ಕಬಡ್ಡಿ ಪಂದ್ಯಾವಳಿ: ಆದಿಚುಂಚನಗಿರಿ ಕಾಲೇಜು ಪ್ರಥಮ

| Published : Apr 02 2024, 01:08 AM IST

ಸಾರಾಂಶ

ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ತಂಡದ ಆಟಗಾರರಾದ ಉತ್ತಮ್ ಡಿ ರಾಜ್, ಗಿರೀಶ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದರೆ, ಅದೇ ಕಾಲೇಜಿನ ಕರಣ್ ಗೌಡ, ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಹಾಸನ ವಿಜ್ಞಾನ ಕಾಲೇಜು ತಂಡದ ಪ್ರಜ್ವಲ್, ಉತ್ತಮ ದಾಳಿಗಾರ ಪ್ರಶಸ್ತಿ ಪಡೆದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಪಟ್ಟಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮೈಸೂರು ವಿಶ್ವವಿದ್ಯಾಲಯ ಮಲೆನಾಡು ವಲಯ ಅಂತರಕಾಲೇಜುಗಳ ಪುರುಷರ ವಿಭಾಗದ ಕಬಡ್ಡಿ ಟೂರ್ನಿಯಲ್ಲಿ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ತಂಡ ಪ್ರಥಮ ಸ್ಥಾನ ಗಳಿಸಿದೆ.

ಪಟ್ಟಣದ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಅಂತಿಮ ಪಂದ್ಯದಲ್ಲಿ ಆದಿಚುಂಚನಗಿರಿ ಕಾಲೇಜು ಕಬಡ್ಡಿ ತಂಡ ಎದುರಾಳಿ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು ತಂಡವನ್ನು ೨೧-೧೦ ಅಂಕಗಳಿಂದ ಪರಾಭವಗೊಳಿಸಿತು. ಹಾಸನದ ವಿಜ್ಞಾನ ಕಾಲೇಜು ತಂಡ ದ್ವಿತೀಯ ಸ್ಥಾನಗಳಿಸಿದರೆ, ಹೆತ್ತೂರು ಬಿಪಿನ್ ರಾವತ್ ಪ್ರಥಮ ದರ್ಜೆ ಕಾನ್ಸಿಟ್ಯೂಷನ್ ಕಾಲೇಜು ತಂಡ ತೃತೀಯ ಸ್ಥಾನಗಳಿಸಿತು.

ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ತಂಡದ ಆಟಗಾರರಾದ ಉತ್ತಮ್ ಡಿ ರಾಜ್, ಗಿರೀಶ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದರೆ, ಅದೇ ಕಾಲೇಜಿನ ಕರಣ್ ಗೌಡ, ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಹಾಸನ ವಿಜ್ಞಾನ ಕಾಲೇಜು ತಂಡದ ಪ್ರಜ್ವಲ್, ಉತ್ತಮ ದಾಳಿಗಾರ ಪ್ರಶಸ್ತಿ ಪಡೆದರು.

ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿ.ಮಹೇಶ್ ಬಹುಮಾನ ವಿತರಿಸಿದರು. ಕಾಲೇಜಿನ ಪಾಂಶುಪಾಲರು ಎಂ. ಕೆ. ಮಂಜುನಾಥ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪಿ. ಪ್ರಕಾಶ್‌ಕುಮಾರ್ ದೈಹಿಕ ಶಿಕ್ಷಣ ನಿರ್ದೇಶಕ ಜೈ ಬಾಸ್ಕರ, ತೀರ್ಪುಗಾರರಾದ ಚಿಕ್ಕೇಗೌಡ, ಮಂಜುಶೆಟ್ಟಿ, ರಾಘವೇಂದ್ರ, ನಂದೀಶ್ ಭಾಗವಹಿಸಿದ್ದರು.