ಕಬಡ್ಡಿ ಆರೋಗ್ಯಕರ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ

| Published : Nov 17 2025, 01:30 AM IST

ಕಬಡ್ಡಿ ಆರೋಗ್ಯಕರ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಮಾನವ ಕುಲದ ಆರೋಗ್ಯಕರ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯವಾದಿ ಮಾಲತೇಶ ಮಣಕೂರು ಹೇಳಿದರು.

ರಾಣಿಬೆನ್ನೂರು: ಭಾರತದ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಮಾನವ ಕುಲದ ಆರೋಗ್ಯಕರ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯವಾದಿ ಮಾಲತೇಶ ಮಣಕೂರು ಹೇಳಿದರು. ತಾಲೂಕಿನ ಕರೂರ ಗ್ರಾಮದಲ್ಲಿ ಸ್ಥಳೀಯ ಡಾ. ಪುನೀತ್ ರಾಜ್‌ಕುಮಾರ ಯುಥ್ ಕ್ಲಬ್ ಮತ್ತು ಜೀವಾ ಫ್ರೆಂಡ್ಸ ಗ್ರೂಪ್ ವತಿಯಿಂದ ಡಾ. ಪುನೀತ್‌ರಾಜ್ ಕುಮಾರ ಸ್ಮರಣಾರ್ಥ ಏರ್ಪಡಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ದೇಹವನ್ನು ಶಕ್ತಿಯನ್ನಾಗಿ ಸಕ್ರೀಯಗೊಳಿಸುವ ಜೊತೆಗೆ ಮಾನಸಿಕ ದೈಹಿಕವಾಗಿ ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಬಡ ಮಕ್ಕಳ ಮತ್ತು ವೃದ್ಧ ತಂದೆ ತಾಯಿಗಳ ಕಲ್ಯಾಣಕ್ಕಾಗಿ ಸದ್ದಿಲ್ಲದೇ ಶ್ರಮಿಸಿದ ನಟ ಪುನೀತ್ ರಾಜ್‌ಕುಮಾರ ಅವರ ಆದರ್ಶಗಳು ಯುವ ಜನಾಂಗಕ್ಕೆ ಸ್ಫೂರ್ತಿಯಾಗಿವೆ ಎಂದರು.ಪಂದ್ಯಾಟ ಉದ್ಘಾಟಿಸಿದ ನ್ಯಾಯವಾದಿ ನಾಗರಾಜ ಕುಡುಪಲಿ ಮಾತನಾಡಿ, ಅತ್ಯಂತ ರೋಮಾಂಚನಕಾರಿ ಆಟಗಳಲ್ಲಿ ಕಬಡ್ಡಿಯು ಒಂದಾಗಿದೆ. ಗೆಲ್ಲುವ ಶಕ್ತಿ ಮತ್ತು ತಂತ್ರ ಎರಡನ್ನೂ ಬಳಸಿ ಆಡುವ ಆಟವಾಗಿದೆ. ಬಿಡುವಿನ ವೇಳೆ ಕ್ರೀಡೆ ಆಡುವ ಹವ್ಯಾಸ ಬೆಳೆಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು, ಸೋತಾಗ ಅಂಜದೇ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಚೋಳಪ್ಪ ಕಚ್ಚರಬಿ, ಮಂಜಪ್ಪ ಅಗಡಿ, ಜಮಾಲಸಾಬ ತಾವರಗೊಂದಿ, ಕಲ್ಲೇಶ ಬ್ಯಾಡಗಿ, ಚಂದ್ರಶೇಖರ ಮುಡದೇವಣ್ಣನವರ, ಶಾಂತಪ್ಪ ಕೋಳಜಿ, ಹನುಮಂತಪ್ಪ ಕೊಳಜಿ, ನಾಗರಾಜ ಬಕ್ಕಜ್ಜಿ, ಗುರುರಾಜ್ ಡೊಳ್ಳೇರ, ಅಶೋಕಪ್ಪ ಪವಾರ, ಮಹೇಶ ಪೋರಮ್ಮನವರ, ಕಿರಣ ಕಚ್ಚರಬಿ, ಕಿರಣ ಬಾರ್ಕಿ, ಹೇಮಂತ ಬಾರ್ಕಿ, ಸುಲ್ತಾನ ದೊಡ್ಮನಿ, ರವಿ ಹರನಗಿರಿ, ಮಂಜುನಾಥ ಅಂತರವಳ್ಳಿ, ವಿನಾಯಕ ಅಂತರವಳ್ಳಿ, ಶರತ್ ಸೂರ್ವೆ, ರಾಜು ಕಚ್ಚರಬಿ, ಇಮ್ರಾನ್ ಮತ್ತಿತರರಿದ್ದರು. ಯಲ್ಲಪ್ಪ ಹಲವಾಗಲ, ಕುಮಾರ ಸಣ್ಣಬೊಮ್ಮಾಜಿ, ಪರಶುರಾಮ ಸೂರ್ವೆ, ಉಮ್ಮೇಶ ಪೊರಮ್ಮನವರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಫಲಿತಾಂಶದ ವಿವರ: ವೈಸಳ ನಲವಾಗಲ ತಂಡ ಪ್ರಥಮ, ಸೃಷ್ಠಿ ಕಬಡ್ಡಿ ತಂಡ ಕರೂರ ದ್ವಿತೀಯ ಡಿವಾಯ್‌ಇಎಸ್ ದಾವಣಗೆರೆ ತಂಡ ತೃತಿಯ, ಉತ್ತಮ ತಂಡ: ಜೀವಾ ಫ್ರೆಂಡ್ಸ ಗ್ರೂಪ್, ಉತ್ತಮ ಡಿಪೆಂಡರ್ : ಕಿರಣ ನರಸನಾಯ್ಕರ.