ಕಬಡ್ಡಿ ಪಂದ್ಯಾವಳಿ ಗ್ರಾಮೀಣರನ್ನು ರಂಜಿಸುತ್ತಿದೆ: ಮಧು ಜಿ.ಮಾದೇಗೌಡ

| Published : Jan 18 2024, 02:03 AM IST

ಕಬಡ್ಡಿ ಪಂದ್ಯಾವಳಿ ಗ್ರಾಮೀಣರನ್ನು ರಂಜಿಸುತ್ತಿದೆ: ಮಧು ಜಿ.ಮಾದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಾಧನೆ ಎಂಬುದು ಮಾನವನ ಜೀವನದ ಸಾರ್ಥಕತೆಯ ಒಂದು ಭಾಗ. ಗ್ರಾಮೀಣ ಯವಕರು ಪರಿಶ್ರಮದ ಅಭ್ಯಾಸದೊಂದಿಗೆ ಕ್ರೀಡೆಯಲ್ಲಿ ತೊಡಗಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಮಂಡ್ಯ ಜಿಲ್ಲೆಯಲ್ಲಿ ಕಬಡ್ಡಿಯಲ್ಲಿ ಹಿಂದೆಯೂ ಬಹಳ ಜನಪ್ರೀಯ ಕ್ರೀಡೆಯಾಗಿ ಚಾಲ್ತಿಯಲ್ಲಿತ್ತು. ಯುವ ಜನರು ಕ್ರಿಕೆಟ್ ಸೇರಿದಂತೆ ಮತ್ತಿತರ ವಾಣಿಜ್ಯೀಕರಣ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಿರುವುದರಿಂದ ಕಬಡ್ಡಿ ಮೇಲಿನ ಆಸಕ್ತಿ ಕುಂದುತ್ತಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರಕಬಡ್ಡಿ ಪಂದ್ಯಾವಳಿ ಪುರಾತನ ಕಾಲದಿಂದಲೂ ಗ್ರಾಮೀಣರನ್ನು ರಂಜಿಸುತ್ತಿರುವ ಕ್ರೀಡೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ಚಂದೂಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಚಂದೂಪುರ ಜನಸ್ನೇಹಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಸಾಧನೆ ಎಂಬುದು ಮಾನವನ ಜೀವನದ ಸಾರ್ಥಕತೆಯ ಒಂದು ಭಾಗ. ಗ್ರಾಮೀಣ ಯವಕರು ಪರಿಶ್ರಮದ ಅಭ್ಯಾಸದೊಂದಿಗೆ ಕ್ರೀಡೆಯಲ್ಲಿ ತೊಡಗಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಎಂದರು.

ಕಬಡ್ಡಿ ಕ್ರೀಡೆ ಒಲಂಪಿಕ್‌ಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಯುವಕರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಪಟ್ಟಣ ಪ್ರದೇಶದವರಿಗಿಂತ ಯಾವುದಕ್ಕೂ ಕಡಿಮೆ ಇಲ್ಲವೆಂಬಂತೆ ತಮ್ಮ ಶಕ್ತಿ, ಸಾಮರ್ಥ್ಯ ಪ್ರದರ್ಶಿಸಬೇಕೆಂದು ಕರೆ ನೀಡಿದರು.

ಮಂಡ್ಯ ಜಿಲ್ಲೆಯಲ್ಲಿ ಕಬಡ್ಡಿಯಲ್ಲಿ ಹಿಂದೆಯೂ ಬಹಳ ಜನಪ್ರೀಯ ಕ್ರೀಡೆಯಾಗಿ ಚಾಲ್ತಿಯಲ್ಲಿತ್ತು. ಯುವ ಜನರು ಕ್ರಿಕೆಟ್ ಸೇರಿದಂತೆ ಮತ್ತಿತರ ವಾಣಿಜ್ಯೀಕರಣ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಿರುವುದರಿಂದ ಕಬಡ್ಡಿ ಮೇಲಿನ ಆಸಕ್ತಿ ಕುಂದುತ್ತಿದೆ ಎಂದು ವಿಷಾದಿಸಿದರು.

ಚಂದೂಪುರ ರೇಣುಕಾಶ್ರಮ ಮಠದ ಶ್ರೀಶಿವಲಿಂಗ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಕಬಡ್ಡಿ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ. ಯುವಕರು ಸನ್ಮಾರ್ಗದಲ್ಲಿ ನಡೆದು ಸಮಾಜಕ್ಕೆ ಮಾರರಕವಾಗದೆ ಉತ್ತಮ ಪ್ರಜೆಗಳಾಗಬೇಕೆಂದು ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ತಾಪಂ ಮಾಜಿ ಸದಸ್ಯ ಗಿರೀಶ್, ಮುಖಂಡರಾದ ಮದ್ದೂರು ಅವಿನಾಶ್, ಅಣ್ಣೂರು ಆರ್.ಸಿದ್ದಪ್ಪ, ಹಾಗಲಹಳ್ಳಿ ಬಸವರಾಜೇಗೌಡ, ಪುಟ್ಟಸ್ವಾಮಿಗೌಡ, ಕಾರ್ಕಹಳ್ಳಿ ಸ್ವರೂಪ್‌ಚಂದ್ರ, ಚಂದೂಪುರ ಡಿ.ಸುರೇಶ್, ಪುನೀತ್‌ಕುಮಾರ್, ಪುಟ್ಟಮಾದೇಗೌಡ, ಕೆಂಪೇಗೌಡ, ಪ್ರಭ, ಹೊಸೂರು ಅನೀಲ್, ಹೊಸಹಳ್ಳಿ ಮಲ್ಲೇಶ ಸೇರಿದಂತೆ ಚಂದೂಪುರ ಜನಸ್ನೇಹಿ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಮೈಸೂರು, ಮಂಡ್ಯ, ಹಾಸನ, ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ತುಮಕೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟು 42 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಕ್ರೀಡೆಯಲ್ಲಿ ವಿಜೇತರಾದ ಚಂದೂಪುರ ಜನಸ್ನೇಹಿ ಗೆಳೆಯರ ಬಳಗ ಪ್ರಥಮ 20 ಸಾವಿರ ರು. ನಗದು, ಎಸ್‌ಎಲ್‌ಎನ್ ಸಾತನೂರು ತಂಡ ದ್ವಿತೀಯ 15 ಸಾವಿರ ರು., ಚಂದೂಪುರ ಬಿ ಟೀಂ ತೃತೀಯ 10ಸಾವಿರ ನಗದು ಹಾಗೂ ತುಮಕೂರು ತಂಡಕ್ಕೆ ನಾಲ್ಕನೆ ಬಹುಮಾನ 5 ಸಾವಿರ ನಗದು ಹಾಗೂ ಎಲ್ಲರಿಗೂ ಪಾರಿತೋಷಕ ವಿತರಿಸಲಾಯಿತು.