ಸಾರಾಂಶ
ಶಕ್ತಿ ದೇವತೆ ಎಂದೇ ಹೆಸರಾಗಿರುವ ತೋಪಮ್ಮ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಕೆ.ಆರ್.ನಗರ ಮತ್ತು ಸುತ್ತ ಮುತ್ತಲ ನೂರಾರು ಗ್ರಾಮಗಳ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹರಕೆ ತೀರಿಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ಆದಿಶಕ್ತಿ ತೋಪಮ್ಮ ತಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿಸಿ ದೇವಿಗೆ ಅಲಂಕಾರ ಮಾಡುವುದರ ಜತೆಗೆ ದೇವಸ್ಥಾನವನ್ನು ವಿವಿಧ ಬಗೆಯ ಪುಷ್ಪಗಳಿಂದ ಶೃಂಗರಿಸಲಾಗಿತ್ತು.
ಪಟ್ಟಣದ ಶಕ್ತಿ ದೇವತೆ ಎಂದೇ ಹೆಸರಾಗಿರುವ ತೋಪಮ್ಮ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಕೆ.ಆರ್.ನಗರ ಮತ್ತು ಸುತ್ತ ಮುತ್ತಲ ನೂರಾರು ಗ್ರಾಮಗಳ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹರಕೆ ತೀರಿಸಿದರು.ಶಾಸಕ ಡಿ. ರವಿಶಂಕರ್, ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಮತ್ತು ಇತರ ಚುನಾಯಿತ ಜನಪ್ರತಿನಿಧಿಗಳು ಹಾಗೂ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಹಿಂದಿನ ಬಾರಿಗೆ ಹೋಲಿಸಿದರೆ ಈ ಸಾರಿ ಆದಿಶಕ್ತಿ ತೋಪಮ್ಮ ದೇವಾಲಯದ 9 ಗ್ರಾಮಗಳ ಟ್ರಸ್ಟ್ನ ಆಡಳಿತ ಮಂಡಳಿಯವರು ವ್ಯವಸ್ಥಿತವಾಗಿ ಜಾತ್ರೆ ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.ಟ್ರಸ್ಟ್ ಗೌರವಾಧ್ಯಕ್ಷ ಅಣ್ಣಯ್ಯನಾಯಕ, ಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಕೆ.ಪಿ. ಜಗದೀಶ್, ಖಜಾಂಚಿ ಪರಶಿವಮೂರ್ತಿ, ನಿರ್ದೇಶಕರಾದ ಯೋಗೇಶ್, ನಂಜುಂಡ, ಮೋಟೇಗೌಡ, ಚನ್ನಬಸಪ್ಪ, ಜವರೇಗೌಡ, ಚನ್ನಕೇಶವ, ಆರ್.ಬಿ. ಮಹದೇವ ಇದ್ದರು.