ಸಾರಾಂಶ
ಇಂದು ಬಡಾವಣೆಯ ರಸ್ತೆ ಮಳೆ ಬಂದರೆ ಕೆಸರು ಗೆದ್ದಯಾಗಿರುವ ಪರಿಸ್ಥಿತಿ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ಮಲ್ಕುಂಡಿ
ಕಾಡಂಚಿನ ಗ್ರಾಮವಾದ ಹೆಡಿಯಾಲ ಗ್ರಾಪಂ ವ್ಯಾಪ್ತಿಗೆ ಬರುವ ಮಹದೇವನಗರ ಗ್ರಾಮದ ರಸ್ತೆ ಕೆಸರು ಗದ್ದೆಯಾಂತಾಗಿ ತಿರುಗಾಡಲು ಹರಸಹಸ ಪಡುವಂತಾಗಿದೆ.ಹಿಂದೆ ಶಾಸಕರಾಗಿದ ದಿ. ಎಂ. ಮಹದೇವು ಅವರ ಸಂಧರ್ಭದಲ್ಲಿ ಚರಂಡಿ ರಸ್ತೆ ಸೇರಿದಂತೆ ಹೊಸ ಬಡಾವಣೆಯನ್ನು ನಿರ್ಮಿಸಿ ಸುಮಾರು 80 ಬಡ ಜನರಿಗೆ ಸೂರು ಕಲ್ಪಿಸಿ ಮಹದೇವನಗರ ಎಂದೇ ನಾಮಕರಣ ಮಾಡಲಾಯಿತು.
ಆದರೆ ಇಂದು ಬಡಾವಣೆಯ ರಸ್ತೆ ಮಳೆ ಬಂದರೆ ಕೆಸರು ಗೆದ್ದಯಾಗಿರುವ ಪರಿಸ್ಥಿತಿ ಉಂಟಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಮಕ್ಕಳು ಶಾಲೆಗೆ ಹೋಗಬೇಕಾದರೆ ಹರಸಾಹಸ ಪಡುವಂತಾಗಿದೆ ಮಕ್ಕಳು ರಸ್ತೆಯಲ್ಲಿ ಬರುವಾಗ ಅವರ ಕಾಲುಗೆ ಕೆಸರು ಮೆತ್ತಿಕೊಂಡು, ಸಮವಸ್ತ್ರವು ಬದಿಯಾಗಿ ಮಕ್ಕಳು ಶಾಲೆಗೆ ಹೋಗುವ ಪರಿಸ್ಥಿತಿ ಉಂಟಾಗಿದೆ.ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದೆ ಗಬ್ಬೆದು ನಾರುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿರುವುದು ವಿಪರ್ಯಾಸೆವಾಗಿದೆ.
ಚರಂಡಿಯಲ್ಲಿ ಕಸ ನಿಂತು ಕೊಳಚೆ ನೀರು ಸರಗವಾಗಿ ಹೋಗದೆ ಅಲ್ಲೇ ನಿಂತು ಗಬ್ಬೆದು ನಾರುತ್ತಿದೆ, ಇದ್ದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗ ರುಜುನುಗಳು ಹರಡುವ ಸಂಭವವಿದೆ. ಚರಂಡಿಯ ಕೊಳಚೆ ನೀರು ಕೆಲವಡೆ ರಸ್ತೆಗೆ ಸೇರಿದರೆ ಮತ್ತೊಂದಡೆ ಮನೆ ಸೇರುತ್ತದೆ, ಇದರಿಂದ ರೋಗ ಹರಡುವ ಭೀತಿ ಉಂಟಾಗಿದೆ.ಚರಂಡಿಯಲ್ಲಿ ಗಿಡಗಳು ಬೆಳೆಯುತ್ತಿದ್ದರೂ ಪಂಚಾಯಿತಿ ಅಧಿಕಾರಿಗಳು ಮಾತ್ರ ಇತ್ತ ಕ್ಯಾರೆ ಎನದಿರುವುದು ನಿವಾಸಿಗಳ ಜೀವದ ಜೊತೆ ಚೆಲ್ಲಾಟವಾಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಗ್ರಾಮದ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಮುಂದಾಗುವರೇ ಕಾದು ನೋಡಬೇಕಾಗಿದೆ.