ಸಾರಾಂಶ
ಚುನಾವಣೆ ದಿನ ಮತದಾನವನ್ನೇ ಪೂಜೆ ಎಂದು ತಿಳಿದು ಮತ ಕೇಂದ್ರವನ್ನೇ ದೇವಸ್ಥಾನ ಎಂದು ಭಾವಿಸಿ ತಪ್ಪದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು. ಸಿದ್ದರಾಮಯ್ಯ ಅವರು ಇಡೀ ರಾಜಕೀಯ ಇತಿಹಾಸದಲ್ಲಿ ಯಾರು ಮಾಡಿರದ ಜನಪರ ಯೋಜನೆ ರೂಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬದ ಆರ್ಥಿಕ ಶಕ್ತಿ ಬಲಪಡಿಸಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಕೆ.ಆರ್. ಕ್ಷೇತ್ರದ ವಿವಿಧೆಡೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ಪರ ಮತಯಾಚಿಸಿದರು.ವಾರ್ಡ್ ನಂ. 60ರ ಸಿಲ್ಕ್‌ಫ್ಯಾಕ್ಟರಿ, ನೆಲ್ಲೂರು ಶೆಡ್, ರಾಜೀವ್‌ಗಾಂಧಿ ಕಾಲೋನಿ, ಅರುಂಧತಿ ಕಾಲೋನಿ, ಬುದ್ಧನಗರ ಬಡಾವಣೆಯಲ್ಲಿ ಸೋಮಶೇಖರ್‌ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಚುನಾವಣೆ ದಿನ ಮತದಾನವನ್ನೇ ಪೂಜೆ ಎಂದು ತಿಳಿದು ಮತ ಕೇಂದ್ರವನ್ನೇ ದೇವಸ್ಥಾನ ಎಂದು ಭಾವಿಸಿ ತಪ್ಪದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು. ಸಿದ್ದರಾಮಯ್ಯ ಅವರು ಇಡೀ ರಾಜಕೀಯ ಇತಿಹಾಸದಲ್ಲಿ ಯಾರು ಮಾಡಿರದ ಜನಪರ ಯೋಜನೆ ರೂಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬದ ಆರ್ಥಿಕ ಶಕ್ತಿ ಬಲಪಡಿಸಿದೆ ಎಂದರು.ಮಾಜಿ ಮೇಯರ್ ನಾರಾಯಣ್, ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ನಗರ ಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಶಿವಣ್ಣ, ಎರ್.ಎಚ್. ಕುಮಾರ್, ಆರ್. ದಾಸು, ಆರ್ಟಿಸ್ಟ್ ನಾಗರಾಜು, ನರಸಿಂಹ, ಹನುಮಯ್ಯ, ಶ್ರೀನಿವಾಸ, ಮಂಜು, ನಾಗರತ್ನ ಮಂಜುನಾಥ್ ಮೊದಲಾದವರು ಇದ್ದರು.