ಸಮಾಜದ ಯಾರೊಬ್ಬರು ನಾಯಕ ಸಮಾಜದಲ್ಲಿ ಹುಟ್ಟಿದ್ದಕ್ಕೆ ಕೀಳಿರಿಮೆ ಬೆಳೆಸಿಕೊಳ್ಳದೇ ಇಂತಹ ಜನಾಂಗದಲ್ಲಿ ಜನಿಸಿರುವುದಕ್ಕೆ ಹೆಮ್ಮೆ ಪಡಬೇಕಿದೆ
ಕನ್ನಡಪ್ರಭ ವಾರ್ತೆ ಟಿ. ನರಸೀಪುರದೇಶದಲ್ಲಿ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನಾಯಕ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ ಎಂಬ ಬಗ್ಗೆ ಕೀಳಿರಿಮೆ ಬೆಳೆಸಿಕೊಳ್ಳದೇ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲುಮುಂದಾಗಬೇಕಿದೆ ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆಯ ಅಧ್ಯಕ್ಷ ದೇವರಾಜ್ ಟಿ. ಕಾಟೂರ್ ಹೇಳಿದರು.ಪಟ್ಟಣದ ಕಬಿಬಿ ಅತಿಥಿಗೃಹದಲ್ಲಿ ಬುಧವಾರ ತಾಲೂಕು ನಾಯಕ ಸೇನೆಯನ್ನು ತಾಲೂಕಿನಲ್ಲಿ ಬಲಪಡಿಸುವ ಸಂಬಂಧ ಪದಾಧಿಕಾರಿಗಳ ಆಯ್ಕೆಗಾಗಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.ನಮ್ಮ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರಬಹುದು ಆದರೆ ರಾಜ ಮಹಾರಾಜರಾಗಿ ಆಳ್ವಿಕೆ ಮಾಡುವ ಜೊತೆಗೆ ಸ್ವತಂತ್ರಕ್ಕಾಗಿ ಹೋರಾಟ ಮಾಡಿದ ಸಮಾಜವಾಗಿದೆ. ಹಾಗಾಗಿ ಸಮಾಜದ ಯಾರೊಬ್ಬರು ನಾಯಕ ಸಮಾಜದಲ್ಲಿ ಹುಟ್ಟಿದ್ದಕ್ಕೆ ಕೀಳಿರಿಮೆ ಬೆಳೆಸಿಕೊಳ್ಳದೇ ಇಂತಹ ಜನಾಂಗದಲ್ಲಿ ಜನಿಸಿರುವುದಕ್ಕೆ ಹೆಮ್ಮೆ ಪಡಬೇಕಿದೆ ಎಂದರು.ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಆತ್ಮ ಚರಿತ್ರೆ ಇರುತ್ತೆ,ಅದೇ ರೀತಿ ದೇಶದ ಆತ್ಮ ಚರಿತ್ರೆ ಎಂಬುದಿದ್ದರೇ ಅದು ವಾಲ್ಮೀಕಿ ರಾಮಾಯಣ, ಇಂದು ಪ್ರತಿಯೊಬ್ಬರ ಕುಟುಂಬದಲ್ಲಿ ವಾಲ್ಮೀಕಿ ರಾಮಾಯಣದ ಆದರ್ಶಗಳಿವೆ. ಎಲ್ಲರೂ ರಾಮನಆದರ್ಶಗಳನ್ನು ಪಾಲನೆ ಮಾಡುತ್ತಿದ್ದೇವೆ. ಅಣ್ಣ ತಮ್ಮಂದಿರು ಸೌಹಾರ್ದತೆಯಿಂದ ಇದ್ದಾರೆ ಎಂದರೆ ಅದು ವಾಲ್ಮೀಕಿ ಬರೆದ ರಾಮಾಯಣದಿಂದ ಮಾತ್ರ ಎಂದರು. ತಾಲೂಕುಘಟಕಕ್ಕೆ ಪಧಾದಿಕಾರಿಗಳ ಆಯ್ಕೆಇದೇ ವೇಳೆ ನಾಯಕ ಯುವ ಸೇನೆಯ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಡಣಾಯಕನಪುರ ಸಿದ್ದರಾಜು, ಉಪಾಧ್ಯಕ್ಷರಾಗಿ ತಲಕಾಡು ನಾಗರಾಜು, ಟಿ. ನರಸೀಪುರ ವಿಜಯ್, ಮಹಾ ಕಾರ್ಯದರ್ಶಿಯಾಗಿ ಆಲಗೂಡು ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಜೋಗಯ್ಯ, ಕಾರ್ಯದರ್ಶಿಗಳಾಗಿ ವ್ಯಾಸರಾಜಪುರ ಮಹೇಶ್, ಮಾಲಂಗಿ ಚಂದ್ರು, ಕೇತಹಳ್ಳಿ ಚಂದ್ರು, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್, ತಲಕಾಡು ಮಾದನಾಯ್ಕೆ, ಕೇತಹಳ್ಳಿ ಚೆಲುವರಾಜು ಹಾಗೂ ಕಾನೂನು ಸಲಹೆಗಾರರಾಗಿ ವಕೀಲ ಸುತ್ತೂರು ಶಾಂತನಾಗರಾಜ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್, ಸಿದ್ದರಾಜು, ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.ಯುವಸೇನೆಯ ಶಿವಶಂಕರ್, ಶಿವಕುಮಾರ್, ನಿವೃತ್ತ ಶಿಕ್ಷಕ ಬೆಟ್ಟಯ್ಯ, ವಾಸು, ಗೋವಿಂದರಾಜ್, ದರ್ಶನ್, ಮಲ್ಲಿಕಾರ್ಜುನ, ಮಂಜುನಾಥ, ನಾಗರಾಜು ಇದ್ದರು.