಾರಾಯಣ, ಕಾಂಗ್ರೆಸ್ ಸೇವಾದಳ ಮಾಜಿ ಅಧ್ಯಕ್ಷ ಜಯರಾಮೇಗೌಡ, ನಗರ ಪಾಲಿಕೆ ಮಾಜಿ ಸದಸ್ಯರಾದ ಶಿವಣ್ಣ, ಬಿ.ಎಂ. ನಟರಾಜ್, ಗೋಪಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಹುಂಡಿ ರಘು, ಬಂಡಿಪಾಳ್ಯ ಬಸವರಾಜು, ಮೈದನಹಳ್ಳಿ ಶಿವಣ್ಣ, ತಾಪಂ ಮಾಜಿ ಸದಸ್ಯರಾದ ಮಾರ್ಬಳ್ಳಿ ಕುಮಾರ್, ಎಂ.ಟಿ. ರವಿಕುಮಾರ್, ಸಿ.ಎಂ. ಸಿದ್ದರಾಮೇಗೌಡ, ಜಿ.ಕೆ. ಬಸವಣ್ಣ, ಗ್ರಾಪಂ ಅಧ್ಯಕ್ಷೆ ನಾಗಮ್ಮ, ಗ್ರಾಪಂ ಮಾಜಿ ಅಧ್ಯಕ್ಷರಾದ ಭರತ್ ಕಾಳಯ್ಯ, ಉದ್ಬೂರು ಕೃಷ್ಣ, ಶಿವಣ್ಣ, ನಾಗವಾಲ ನರೇಂದ್ರ, ಮಾಕಿ ಮಹದೇವ್, ದೊಡ್ಡಹುಂಡಿ ಸೋಮಣ್ಣ, ಹಿನಕಲ್ ಹೊನ್ನಪ್ಪ, ಲಕ್ಷ್ಮಣ್ ಪ್ರಭು, ಕಾಮನಕೊಪ್ಪಲು ಕರೀಗೌಡ, ಮುಖಂಡರಾದ ಹರೀಶ್ ಮೊಗಣ್ಣ, ಜೆ.ಜೆ. ಆನಂದ, ಶಾಂತಯ್ಯ, ರವಿ, ಕೃಷ್ಣಕುಮಾರ್ ಸಾಗರ್, ಹಿನಕಲ್ ಪ್ರಕಾಶ್, ಸಣ್ಣಸ್ವಾಮಿ, ನಾಡನಗಹಳ್ಳಿ ರವಿ, ಶಿಂಶಾ ದಿನೇಶ್, ಧನಗಳ್ಳಿ ಬಸವರಾಜ್, ಅಕ್ಕಿ ಶಿವಣ್ಣ, ಓಲೆ ಸಿದ್ದು ಇದ್ದರು.